ಒಂದೇ ಒಂದು ಫೋನ್ ಕರೆಗೆ ಶೂಟಿಂಗ್ ಕ್ಯಾನ್ಸಲ್ ಮಾಡಿ ಮನೆಗೆ ಹೋದ ಸಲ್ಲು

ಮುಂಬೈ: ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್‍ಗೆ ಜೀವ ಬೆದರಿಕೆ ಬಂದಿದ್ದ ಹಿನ್ನೆಲೆಯಲ್ಲಿ ಚಿತ್ರೀಕರಣವನ್ನು ನಿಲ್ಲಿಸಿ ಪೊಲೀಸರ ರಕ್ಷಣೆ ಜೊತೆಗೆ ಮನೆಗೆ ಹೋಗಿದ್ದಾರೆ.

ಮುಂಬೈನ ಫಿಲ್ಮ್ ಸಿಟಿಯಲ್ಲಿ ಸಲ್ಮಾನ್ ಖಾನ್ `ರೇಸ್ 3′ ಸಿನಿಮಾದ ಚಿತ್ರೀಕರಣದಲ್ಲಿದ್ದರು. ಆದರೆ ಯಾರೋ ಸಲ್ಲುಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ಆದ್ದರಿಂದ ಈಗ ಸಿನಿಮಾದ ಶೂಟಿಂಗ್‍ನನ್ನು ಸ್ಥಗಿತಗೊಳಿಸಿ, ಪೊಲೀಸರ ರಕ್ಷಣೆಯಲ್ಲಿ ಬಾಂದ್ರಾದ ಮನೆಗೆ ಹೋಗಿದ್ದಾರೆ.

ರಾಜಾಸ್ಥಾನ ಮೂಲದ ಗ್ಯಾಂಗ್ ಸ್ಟರ್ ಗಳಿಂದ ಸಲ್ಲುಗೆ ಜೀವ ಬೆದರಿಕೆ ಕರೆ ಬಂದಿದೆ ಎಂದು ಸಲ್ಮಾನ್ ಖಾನ್ ಅವರ ತಂದೆ ಗುರುವಾರ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗಷ್ಟೇ ರಾಜಸ್ತಾನದ ನ್ಯಾಯಾಲಯಕ್ಕೆ ಕೃಷ್ಣಮೃಗ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಹಾಜರಾಗಿದ್ದರು. ಈ ವೇಳೆ ನ್ಯಾಯಾಲಯದ ಆವರಣದಲ್ಲೇ ರೌಡಿಯೊಬ್ಬ ಜೀವ ಬೆದರಿಕೆ ಹಾಕಿದ್ದನು.

ರೇಸ್-3 ಚಿತ್ರದ ಚಿತ್ರೀಕರಣದ ವೇಳೆ ಸಲ್ಮಾನ್ ಖಾನ್ ಹುಡುಕಿಕೊಂಡು ಸ್ಥಳಕ್ಕೆ ಕೆಲ ಅಪರಿಚಿತ ವ್ಯಕ್ತಿಗಳು ಬಂದಿದ್ದಾರೆ. ಅವರನ್ನು ಗಮನಿಸಿದ ಚಿತ್ರತಂಡ ತಕ್ಷಣ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಚಿತ್ರೀಕರಣದ ಸ್ಥಳಕ್ಕೆ ಭೇಟಿ ನೀಡಿ ಶೂಟಿಂಗ್ ಮುಂದಕ್ಕೆ ಹಾಕುವಂತೆ ತಿಳಿಸಿದ್ದು, ಪೊಲೀಸರ ನಿರ್ದೇಶನದ ಮೇರೆಗೆ ನಿರ್ಮಾಪಕ ರಮೇಶ್ ತೌರಾನಿಯವರು ಚಿತ್ರೀಕರಣವನ್ನು ಮುಂದೂಡಿದ್ದಾರೆ. ಪೊಲೀಸರೇ ಸಲ್ಮಾನ್ ಅವರನ್ನು ತಮ್ಮ ರಕ್ಷಣೆಯಲ್ಲೇ ಮುಂಬೈನ ಬಾಂದ್ರಾ ನಿವಾಸಕ್ಕೆ ಕರೆದೊಯ್ದಿದಿದ್ದು, ಸಲ್ಮಾನ್ ಅವರ ನಿವಾಸಕ್ಕೆ ಪೊಲೀಸರು ಭದ್ರತೆಯನ್ನು ಕಲ್ಪಿಸಿದ್ದಾರೆ ಎಂದು ತಿಳಿದುಬಂದಿದೆ.

ಖ್ಯಾತ ಕೊರಿಯೋಗ್ರಾಫರ್ ರೆಮೋ ಡಿಸೋಜಾ `ರೇಸ್-3′ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಲ್ಮಾನ್ ಜೊತೆ ಜಾಕ್ವೆಲಿನ್ ಫರ್ನಾಂಡೀಸ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಅನಿಲ್ ಕಪೂರ್, ಡೈಸಿ ಶಾ, ಬಾಬಿ ಡಿಯೋಲ್ ಸೇರಿದಂತೆ ಇತರರು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *