ಮಾಜಿ ಗೆಳತಿಗೆ ಭರ್ಜರಿ ಬರ್ತ್ ಡೇ ಗಿಫ್ಟ್ ಕೊಟ್ಟ ಸಲ್ಮಾನ್ ಖಾನ್

ನ್ಯೂಯಾರ್ಕ್: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ತಮ್ಮ ಮಾಜಿ ಗೆಳತಿ ಕತ್ರಿನಾ ಕೈಫ್ ಗೆ ಸಾರ್ವಜನಿಕವಾಗಿ ಸಿಹಿಮುತ್ತನ್ನು ನೀಡುವ ಮೂಲಕ ಭರ್ಜರಿ ಗಿಫ್ಟ್ ನೀಡಿದ್ದಾರೆ.

ನ್ಯೂಯಾರ್ಕ್‍ನಲ್ಲಿ ಬಾಲಿವುಡ್ ಐಫಾ ಪ್ರಶಸ್ತಿ ಸಮಾರಂಭ ನಡೆಯುತ್ತಿದ್ದು, ಈ ವೇಳೆ ಬಾಲಿವುಡ್ ತಾರಾಗಣವೇ ನ್ಯೂಯಾರ್ಕ್‍ನಲ್ಲಿ ಮಿಂಚುತ್ತಿದೆ. ಶನಿವಾರ ಸಂಜೆ ನ್ಯೂಯಾರ್ಕ್ ಸಿಟಿನಲ್ಲಿ ಐಫಾ ಅವಾರ್ಡ್ ಕಾರ್ಯಕ್ರಮ ನಡೆದಿದ್ದು, ಇಂದು ಕತ್ರಿನಾ ತಮ್ಮ 34ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಶನಿವಾರ ನಡೆದ ಕಾರ್ಯಕ್ರಮದ ಒಂದು ವೇದಿಕೆಯ ಮೇಲೆ ಶಾಹಿದ್ ಕಪೂರ್, ಆಲಿಯಾ ಭಟ್, ಸಲ್ಮಾನ್ ಖಾನ್, ಕತ್ರಿನಾ ಕೈಫ್, ಸುಶಾಂತ್ ಸಿಂಗ್ ರಜಪೂತ್ ಸೇರಿದಂತೆ ಮತ್ತಿತರು ಸಹ ಹಾಜರಿದ್ದರು. ಈ ವೇಳೆ ಎಲ್ಲರೂ ಕತ್ರಿನಾಳಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸುತ್ತಿದ್ದರು. ಸಲ್ಲು ಕೂಡ ನೇರವಾಗಿ ಹೋಗಿ ಕತ್ರಿನಾಳಿಗೆ ಕಿಸ್ ಕೊಟ್ಟು ವಿಶ್ ಮಾಡಿದ್ರು. ಕತ್ರಿನಾ ಮತ್ತು ಸಲ್ಮಾನ್ ಖಾನ್ `ಟೈಗರ್ ಜಿಂದಾ ಹೈ’ ಸಿನಿಮಾದಲ್ಲಿ ಇಬ್ಬರೂ ಜೊತೆಯಾಗಿ ನಟಿಸುತ್ತಿದ್ದಾರೆ. ಇದಕ್ಕೂ ಮುಂಚೆ ರಣ್‍ಬೀರ್ ಕಪೂರ್ ಕತ್ರಿನಾಗೆ ವಿಶೇಷವಾಗಿ ಕೇಕ್ ಕಟ್ ಮಾಡಿಸುವ ಮೂಲಕ ಮೊದಲ ಬರ್ತ್ ಡೇ ವಿಶ್ ಮಾಡಿದ್ರು.

ಇದನ್ನೂ ಓದಿ: ರಣ್‍ಬೀರ್ ಕಪೂರ್ ಮಾಜಿ ಗೆಳತಿ ಕತ್ರಿನಾಳಿಗೆ ಬರ್ತ್ ಡೇ ವಿಶ್ ಮಾಡಿದ್ದು ಹೀಗೆ… ವಿಡಿಯೋ ನೋಡಿ

https://www.instagram.com/p/BWcQgKnA8EC/?taken-by=katrinakaif

ಐಫಾ ಅವಾರ್ಡ್‍ನಲ್ಲಿ `ಉಡ್ತಾ ಹೈ ಪಂಜಾಬ್ ಚಿತ್ರದ ನಟನೆಗಾಗಿ ಶಾಹಿದ್ ಕಪೂರ್ ಮತ್ತು ಆಲಿಯಾ ಭಟ್ ಉತ್ತಮ ನಟ ಹಾಗು ನಟಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡ್ರು. ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದ್ದು, ಬಾಲಿವುಡ್ ಸ್ಟಾರ್‍ಗಳು ಈಗ ಭಾರತಕ್ಕೆ ಹಿಂದುರುಗುತ್ತಿದ್ದಾರೆ.

 

https://www.instagram.com/p/BWg2g1igCrk/?taken-by=katrinakaif

Comments

Leave a Reply

Your email address will not be published. Required fields are marked *