ರಷ್ಯಾ ಸೈನಿಕರನ್ನು ಸೆರೆ ಹಿಡಿದು ಅರೆಬೆತ್ತಲೆಗೊಳಿಸಿ ಸಿಗರೇಟ್ ಸೇದಿಸಿದ ಉಕ್ರೇನ್ ಸೇನೆ

ಕೀವ್: ಉಕ್ರೇನ್ ವಿರುದ್ಧ ಯುದ್ಧ ಘೋಷಿಸರುವ ರಷ್ಯಾ 4ನೇ ದಿನವಾದ ಇಂದು ಕೂಡ ಹಲವು ದಾಳಿಗಳನ್ನು ನಡೆಸಿದೆ. ಇತ್ತ ಉಕ್ರೇನ್ ಸೈನಿಕರು ರಷ್ಯಾದ ಸೈನಿಕರನ್ನು ಹಿಡಿದು ಅರೆಬೆತ್ತಲೆಗೊಳಿಸಿ ಸಿಗರೇಟ್ ಸೇದಿಸಿದ್ದಾರೆ.

ರಷ್ಯಾ, ಉಕ್ರೇನ್‍ನ ರಾಜಧಾನಿ ಕೀವ್‍ಗೆ ನುಗ್ಗಲು ದಾರಿ ಹುಡುಕುತ್ತಿದೆ. ರಷ್ಯಾದ ಮಿಲಿಟರಿ ಪಡೆ ಈಗಾಗಲೇ ಉಕ್ರೇನ್‍ನ ಮಿಲಿಟರಿ ನೆಲೆಗಳು ಮತ್ತು ಇತರ ಸ್ಥಳಗಳ ಮೇಲೆ ಬಾಂಬ್ ಮತ್ತು ಕ್ಷಿಪಣಿ ದಾಳಿ ಮುಂದುವರಿಸಿದೆ. ಉಕ್ರೇನ್ ಕೂಡ ರಷ್ಯಾ ದಾಳಿಗೆ ಪ್ರತಿರೋಧ ಒಡ್ಡುತ್ತಿದೆ. ಇಂದು ಕೀವ್‍ಗೆ ಪ್ರವೇಶಿಸಲು ಪ್ರಯತ್ನಿಸಿದ ರಷ್ಯನ್ ಮೇಜರ್‌ಗೆ ಥಳಿಸಿ ಸಿಗರೇಟ್ ಸೇದುವಂತೆ ಉಕ್ರೇನ್ ಸೇನೆ ಒತ್ತಾಯಿಸಿದ ವೀಡಿಯೋ ಒಂದು ವೈರಲ್ ಆಗುತ್ತಿದೆ. ಇದನ್ನೂ ಓದಿ: ರಷ್ಯಾ ಸಶಸ್ತ್ರ ಪಡೆಗಳ ನಿಷ್ಕಲ್ಮಶ ಸೇವೆಗೆ ಪುಟಿನ್‌ ಧನ್ಯವಾದ

ರಷ್ಯನ್ ಮೇಜರ್‌ನ್ನು ಹಿಡಿದು ಥಳಿಸಿ ಬಳಿಕ ರಷ್ಯಾದ ಸೇನಾ ಸಮವಸ್ತ್ರವನ್ನು ತೆಗೆಸಿದೆ. ಬಳಿಕ ಸಿಗರೇಟ್ ಸೇದಿಸಿ ಬಂಧನದಲ್ಲಿಟ್ಟಿದೆ. ಈ ಮೂಲಕ ರಷ್ಯಾದ ದಾಳಿಗೆ ತೀವ್ರ ಪ್ರತಿರೋಧ ಒಡ್ಡುತ್ತಿರುವ ಉಕ್ರೇನ್ ಸೇನೆ ರಷ್ಯಾದೊಂದಿಗಿನ ಸಂಧಾನ ಆಹ್ವಾನವನ್ನು ತೀರಸ್ಕರಿಸಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ರಾಷ್ಟ್ರಗೀತೆ ಹಾಡಿದ ಉಕ್ರೇನ್ ಮಹಿಳೆಯ ವೀಡಿಯೋ ವೈರಲ್

Comments

Leave a Reply

Your email address will not be published. Required fields are marked *