ದಲಿತರ ಬಗ್ಗೆ ಮಾತನಾಡಿದ್ರೆ ಮುಂದಿನ ಚುನಾವಣೆಯಲ್ಲಿ ಬುದ್ಧಿ ಕಲಿಸಬೇಕಾಗುತ್ತೆ: ಮುನಿಸ್ವಾಮಿ

ಕೋಲಾರ : ದಲಿತರ ಬಗ್ಗೆ ಮಾತನಾಡಿದ್ರೆ ಮುಂದಿನ ಚುನಾವಣೆಯಲ್ಲಿ ಬುದ್ದಿ ಕಲಿಸಬೇಕಾಗುತ್ತೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕೋಲಾರ ಸಂಸದ ಎಸ್. ಮುನಿಸ್ವಾಮಿ ಟಾಂಗ್ ಕೊಟ್ಟಿದ್ದಾರೆ.

ಕೋಲಾರದ ಕೆಜಿಎಫ್ ತಾಲ್ಲೂಕಿನ ಕೋಟಿಲಿಂಗ ಕ್ಷೇತ್ರದಲ್ಲಿ ಮೋದಿ ಅವರ ಕೇದರನಾಥ್ ದೇವಾಲಯ ಉದ್ಘಾಟನೆ ಕಾರ್ಯಕ್ರಮ ನೇರಪ್ರಸಾರ ವೀಕ್ಷಣೆ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ಅಹಿಂದ ಕಟ್ಟಿದ್ದಾಗ ನಾವು ಸಹ ದಲಿತರು ನಿಮ್ಮ ಹಿಂದೆ ಇದ್ದೇವು, ನಿಮ್ಮ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಾಥ್ ನೀಡಿದ್ದೇವೆ. ಜೆಡಿಎಸ್‍ನಲ್ಲಿ ಕುಮಾರಸ್ವಾಮಿಯಿಂದ ಅಧಿಕಾರ ಸಿಗಲ್ಲ ಅನ್ನೋ ಕಾರಣಕ್ಕೆ ಕಾಂಗ್ರೇಸ್‍ಗೆ ಬಂದ್ರಿ, ಪುನರ್ಜನ್ಮ ಕೊಟ್ಟ ಕಾಂಗ್ರೇಸ್‍ನಲ್ಲಿ ಹಿರಿಯ ದಲಿತ ಮುಖಂಡರನ್ನ ತುಳಿದು ಸಿಎಂ ಅಗಿದ್ದು ನೀವು ಎಂದು ಕಿಡಿಕಾರಿದ್ದಾರೆ.

ಪರಮೇಶ್ವರ ಅವರನ್ನ ಸೋಲಿಸಿ ನೀವು ಸಿಎಂ ಅಗಿದ್ದು, ದಲಿತರು ಸಿಎಂ ಆಗೋದನ್ನ ತಪ್ಪಿಸಿದ್ದೇ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ರು. ಅಲ್ಲದೆ ಹಿರಿಯ ಮುಖಂಡರಾಗಿ ದಲಿತರ ಬಗ್ಗೆ ಮಾತನಾಡುವಾಗ ಹಗುರವಾಗಿ ಮಾತನಾಡಬೇಡಿ, ಮುಂದಿನ ಚುನಾವಣೆಯಲ್ಲಿ ನಾವೇನೆಂದು ತೋರಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ:  ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಿಂದ ಬೊಕ್ಕಸಕ್ಕೆ 2,100 ಕೋಟಿ ಆದಾಯ ನಷ್ಟ: ಸಿಎಂ

ಜೆಡಿಎಸ್ ತೊರೆದು ಕಾಂಗ್ರೆಸ್‍ಗೆ ಬಂದಿದ್ದು, ಹೊಟ್ಟೆ ಪಾಡಿಗಾ ಅಥವಾ ಅಧಿಕಾರ ದಾಹಕ್ಕ? ದಲಿತರು ಬಿಜೆಪಿಗೆ ಹೋಗಿರುವುದು ಹೊಟ್ಟೆ ಪಾಡಿಗಾಗಿ ವಿಚಾರಕ್ಕೆ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಎಸ್. ಮುನಿಸ್ವಾಮಿ, ದಲಿತರನ್ನ ಮೆಟ್ಟಿಲುಗಳಂತೆ ಉಪಯೋಗಿಸಿಕೊಂಡು ಸಿಎಂ ಆದವರು ನೀವು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೇರ ಟಾಂಗ್ ನೀಡಿದ್ದಾರೆ.

Comments

Leave a Reply

Your email address will not be published. Required fields are marked *