ಟಿ20 ಸರಣಿಯಿಂದ ಗಾಯಕ್ವಡ್ ಔಟ್ – ಕನ್ನಡಿಗನಿಗೆ ಒಲಿದ ಅದೃಷ್ಟ

ಧರ್ಮಶಾಲಾ: ಶ್ರೀಲಂಕಾ ವಿರುದ್ಧ ತವರಿನಲ್ಲಿ ನಡೆಯುತ್ತಿರುವ ಟಿ20 ಸರಣಿಯಿಂದ ಟೀಂ ಇಂಡಿಯಾದ ಯುವ ಆಟಗಾರ ಋತುರಾಜ್ ಗಾಯಕ್ವಡ್ ಹೊರ ನಡೆದಿದ್ದಾರೆ.

ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಿಂದ ಗಾಯಕ್ವಡ್ ಗಾಯದಿಂದ ಹೊರಗುಳಿದಿದ್ದರು. ಇದೀಗ ಪೂರ್ತಿ ಸರಣಿಯಿಂದ ಹೊರನಡೆದಿದ್ದಾರೆ. ಬಲಗೈ ಮಣಿಕಟ್ಟಿನ ಗಾಯಕ್ಕೆ ತುತ್ತಾಗಿರುವ ಗಾಯಕ್ವಡ್ ಚೇತರಿಸಿಕೊಳ್ಳಲು ಒಂದೆರಡು ವಾರಗಳು ಬೇಕಾಗಿದ್ದು, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‍ಸಿಎ)ಗೆ ತೆರಳಲಿದ್ದಾರೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಒಂದಂಕದ ರೋಚಕ ಜಯ – ಚೊಚ್ಚಲ ಬಾರಿ ಪ್ರೋ ಕಬಡ್ಡಿ ಚಾಂಪಿಯನ್ ಆದ ಡೆಲ್ಲಿ

ಗಾಯಕ್ವಡ್ ಹೊರನಡೆಯುತ್ತಿದ್ದಂತೆ ಕನ್ನಡಿಗ ಮಯಂಕ್ ಅರ್ಗವಾಲ್‍ಗೆ ಚಾನ್ಸ್ ಸಿಕ್ಕಿದೆ. ಗಾಯಕ್ವಡ್‌ಗೆ ಬದಲಿ ಆಟಗಾರನಾಗಿ ಆಯ್ಕೆ ಸಮಿತಿ ಅಗರ್ವಾಲ್‍ರನ್ನು ಆಯ್ಕೆ ಮಾಡಿದೆ. ಆದರೆ ಟೀಂ ಇಂಡಿಯಾದಲ್ಲಿ ಈಗಾಗಲೇ ಆರಂಭಿಕ ಆಟಗಾರರಾಗಿ ಮೊದಲ ಪಂದ್ಯದಲ್ಲಿ ಮಿಂಚು ಹರಿಸಿದ ಇಶನ್ ಕಿಶನ್ ಮುಂದಿನ ಎರಡು ಪಂದ್ಯಗಳಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಮಯಾಂಕ್‍ಗೆ ಆಡುವ ಹನ್ನೊಂದರ ಬಳಗದಲ್ಲಿ ಚಾನ್ಸ್ ಸಿಗುವುದು ಅನುಮಾನವಾಗಿದೆ. ಇದನ್ನೂ ಓದಿ: ಮಾರ್ಚ್ 26ಕ್ಕೆ ಐಪಿಎಲ್ ಆರಂಭ ಮೇ 29ಕ್ಕೆ ಫೈನಲ್ – 2 ನಗರಗಳಲ್ಲಿ 70 ಪಂದ್ಯ

ಈಗಾಗಲೇ ಮೊದಲ ಪಂದ್ಯವನ್ನು ಗೆದ್ದಿರುವ ಭಾರತ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಇಂದು ಧರ್ಮಶಾಲಾದಲ್ಲಿ ಎರಡನೇ ಟಿ20ನ ಪಂದ್ಯ ನಡೆಯಲಿದೆ.

Comments

Leave a Reply

Your email address will not be published. Required fields are marked *