ಕಚ್ಚಾ ತೈಲಕ್ಕೆ ಜಿ7 ದೇಶಗಳಿಂದ ದರ ಮಿತಿ – ಭಾರತದ ನಿರ್ಧಾರವನ್ನು ಸ್ವಾಗತಿಸಿದ ರಷ್ಯಾ

ಮಾಸ್ಕೋ: ಜಿ7 ಮತ್ತು ಮಿತ್ರ ರಾಷ್ಟ್ರಗಳು ರಷ್ಯಾ(Russia) ಕಚ್ಚಾ ತೈಲ(Crude Oil) ಮೇಲೆ ವಿಧಿಸಿರುವ ದರ ಮಿತಿಯನ್ನು ಬೆಂಬಲಿಸದಿರುವ ಭಾರತದ(India ನಿರ್ಧಾರವನ್ನು ರಷ್ಯಾ ಸ್ವಾಗತಿಸಿದೆ.

ರಷ್ಯಾದ ಉಪ ಪ್ರಧಾನಿ ಅಲೆಕ್ಸಾಂಡರ್ ನೊವಾಕ್ ಅವರು ರಷ್ಯಾದಲ್ಲಿ ಭಾರತದ ರಾಯಭಾರಿ ಪವನ್ ಕಪೂರ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

ಜಿ7 ದೇಶಗಳು ಮತ್ತು ಮಿತ್ರರಾಷ್ಟ್ರಗಳು ವಿಧಿಸಿದ ರಷ್ಯಾದ ತೈಲದ ಮೇಲಿನ ಬೆಲೆ ಮಿತಿಯನ್ನು ಬೆಂಬಲಿಸದಿರುವ ಭಾರತದ ನಿರ್ಧಾರವನ್ನು ಉಪಪ್ರಧಾನಿ ಸ್ವಾಗತಿಸಿದ್ದಾರೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಪುಲ್ವಾಮಾದಲ್ಲಿ ಜೆಇಎಂ ಭಯೋತ್ಪಾದಕನ ಅಕ್ರಮ ಮನೆ ನೆಲಸಮ

ಕೆನಡಾ, ಫ್ರಾನ್ಸ್‌, ಜರ್ಮನಿ, ಇಟಲಿ, ಜಪಾನ್‌, ಯುನೈಟೆಡ್‌ ಕಿಂಗ್‌ಡಮ್‌, ಅಮೆರಿಕ, ಯುರೋಪಿಯನ್‌ ಯೂನಿಯನ್‌ ಜೊತೆ ಆಸ್ಟ್ರೇಲಿಯಾ ಒಂದು ಬ್ಯಾರೆಲ್‌ ರಷ್ಯಾದ ಕಚ್ಚಾ ತೈಲಕ್ಕೆ 60 ಡಾಲರ್‌(49 ಸಾವಿರ ರೂ.) ದರವನ್ನು ನಿಗದಿ ಮಾಡಿದೆ.

ತೈಲ ಮಾರಾಟದಿಂದ ಸಂಗ್ರಹವಾದ ಆದಾಯವನ್ನು ಉಕ್ರೇನ್‌ ಮೇಲಿನ ಯುದ್ಧಕ್ಕೆ ರಷ್ಯಾ ಬಳಸುತ್ತಿದೆ ಎಂದು ಆರೋಪಿಸಿ ಜಿ7 ದೇಶಗಳು ಈ ನಿರ್ಧಾರವನ್ನು ಕೈಗೊಂಡಿದ್ದು ಡಿ.5ರಿಂದ ಜಾರಿಗೆ ಬಂದಿದೆ.

ಕೇಂದ್ರ ಪೆಟ್ರೋಲಿಯಂ ಖಾತೆಯ ಸಚಿವ ಹರ್‌ದೀಪ್‌ ಸಿಂಗ್‌ ಪುರಿ, ಜಿ7 ರಾಷ್ಟ್ರಗಳ ನಿರ್ಧಾರ ಭಾರತದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಈ ಹಿಂದೆ ತಿಳಿಸಿದ್ದರು.

ನವೆಂಬರ್‌ನಲ್ಲಿಯೂ ರಷ್ಯಾ ಭಾರತದ ಪ್ರಮುಖ ಕಚ್ಚಾ ತೈಲ ಪೂರೈಕೆ ದೇಶವಾಗಿ ಗುರುತಿಸಿಕೊಂಡಿದೆ. ಅಕ್ಟೋಬರ್‌ನಲ್ಲಿ ದಿನಕ್ಕೆ ಸರಾಸರಿ 9,02,740 ಬ್ಯಾರಲ್‌ನಂತೆ ಕಚ್ಚಾ ತೈಲ ಪೂರೈಕೆ ಮಾಡಿದ್ದ ರಷ್ಯಾ ಇದೀಗ ನವೆಂಬರ್‌ನಲ್ಲಿ ದಿನಕ್ಕೆ ಸರಾಸರಿ 9,09,400 ಬ್ಯಾರಲ್‌ನಂತೆ ಕಚ್ಚಾ ತೈಲ ಪೂರೈಕೆ ಮಾಡಿದೆ. ಈ ಮೂಲಕ ಸತತ ಎರಡನೇ ತಿಂಗಳೂ ಭಾರತದ ಅತಿ ದೊಡ್ಡ ತೈಲ ಪೂರೈಕೆದಾರ ದೇಶವಾಗಿ ಮುಂದುವರಿದಿದೆ.

ಈ ಹಿಂದೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್(Jaishankar) ಅವರು, ರಷ್ಯಾದಿಂದ ಭಾರತ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದನ್ನು ಸಮರ್ಥಿಸಿಕೊಂಡು ಇದೊಂದು ʼಬೆಸ್ಟ್‌ ಡೀಲ್‌ʼ ಎಂದು ಬಣ್ಣಿಸಿದ್ದರು. ಬೆಲೆಗಳು ದುಬಾರಿಯಾಗಿರುವ ಸಮಯದಲ್ಲಿ ಪ್ರತಿಯೊಂದು ದೇಶವೂ ತನ್ನ ಪ್ರಜೆಗಳಿಗೆ ಸಾಧ್ಯವಾದಷ್ಟು ಕಡಿಮೆ ಬೆಲೆಯಲ್ಲಿ ತೈಲ ನೀಡಲು ಪ್ರಯತ್ನ ಮಾಡುತ್ತದೆ. ಈಗ ಅದನ್ನೇ ನಾವು ಮಾಡುತ್ತಿದ್ದೇವೆ ಎಂದು ಜೈಶಂಕರ್ ಸಮರ್ಥಿಸಿಕೊಂಡರು.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *