ಹಾಲಿವುಡ್ ಚಿತ್ರದಲ್ಲಿ ಸದ್ಗುರು ಜಗ್ಗಿ ವಾಸುದೇವ್

ಚಿತ್ರರಂಗದಲ್ಲಿ ಸದ್ಯ ಸದ್ದು ಮಾಡ್ತಿರೋದೇ ಇಂಡಿಯನ್ ಸಿನಿಮಾಗಳು. ಅದರಲ್ಲೂ ಹಾಲಿವುಡ್‌ನಲ್ಲಿ ಭಾರತದ ನಟ-ನಟಿಯರಿಗೆ ಭಾರೀ ಬೇಡಿಕೆ ಶುರುವಾಗಿದೆ. ಇದೆಲ್ಲದರ ನಡುವೆ ಭಾರತದ ಅಧ್ಯಾತ್ಮ ಗುರುಗಳಿಗೂ ಹಾಲಿವುಡ್‌ನಲ್ಲಿ ಡಿಮ್ಯಾಂಡ್ ಹೆಚ್ಚಾಗಿದೆ. ಹಾಲಿವುಡ್ ಸಿನಿಮಾದಲ್ಲಿ ಸದ್ಗುರು ಜಗ್ಗಿ ವಾಸುದೇವ್ (Sadhguru Jaggi Vasudev) ನಟಿಸಿದ್ದಾರೆ.‌ ಇದನ್ನೂ ಓದಿ:ಸಮಂತಾ ಡಿವೋರ್ಸ್‌ಗೆ ಆಪ್ತ ಸ್ನೇಹಿತೆನೇ ಕಾರಣನಾ?

ಹಾಲಿವುಡ್‌ನ (Hollywood) ಫೇಮಸ್ ಗಾಯಕಿ ಜನ್ನಿಫರ್ ಲೊಪೇಜ್ ಅವರು ‘ದಿಸ್ ಈಸ್ ಮಿ ನೌ: ಎ ಲವ್ ಸ್ಟೋರಿ’ ಮ್ಯೂಸಿಕ್ ಚಿತ್ರದಲ್ಲಿ ಇಶಾ ಫೌಂಡೇಶನ್‌ ರೂವಾರಿ ಸದ್ಗುರು ಜಗ್ಗಿ ವಾಸುದೇವ್ ಅತಿಥಿ ಪಾತ್ರ ಮಾಡಿದ್ದಾರೆ. ‘ರಾಶಿಚಕ್ರ ಕೌನ್ಸಿಲ್’ ಹೆಸರಿನ ಗುಂಪು ಪ್ರವೇಶ ಮಾಡುವ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಜೆನ್ನಿಫರ್ ಲೋಪೆಜ್ ಮತ್ತು ಆಕೆಯ ರಿಲೆಷನ್‌ಶಿಪ್‌ಗಳ ನಡುವಿನ ಸಮಸ್ಯೆಗಳು ಬಗ್ಗೆ ಚರ್ಚಿಸುವ ದೃಶ್ಯದಲ್ಲಿ ಸದ್ಗುರು ಪಾತ್ರ ನಿರ್ವಹಿಸಿದ್ದಾರೆ.

ಸಮಯವನ್ನು ಕಾಪಾಡುವ ದೇವರ ಸೇವಕರಲ್ಲಿ ಒಬ್ಬರಾಗಿ ಸದ್ಗುರು ನಟಿಸಿದ್ದಾರೆ. ಈ ಚಿತ್ರದಲ್ಲಿ ಹಲವು ಹಾಲಿವುಡ್ ಸ್ಟಾರ್‌ಗಳು ನಟಿಸಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಬಣ್ಣದ ಜಗತ್ತಿಗೆ ಹಾಲಿವುಡ್ ಚಿತ್ರದ ಮೂಲಕ ಸದ್ಗುರು ಪಾದಾರ್ಪಣೆ ಮಾಡಿದ್ದಾರೆ.

‘ದಿಸ್ ಈಸ್ ಮಿ ನೌ: ಎ ಲವ್ ಸ್ಟೋರಿ’ ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಫೆ.16ರಂದು ಈ ಚಿತ್ರ ಒಟಿಟಿಯಲ್ಲಿ ರಿಲೀಸ್ ಆಗಿದೆ.