ಪ್ಯಾನ್ ಇಂಡಿಯಾ ಚಿತ್ರ ಘೋಷಿಸಿದ ಸಾಯಿ ಧರಮ್ ತೇಜ್ ಹೀರೋ

ಮೆಗಾಸ್ಟಾರ್ ಕುಟುಂಬದ ಮನೆ ಮಗ ಸಾಯಿ ಧರಮ್ ತೇಜ್ (Sai Dharam Tej) ಮತ್ತೆ ಸಿನಿಮಾದಲ್ಲಿ ಆಕ್ಟಿವ್ ಆಗಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಗೆ ಇದೀಗ ಸಾಯಿ ಧರಮ್ ತೇಜ್ ಹೀರೋ ಆಗಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ನಟ ಸಿಹಿಸುದ್ದಿ ಕೊಟ್ಟಿದ್ದಾರೆ. ಇದನ್ನೂ ಓದಿ:ಮತ್ತೆ ಒಂದಾಯ್ತು ಒಂದು ಮೊಟ್ಟೆಯ ಕಥೆ ಟೀಮ್- ‘ರೂಪಾಂತರ’ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ

ಈ ಪೋಸ್ಟರ್ ತುಂಬಾ ವಿಶೇಷವಾಗಿದೆ. ನಿಮ್ಮೆಲ್ಲರ ಆಶೀರ್ವಾದ ಬೇಕು ಎಂದು ಚಿತ್ರದ ಪೋಸ್ಟರ್ ಶೇರ್ ಮಾಡಿ ಸಾಯಿ ಧರಮ್ ತೇಜ್ ಬರೆದುಕೊಂಡಿದ್ದಾರೆ. ರೋಹಿತ್ ಕೆಪಿ ನಿರ್ದೇಶನ ಮಾಡಲಿದ್ದಾರೆ. ಬಹುಭಾಷೆಗಳಲ್ಲಿ ಮೂಡಿ ಬರಲಿರುವ ಈ ಚಿತ್ರಕ್ಕೆ ನಿರಂಜನ್ ರೆಡ್ಡಿ ನಿರ್ಮಾಣ ಮಾಡಲಿದ್ದಾರೆ. ಸದ್ಯಕ್ಕೆ ‘SDT 18’ ಟೈಟಲ್‌ನೊಂದಿಗೆ ಸಿನಿಮಾ ಶೂಟಿಂಗ್ ಶುರುವಾಗಿದೆ.

 

View this post on Instagram

 

A post shared by Sai DURGHA Tej (@jetpanja)

‘ವಿರೂಪಾಕ್ಷ’ ಸಿನಿಮಾ ಯಶಸ್ಸು ಕಂಡಿದೆ. ಈ ಸಿನಿಮಾದ ನಂತರ ಮತ್ತಷ್ಟು ಚಿತ್ರಗಳ ಅವಕಾಶಗಳು ಅರಸಿ ಬರುತ್ತಿವೆ.

2014ರಲ್ಲಿ ‘ಪಿಳ್ಳಾ ನುವು ಲೇನಿ ಜೀವಿತಂ’ ಚಿತ್ರದ ಮೂಲಕ ಸಾಯಿ ಧರಮ್ ತೇಜ್ ನಾಯಕನಾಗಿ ತೆಲುಗಿಗೆ ಎಂಟ್ರಿ ಕೊಟ್ಟಿರು. ಈ ಚಿತ್ರಕ್ಕೆ ಕನ್ನಡದ ಸೂರ್ಯಕಾಂತಿ ಚಿತ್ರದ ರೆಜಿನಾ ನಾಯಕಿಯಾಗಿದ್ದರು.