ಅದ್ಧೂರಿಯಾಗಿ ನಡೆಯಿತು ಸಲ್ಮಾನ್ ಖಾನ್, ರಶ್ಮಿಕಾ ನಟನೆಯ ಸಿನಿಮಾ ಮುಹೂರ್ತ

ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಸಿಖಂದರ್’ (Sikandar) ಸಿನಿಮಾ ಮುಹೂರ್ತ ಕಾರ್ಯಕ್ರಮ ಇಂದು (ಜೂನ್ 27) ಮುಂಬೈನಲ್ಲಿ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮ ಫೋಟೋಗಳನ್ನು ನಿರ್ದೇಶಕ ಎ.ಆರ್ ಮುರುಗದಾಸ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಸಲ್ಮನ್ ಖಾನ್ (Salman Khan) ಮತ್ತು ರಶ್ಮಿಕಾ ಮುಹೂರ್ತ ಕಾರ್ಯಕ್ರಮಕ್ಕೆ ಹಾಜರಿ ಹಾಕಿರಲಿಲ್ಲ. ಆದರೆ ಚಿತ್ರತಂಡದ ಜೊತೆ ಖ್ಯಾತ ನಿರ್ದೇಶಕ ಅದ್ಧೂರಿಯಾಗಿ ಚಾಲನೆ ನೀಡಿದ್ದಾರೆ. ಸದ್ಯದಲ್ಲೇ ಶೂಟಿಂಗ್ ಶುರುವಾಗಲಿದ್ದು, ಮುಂದಿನ ವರ್ಷ ಈದ್ ಹಬ್ಬದಂದು ಸಿನಿಮಾ ರಿಲೀಸ್ ಆಗಲಿದೆ.‌ ಇದನ್ನೂ ಓದಿ:ವಾರಾಹಿ ದೀಕ್ಷೆ ಪಡೆದ ಡಿಸಿಎಂ ಪವನ್ ಕಲ್ಯಾಣ್


ಅಂದಹಾಗೆ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಬಹುಭಾಷಾ ನಟಿಯಾಗಿ ಬೇಡಿಕೆ ಹೆಚ್ಚಾಗಿದೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿಯಾಗಿದ್ದಾರೆ. ರಶ್ಮಿಕಾ ಹೀರೋಯಿನ್ ಆಗಿ ನಟಿಸಿರುವ ‘ಪುಷ್ಪ 2’ ಮತ್ತು ‘ಚಾವಾ’ ಒಂದೇ ದಿನ ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿದೆ.

ಆಗಸ್ಟ್ 15ರಂದು ಬಿಡುಗಡೆಯಾಗಬೇಕಿದ್ದ ‘ಪುಷ್ಪ 2’ ಸಿನಿಮಾ ಇದೀಗ ಡಿಸೆಂಬರ್ 6ಕ್ಕೆ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ಅದೇ ದಿನ ವಿಕ್ಕಿ ಕೌಶಲ್, ರಶ್ಮಿಕಾ ನಟನೆಯ ಚಾವಾ ಕೂಡ ರಿಲೀಸ್ ಆಗ್ತಿದೆ. ರಶ್ಮಿಕಾ ವರ್ಸಸ್ ರಶ್ಮಿಕಾ ಸಿನಿಮಾನೇ ಪೈಪೋಟಿಗಿಳಿದಿದೆ. ರಿಲೀಸ್ ಬಳಿಕ ಎರಡು ಸಿನಿಮಾ ಭವಿಷ್ಯ ನಿರ್ಧಾರವಾಗಲಿದೆ.

ಇನ್ನೂ ಅನಿಮಲ್ ಪಾರ್ಕ್, ಕುಬೇರ, ಸಿಖಂದರ್, ದಿ ಗರ್ಲ್‌ಫ್ರೆಂಡ್, ರೈನ್‌ಬೋ, ಪುಷ್ಪ 2, ಚಾವಾ ಸಿನಿಮಾಗಳು ರಶ್ಮಿಕಾ ಕೈಯಲ್ಲಿವೆ.