ಕೊನೆಗೂ ಮದುವೆಯಾಗದಿರಲು ಕಾರಣ ಹೇಳಿದ ಸಲ್ಮಾನ್!

ಮುಂಬೈ: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ 52 ವಯಸ್ಸಾದ್ರೂ ಇನ್ನು ಏಕೆ ಮದುವೆ ಆಗ್ತಿಲ್ಲ ಎಂಬ ಪ್ರಶ್ನೆಗೆ ಇಂದು ಉತ್ತರ ಸಿಕ್ಕಿದೆ.

ಸಲ್ಮಾನ್ ಎಲ್ಲಿಗೆ ಹೋದರೂ ಎಲ್ಲ ಮಾಧ್ಯಮದವಾರು ಹೆಚ್ಚು ಕೇಳುತ್ತಿದ್ದ ಪ್ರಶ್ನೆ ನೀವು ಯಾವಾಗ ಮದುವೆಯಾಗುತ್ತೀರಿ? ಎಂದು. ಆದ್ರೆ ಸಲ್ಮಾನ್ ಮಾತ್ರ ಮುಗಳ್ನಗೆಯನ್ನು ಕೊಟ್ಟು ಹೋಗುತ್ತಿದ್ದರು. ಇತ್ತೀಚೆಗೆ ಸುಲ್ತಾನ್ ತಾನು ಮದುವೆ ಆಗದಿರಲು ಕಾರಣ ಹೇಳಿದ್ದಾರೆ. `ಮದುವೆ ಎಂಬುದು ತುಂಬಾ ದೊಡ್ಡ ವಿಷಯ. ಮದುವೆಯಾಗಲು ಲಕ್ಷ, ಕೋಟಿಗಳಷ್ಟು ಹಣ ಬೇಕು, ಅದಕ್ಕೆ ನಾನು ಮದುವೆಯಾಗಿಲ್ಲ. ಅದಕ್ಕೆ ನಾನಿನ್ನು ಬ್ರಹ್ಮಚಾರಿ ಆಗಿದ್ದೇನೆ ಅಂತ ಹೇಳಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಸಲ್ಮಾನ್ ರೊಮೇನಿಯನ್ ನಟಿ ಮತ್ತು ಗಾಯಕಿಯಾಗಿರುವ ಲೂಲಿಯಾ ವ್ಯಾಂಟೂರ್ ಅವರೊಂದಿಗೆ ತಿರುಗಾಡುತ್ತಾರೆ ಎಂಬುದು ಕೂಡ ಬಾಲಿವುಡ್‍ನಲ್ಲಿ ಚರ್ಚೆಯ ವಿಷಯ. ಹಲವು ಬಾರಿ ಲೂಲಿಯಾ, ಸಲ್ಮಾನ್ ಮತ್ತು ಅವರ ಕುಟುಂಬಸ್ಥರೊಂದಿಗೆ ಕಾಣಿಸಿಕೊಂಡಿದ್ದಾರೆ. ಆದರೆ ಇದೀಗ ಇವರಿಬ್ಬರು ಜೊತೆಯಲ್ಲಿದ್ದರೂ ಮುಖ ಸಹ ನೋಡಿಕೊಳ್ತಿಲ್ಲ ಅಂತಾ ಗಾಸಿಪ್ ಹರಿದಾಡ್ತಾಯಿದೆ.

ಸಲ್ಮಾನ್ ಮದುವೆ ವಿಚಾರವಾಗಿಯೇ ಹೆಚ್ಚು ಚರ್ಚೆಯಲ್ಲಿದ್ದರೂ, ಈ ಹಿಂದೆ ತಮ್ಮ ಟ್ವಟ್ಟರ್ ನಲ್ಲಿ “ಮುಜೆ ಲಡ್ಕಿ ಮಿಲ್ ಗಯಿ (ನನಗೆ ಹುಡುಗಿ ಸಿಕ್ಕಿಬಿಟ್ಳು) ಎಂದು ಟ್ವೀಟ್ ಮಾಡಿದ್ದರು. ಇದು 1 ಗಂಟೆಯಲ್ಲೇ ವೈರಲ್ ಆಗಿತ್ತು. ಸಲ್ಮಾನ್ ಟ್ವೀಟ್ ಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿತ್ತು. ಆದರೆ ಸಹೋದರಿ ಅರ್ಪಿತಾ ಖಾನ್ ಪತಿ ಆಯುಷ್ ಶರ್ಮರವರ ಹೊಸ ಸಿನಿಮಾ “ಲವ್ ರಾತ್ರಿ” ಗೆ ನಾಯಕಿ ಸಿಕ್ಕಿರುವುದರ ಬಗ್ಗೆ ಹೇಳಿರುವುದಾಗಿ ಬಳಿಕ ತಿಳಿಸಿದರು.

ಈ ಹಿಂದೆ ಐಶ್ವರ್ಯ ರೈ ಜೊತೆ ಸಲ್ಮಾನ್ ಹೆಸರು ಕೇಳಿ ಬಂದಿತ್ತು. ಆದ್ರೆ ಹಲವು ಕಾರಣಗಳಿಂದ ಇವರಿಬ್ಬರ ಪ್ರೀತಿ ಮುರಿದು ಬಿದ್ದಿತ್ತು. ಮತ್ತೆ ಕತ್ರಿನಾ ಕೈಫ್ ಜೊತೆಯಲ್ಲಿಯೂ ಸಲ್ಮಾನ್ ಹೆಸರು ಬಲವಾಗಿ ಕೇಳಿಬಂದಿತ್ತು. ಇಬ್ಬರ ಬ್ರೇಕ್ ಅಪ್ ಬಳಿಕ ಸದ್ಯ ಲೂಲಿಯಾ ಹೆಸರು ತಳುಕು ಹಾಕಿಕೊಂಡಿದೆ. ಟೈಗರ್ ಜಿಂದಾ ಹೈ ಸಿನಿಮಾದ ನಂತರ ಕತ್ರಿನಾ ಮತ್ತು ಸಲ್ಮಾನ್ ಹತ್ತಿರವಾಗ್ತಿದ್ದಾರೆ ಎಂಬ ಸುದ್ದಿಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

Comments

Leave a Reply

Your email address will not be published. Required fields are marked *