ರಷ್ಯಾ ದಂಗೆ ಮಾತುಕತೆ ಮೂಲಕ ದಮನ – ಬೆಲಾರಸ್ ಅಧ್ಯಕ್ಷ ಮಧ್ಯಸ್ತಿಕೆಯಿಂದ ಮಾರ್ಗ ಮಧ್ಯೆಯೇ ಹೋರಾಟ ಕೈಬಿಟ್ಟ ಪ್ರಿಗೋಜಿನ್

ಮಾಸ್ಕೋ: ರಷ್ಯಾ (Russia) ದಂಗೆ ಮಾತುಕತೆ ಮೂಲಕವೇ ದಮನವಾಗಿದೆ. ಬೆಲಾರಸ್ ಅಧ್ಯಕ್ಷ ಲೂಕಶೆಂಕೋ ಮಧ್ಯಸ್ತಿಕೆ ಪರಿಣಾಮ ಮಾರ್ಗ ಮಧ್ಯೆಯೇ ಹೋರಾಟವನ್ನು ವ್ಯಾಗ್ನರ್ ಮುಖ್ಯಸ್ಥ ಪ್ರಿಗೋಜಿನ್ ಕೈ ಬಿಟ್ಟಿದ್ದಾನೆ.

ಮಾಸ್ಕೋ ಸನಿಹಕ್ಕೆ ಬಂದಿದ್ದ ವಾಗ್ನರ್‌ಗಳಿಗೆ (Wagner Private Army) ವಾಪಸ್ ಉಕ್ರೇನ್‌ಗೆ ಮರಳುವಂತೆ ಸೂಚಿಲಾಗಿದೆ. ದೇಶದ್ರೋಹದ ಶಿಕ್ಷೆಯಿಂದ ಪಾರು ಮಾಡುವ ಭರವಸೆಯನ್ನು ಬೆಲಾರಸ್ ಅಧ್ಯಕ್ಷ ನೀಡಿದ್ದಾರೆ. ಭಾರೀ ದಂಗೆ ಆಗಬಹುದು ಎಂಬ ಲೆಕ್ಕಾಚಾರದಲ್ಲಿ ರಷ್ಯಾ ಈಗ ನಿಟ್ಟುಸಿರು ಬಿಟ್ಟಿದೆ. ಇದನ್ನೂ ಓದಿ: ಪುಟಿನ್‌ಗೆ ಅಡುಗೆ ಭಟ್ಟನಾಗಿದ್ದ ಪ್ರಿಗೋಜಿನ್ – ರಷ್ಯಾ ಅಧ್ಯಕ್ಷನ ವಿರುದ್ಧವೇ ತಿರುಗಿ ಬಿದ್ದದ್ದು ಯಾಕೆ?

ಪುಟಿನ್‌ ಆಪ್ತ ಯೆವ್ಗೆನಿ ಪ್ರಿಗೋಜಿನ್ ನೇತೃತ್ವದ ವ್ಯಾಗ್ನರ್ ಖಾಸಗಿ ಸೈನ್ಯ ಮೊದಲು ರೋಸ್ಟೋವ್ ನಗರವನ್ನು ವಶಪಡಿಸಿಕೊಂಡಿತ್ತು. ನಂತರ ಮಾಸ್ಕೋದ ಹೆಚ್ಚಿನ ಭಾಗವನ್ನು ಆಕ್ರಮಿಸಿ ಮುಂದುವರಿದಿತ್ತು. ಹೆಚ್ಚಿನ ಅನಾಹುತ ತಪ್ಪಿಸಲು ಮಧ್ಯಪ್ರವೇಶಿಸಿದ ಬೆಲಾರಸ್‌ ಅಧ್ಯಕ್ಷ ಮಾತುಕತೆ ಮೂಲಕ ದಂಗೆ ಶಮನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕುರಿತು ಆಡಿಯೋ ಸಂದೇಶ ರವಾನಿಸಿರುವ ಪ್ರಿಗೋಜಿನ್‌, ರಕ್ತ ಚೆಲ್ಲುವ ಅಪಾಯದ ಕಾರಣ ಹೋರಾಟಗಾರರು ದಂಗೆ ನಿಲ್ಲಿಸಿ ಹಿಂತಿರುಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಉಕ್ರೇನ್‌ (Ukraine) ವಿರುದ್ಧ ದಾಳಿ ನಡೆಸುತ್ತಿರುವ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ (Vladimir Putin) ಆಪ್ತನೇ ರಷ್ಯಾ ಸೇನೆ ವಿರುದ್ಧ ಬಂಡಾಯ ಏಳುವ ಮೂಲಕ ಶಾಕ್‌ ನೀಡಿದ್ದ. ಯೆವ್ಗೆನಿ ಪ್ರಿಗೋಜಿನ್ (Yevgeny Prigozhin) ನಾಯಕತ್ವದ ಖಾಸಗಿ ಸೇನೆ ವ್ಯಾಗ್ನರ್ (Wagner) ರಷ್ಯಾ ಪಡೆಗಳ ವಿರುದ್ಧ ತಿರುಗಿಬಿದ್ದಿದ್ದು, ದಾಳಿಗೆ ಮುಂದಾಗಿತ್ತು. ಇದನ್ನೂ ಓದಿ: ಪುಟಿನ್‌ ಆಪ್ತ ಕೆಂಡ – ರಷ್ಯಾ ಸೈನಿಕರ ವಿರುದ್ಧವೇ ಖಾಸಗಿ ಸೇನೆಯಿಂದ ಬಂಡಾಯ