ನಕ್ಸಲ್ ಪಾತ್ರದಲ್ಲಿ ಸಾಯಿ ಪಲ್ಲವಿ : ಇಂತಹ ಪಾತ್ರದಲ್ಲಿ ನಾವು ನೋಡಲಾರೆವು ಎಂದ ಫ್ಯಾನ್ಸ್

ರಾಣಾ ದಗ್ಗುಬಾಟಿ ನಾಯಕನಾಗಿ ನಟಿಸಿರುವ ‘ವಿರಾಟ ಪರ್ವಂ’ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ವಿಶೇಷ ಪಾತ್ರ ಮಾಡಿರುವ ಸಾಯಿ ಪಲ್ಲವಿ, ನಕ್ಸಲೈಟ್ ಹುಡುಗಿಯ ಪಾತ್ರವನ್ನು ಮಾಡಿದ್ದಾರೆ. ಟ್ರೇಲರ್ ನಲ್ಲಿ ಈ ಪಾತ್ರವನ್ನು ಹೈಲೆಟ್ ಮಾಡಿ ತೋರಿಸಿದ್ದು, ಪಲ್ಲವಿ ಫ್ಯಾನ್ಸ್ ಕಸಿವಿಸಿಗೊಂಡಿದ್ದಾರೆ. ಇದನ್ನು ಓದಿ : ಯಶ್ ಮುಂದಿನ ಸಿನಿಮಾ ನರ್ತನ್ ಜೊತೆ ಫಿಕ್ಸ್ : ಘೋಷಣೆಯೊಂದೇ ಬಾಕಿ

ರಾಣಾ ದಗ್ಗುಬಾಟಿ ಈ ಸಿನಿಮಾದ ಹೀರೋ ಆಗಿದ್ದರೂ, ಪಲ್ಲವಿ ಪಾತ್ರಕ್ಕೂ ಅಷ್ಟೇ ಮಹತ್ವ ನೀಡಲಾಗಿದೆಯಂತೆ. ಹಾಗಾಗಿ ಟ್ರೇಲರ್ ತುಂಬಾ ಸಾಯಿ ಪಲ್ಲವಿಯದ್ದೇ ಅಬ್ಬರ. ನಕ್ಸಲ್ ನಾಯಕನ ಪ್ರೀತಿಗೆ ಬಿದ್ದ ಹುಡುಗಿಯೊಬ್ಬಳು, ತಾನೂ ನಕ್ಸಲ್ ಆಗುವ ಕಥೆಯನ್ನು ಈ ಸಿನಿಮಾ ಹೊಂದಿದೆಯಂತೆ. ಹಾಗಾಗಿ ಇಂತಹ ಪಾತ್ರವನ್ನು ನೀವು ಮಾಡಬಾರದು ಎಂದು ಅಭಿಮಾನಿಗಳು ಮನವಿ ಮಾಡಿಕೊಂಡಿದ್ದಾರೆ. ಇನ್ನೂ ಓದಿ : ಪಠ್ಯ ಪುಸ್ತಕ ಪರಿಷ್ಕರಣೆ ಆಕ್ರೋಶ ಹೊರ ಹಾಕಿದ ನಟ ಚೇತನ್ : ಗಾಂಧಿ, ನೆಹರು ನಮ್ ವಿರೋಧಿಗಳು ಎಂದ ನಟ

ವಿಭಿನ್ನ ಪಾತ್ರಗಳ ಮೂಲಕವೇ ಈವರೆಗೂ ಗುರುತಿಸಿಕೊಂಡಿರುವ ಸಾಯಿ ಪಲ್ಲವಿ, ಅಭಿಮಾನಿಗಳ ಮಾತಿಗೆ ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ಕೊಟ್ಟಿಲ್ಲ. ಆದರೆ, ಟ್ರೇಲರ್ ಬಗ್ಗೆ ಮಾತನಾಡಿ, ಇದೊಂದು ಭರವಸೆ ತುಂಬುವಂತಹ ಚಿತ್ರ ಎಂದಿದ್ದಾರೆ. 1990ರಲ್ಲಿ ನಡೆದ ಕೆಲ ಸತ್ಯ ಘಟನೆಗಳನ್ನು ಈ ಸಿನಿಮಾಗಾಗಿ ಅಳವಡಿಸಿಕೊಂಡಿದ್ದಾರಂತೆ ನಿರ್ದೇಶಕರು. ಹಾಗಾಗಿ ವಿರಾಟ ಪರ್ವಂ ಸಿನಿಮಾ ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿದೆ ಎನ್ನುವ ನಂಬಿಕೆ ಅವರದ್ದು.

Comments

Leave a Reply

Your email address will not be published. Required fields are marked *