Russia Ukraine War – ಯಾವ ರಾಷ್ಟ್ರದ ಬೆಂಬಲ ಯಾರಿಗೆ?

ರಡನೇ ಜಾಗತಿಕ ಯುದ್ಧದ ಬಳಿಕ ನಡೆದ ಶೀತಲ ಸಮರದಲ್ಲಿ ಜಗತ್ತು ಎರಡು ಭಾಗಗಳಾಗಿ ವಿಭಜನೆಗೊಂಡಿತ್ತು. ಒಂದು ಗುಂಪಿಗೆ ಅಮೆರಿಕ ನಾಯಕತ್ವ ವಹಿಸಿದರೆ ಮತ್ತೊಂದಕ್ಕೆ ಸೋವಿಯತ್ ಯೂನಿಯನ್ ನಾಯಕತ್ವ ವಹಿಸಿತ್ತು. ಯುಎಸ್‍ಎಸ್‍ಆರ್‌ನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು 1949ರಲ್ಲಿ ಅಮೆರಿಕ, ಕೆನಡಾ ಸೇರಿ 12 ದೇಶಗಳು ನಾರ್ತ್ ಅಟ್ಲಾಂಟಿಕ್ ಟ್ರೀಟಿ(ನ್ಯಾಟೋ) ಆರಂಭಿಸಿದವು. ಸದ್ಯ ನ್ಯಾಟೋ ಸದಸ್ಯ ರಾಷ್ಟ್ರಗಳ ಸಂಖ್ಯೆ 30ಕ್ಕೆ ಏರಿಕೆಯಾಗಿದೆ.

ಈ ಪೈಕಿ ಯಾವುದೇ ದೇಶದ ಮೇಲೆ ದಾಳಿ ನಡೆದರೂ ಅದು ನನ್ನ ಸಂಸ್ಥೆ ಮೇಲಿನ ದಾಳಿ ಎಂದು ಭಾವಿಸಲಾಗುತ್ತದೆ ಎಂದು ಆರಂಭದಲ್ಲಿಯೇ ನ್ಯಾಟೋ ಘೋಷಿಸಿತ್ತು. ಆದರೆ 1991ರ ಡಿಸೆಂಬರ್‌ನಲ್ಲಿ ಯುಎಸ್‍ಎಸ್‍ಆರ್ ಛಿದ್ರವಾದಾಗ ಪರಿಸ್ಥಿತಿ ಬದಲಾಯಿತು. ಅಮೆರಿಕ ವಿಶ್ವದ ದೊಡ್ಡಣ್ಣನಾಗಿ ಅವತರಿಸಿತು.

ರಷ್ಯಾ ಪರ ದೇಶಗಳು
ಭಾರತ
ರಷ್ಯಾಗೆ ಬಹಿರಂಗವಾಗಿ ಬೆಂಬಲ ಘೋಷಿಸಿಲ್ಲ. ಆದರೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಷ್ಯಾದ ನಿಲುವನ್ನು ಖಂಡಿಸಿಲ್ಲ. ಉಕ್ರೇನ್ ಸಾರ್ವಭೌಮತ್ವದ ಬಗ್ಗೆ ಮಾತನಾಡಿಲ್ಲ. ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ ಎನ್ನುತ್ತಿದೆ. 2014ರಲ್ಲಿ ರಷ್ಯಾ ಕ್ರಿಮಿಯಾವನ್ನು ವಶಕ್ಕೆ ಪಡೆದಾಗಲೂ ಭಾರತ ವಿರೋಧಿಸಿರಲಿಲ್ಲ. ಭಾರತದ ಸ್ಥಿತಿ ಹೇಗಿದೆ ಎಂದರೆ ಅಮೆರಿಕ ಜೊತೆ ನಿಲ್ಲುತ್ತಿಲ್ಲ. ರಷ್ಯಾ ಜೊತೆಗೂ ಬಹಿರಂಗವಾಗಿ ಕೈಜೋಡಿಸುತ್ತಿಲ್ಲ. ಯಾರನ್ನು ಬಿಟ್ಟುಕೊಡುವ ಸ್ಥಿತಿಯಲ್ಲಿ ಭಾರತ ಇಲ್ಲ.  ಇದನ್ನೂ ಓದಿ: ಮೆಟ್ರೋ ಸುರಂಗದಲ್ಲಿ ಅವಿತಿದ್ದಾರೆ ಕನ್ನಡಿಗರು!

ಚೀನಾ
ನ್ಯಾಟೋ ವಿಸ್ತರಣೆ ಚೀನಾಗೂ ಇಷ್ಟವಿಲ್ಲ. ಇದನ್ನು ಬಹಿರಂಗವಾಗಿ ರಷ್ಯಾ ಜೊತೆ ಸೇರಿ ಘೋಷಿಸಿದೆ. ಈಗ ನಡೆಯುತ್ತಿರುವ ಯುದ್ಧವನ್ನು ಯುದ್ಧ ಎಂದೇ ಚೀನಾ ಪರಿಗಣಿಸಿಲ್ಲ.

ಪಾಕಿಸ್ತಾನ
ರಷ್ಯಾ ಪ್ರವಾಸದಲ್ಲಿ ಇಮ್ರಾನ್ ಇದ್ದಾರೆ. ಯುದ್ಧ ಶುರುವಾಗಿದ್ದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ. ಎಂಥಾ ಟೈಮಲ್ಲಿ ಬಂದಿದ್ದೇನೆ.. ಸಿಕ್ಕಾಪಟ್ಟೆ ಎಕ್ಸೈಟ್ ಆಗ್ತಿದೆ ಎಂದು ಇಮ್ರಾನ್ ಹೇಳಿದ್ದಾರೆ.

ಕ್ರೊವೇಷಿಯಾ
2009ರಲ್ಲಿಯೇ ನ್ಯಾಟೋವನ್ನು ಸೇರಿದೆ. ಆದರೆ ಗಡಿ ಭದ್ರತೆ ವಿಚಾರದಲ್ಲಿ ಕ್ರೊವೇಷಿಯಾ ರಷ್ಯಾ ಪರವಾಗಿದೆ. ಜೊತೆಗೆ ಮೊನ್ನೆ ವಿಶ್ವಸಂಸ್ಥೆಯಲ್ಲಿ, ಉಕ್ರೇನ್ ದೇಶವನ್ನು ಮೂರು ಭಾಗ ಮಾಡಿದ ರಷ್ಯಾ ನಿಲುವನ್ನು ಖಂಡಿಸಿದೆ.

ಅಜರ್‌ಬೈಜನ್‌
ಅಜರ್ ಬೈಜಾನ್ ಅಧ್ಯಕ್ಷರು ರಷ್ಯಾ ಪ್ರವಾಸದಲ್ಲಿದ್ದು, ರಷ್ಯಾದ ಎಲ್ಲಾ ಕ್ರಮಗಳಿಗೆ ಭೇಷರತ್ ಬೆಂಬಲ ನೀಡಿದೆ. ಇದನ್ನೂ ಓದಿ: ರಷ್ಯಾ ವಿರುದ್ಧ ಹೋರಾಡಲು ನಾಗರಿಕರಿಗೂ ಶಸ್ತ್ರಾಸ್ತ್ರ ನೀಡಿದ ಉಕ್ರೇನ್

ಉಕ್ರೇನ್ ಪರ ದೇಶಗಳು
ಅಮೆರಿಕ, ಬ್ರಿಟನ್, ಜರ್ಮನಿ, ಆಸ್ಟ್ರೇಲಿಯಾ, ಫ್ರಾನ್ಸ್, ರೋಮೆನಿಯಾ, ಬಲ್ಗೇರಿಯಾ, ಸ್ಲೋವೇಕಿಯಾ, ಲಾಟ್ವೀಯಾ, ಎಸ್ಟೋನಿಯಾ,ಲಿಥುವೇನಿಯಾ, ಆಲ್ಬೇನಿಯಾ

Comments

Leave a Reply

Your email address will not be published. Required fields are marked *