ಗೆಳತಿಗೆ ಪ್ರಪೋಸ್ ಮಾಡಿದ ಉಕ್ರೇನ್ ಯೋಧನ ಮನಕರಗುವ ವೀಡಿಯೋ

ಕೀವ್: ರಷ್ಯಾ ಉಕ್ರೇನ್ ಯುದ್ಧ ಪ್ರಾರಂಭವಾದಾಗಿನಿಂದ ಅಲ್ಲಿನ ಜನರು ಮುಂದಿನ ಭವಿಷ್ಯದ ಬಗ್ಗೆ ಯೋಚನೆಯೂ ಮಾಡಲಾರದಂತಹ ಸ್ಥಿತಿಗೆ ಬಂದಿದ್ದಾರೆ. ಹೀಗಿರುವಾಗ ಭೀಕರ ಯುದ್ಧದ ನಡುವೆಯೂ ಉಕ್ರೇನ್‌ನ ಯೋಧನೊಬ್ಬ ತನ್ನ ಗೆಳತಿಗೆ ಪ್ರಪೋಸ್ ಮಾಡುವ ವೀಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಯೋಧ ತನ್ನ ಗೆಳತಿಗೆ ಪ್ರಪೋಸ್ ಮಾಡುವ ಸಂದರ್ಭ ಎಂತಹವರ ಹೃದಯವನ್ನೂ ಕರಗಿಸುವಂತಿದೆ. ಈ ವೀಡಿಯೋ ಮೂಲಕ ಜೋಡಿ ಯುದ್ಧಕ್ಕಿಂತಲೂ ಪ್ರೀತಿ ಶಕ್ತಿಶಾಲಿ ಎಂಬುದನ್ನು ಸಾಬೀತುಪಡಿಸಿದ್ದಾರೆ.

ವೀಡಿಯೋದಲ್ಲಿ ಉಕ್ರೇನ್‌ನ ಚೆಕ್ ಪಾಯಿಂಟ್‌ನಲ್ಲಿ ಪಡೆಗಳು ಕಾರೊಂದನ್ನು ನಿಲ್ಲಿಸಿ, ಪ್ರಯಾಣಿಕರ ಮಾಹಿತಿಗಳನ್ನು ಪರಿಶೀಲಿಸುತ್ತಿರುತ್ತಾರೆ. ಈ ಸಂದರ್ಭದಲ್ಲಿ ಪ್ರಯಾಣಿಕರು ತಮ್ಮ ಕೈಗಳನ್ನು ಕಾರುಗಳ ಮೇಲೆ ಇಟ್ಟು ಪರಿಶೀಲನೆಗೆ ಅವಕಾಶ ನೀಡುತ್ತಿರುತ್ತಾರೆ. ಇದನ್ನೂ ಓದಿ: ರಷ್ಯಾ ತೈಲ ನಿಷೇಧ- ಅಮೆರಿಕ ಅಧ್ಯಕ್ಷರ ಫೋನ್‌ ಕರೆಗೂ ಕ್ಯಾರೆ ಎನ್ನದ ಸೌದಿ ಅರೇಬಿಯಾ, ಯುಎಇ

ಅಷ್ಟರಲ್ಲಿ ಯೋಧನೊಬ್ಬ ಪ್ರಯಾಣಿಕರೊಂದಿಗಿದ್ದ ಯುವತಿಯ ಹಿಂದುಗಡೆ ಮೊಣಕಾಲೂರಿ ಉಂಗುರವನ್ನು ನೀಡಲು ಮುಂದಾಗುತ್ತಾನೆ. ಇದರಿಂದ ಆಶ್ಚರ್ಯಕ್ಕೊಳಗಾದ ಯುವತಿ ಯೋಧ ನೀಡುವ ಉಂಗುರವನ್ನು ತೆಗೆದುಕೊಳ್ಳುತ್ತಾಳೆ. ಅವರಿಬ್ಬರೂ ನಿಜವಾಗಿ ಪ್ರೇಮಿಗಳೇ ಆಗಿರುತ್ತಾರೆ. ಅವರಿಬ್ಬರ ಪ್ರೀತಿಗೆ ಸ್ಥಳದಲ್ಲಿ ನೆರೆದಿದ್ದ ನೂರಾರು ಉಕ್ರೇನ್ ಯೋಧರೂ ಸಾಕ್ಷಿಯಾಗುತ್ತಾರೆ. ಇದನ್ನೂ ಓದಿ: ಉಕ್ರೇನ್‌ ಸರ್ಕಾರ ಉರುಳಿಸಲು ಯತ್ನಿಸಿಲ್ಲ: ರಷ್ಯಾ

ಈ ಅಪರೂಪದ ಸನ್ನಿವೇಶವನ್ನು ಅವರ ಸ್ನೇಹಿತರು ವೀಡಿಯೋ ರೆಕಾರ್ಡ್ ಮಾಡಿ ಸಾಮಾಜಿ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋವನ್ನು ಮಾರ್ಚ್ 7 ರಂದು ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ಪ್ರಸ್ತಾಪವನ್ನು ಸೋಲಿಸಲು ಕಷ್ಟ (Kinda hard to beat this proposal) ಎಂದು ವೀಡಿಯೋಗೆ ಕ್ಯಾಪ್ಶನ್ ನೀಡಲಾಗಿದೆ.

Comments

Leave a Reply

Your email address will not be published. Required fields are marked *