Russia-Ukraine War: ಉಕ್ರೇನ್ ಜೊತೆ ಮಾತುಕತೆಗೆ ಒಪ್ಪಿದ ರಷ್ಯಾ

ಮಾಸ್ಕೋ: ರಷ್ಯಾ ಉಕ್ರೇನ್ ನಡುವಿನ ಯುದ್ಧಕ್ಕೆ ಇತರ ರಾಷ್ಟ್ರಗಳ ವಿರೋಧದ ಬೆನ್ನಲ್ಲೆ ರಷ್ಯಾ ಉಕ್ರೇನ್ ಜೊತೆಗೆ ಮಾತುಕತೆಗೆ ನಾವು ಸಿದ್ಧ ಎಂದು ತಿಳಿಸಿದೆ ಎಂದು ಮೂಲಗಳಿಂದ ವರದಿಯಾಗಿದೆ.

ಉಕ್ರೇನ್ ಜೊತೆಗಿನ ಯುದ್ಧವನ್ನು ನಿಲ್ಲಿಸಲು ನಾವು ಸಿದ್ಧ, ಮಾತುಕತೆಗೆ ನಿಯೋಗ ಕಳುಹಿಸಲಿ ಎಂದು ರಷ್ಯಾ ತಿಳಿಸಿದೆ. ಈ ಬಗ್ಗೆ ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿರುವ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್, ನಾವು ಮಾತುಕತೆಗೆ ಸಿದ್ಧರಿದ್ದೇವೆ. ಉಕ್ರೇನ್ ಸೇನೆಯು ಹೋರಾಟವನ್ನು ನಿಲ್ಲಿಸಿದ ನಂತರ ಮಾತುಕತೆಗೆ ನಾವು ಬರುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ನವಜಾತ ಶಿಶುಗಳಿಗೂ ಯುದ್ಧದ ಬಿಸಿ – ಬಾಂಬ್ ಶೆಲ್ಟರ್‌ಗಳಲ್ಲಿ ಆಶ್ರಯ ಪಡೆದ ಹಾಲುಗಲ್ಲದ ಕಂದಮ್ಮಗಳು

ರಷ್ಯಾ ದಾಳಿ ನಡೆಸುತ್ತಿದ್ದಂತೆ ಉಕ್ರೇನ್ ಕೂಡ ಭಾರಿ ಪ್ರತಿರೋಧ ಒಡ್ಡಿದೆ. ಈಗಾಗಲೇ 1,000ಕ್ಕೂ ಹೆಚ್ಚು ರಷ್ಯಾ ಸೈನಿಕರನ್ನು ಹೊಡೆದುರುಳಿಸಿದೆ ಎಂದು ಉಕ್ರೇನ್ ತಿಳಿಸಿದೆ. ರಷ್ಯಾ ಸೇನೆ ತನ್ನ ದಾಳಿಯನ್ನು ಇನ್ನಷ್ಟು ಚುರುಕುಗೊಳಿಸಿದ್ದು ಉಕ್ರೇನ್ ರಾಜಧಾನಿ ಕೀವ್‍ನಿಂದ 7 ಕೀ.ಮೀ. ದೂರದಲ್ಲಿ ರಷ್ಯಾ ಸೇನೆ ಕೆಲವೇ ಗಂಟೆಗಳಲ್ಲಿ ಕೀವ್ ವಶಪಡಿಸಿಕೊಳ್ಳುವ ಸಾಧ್ಯತೆ ಇದೆ. ಇದನ್ನೂ ಓದಿ: Russia-Ukraine Crisis: 4 ಬಸ್‍ಗಳಲ್ಲಿ 240 ವಿದ್ಯಾರ್ಥಿಗಳು ರೊಮೇನಿಯಾಗೆ ಶಿಫ್ಟ್

ರಷ್ಯಾ, ಉಕ್ರೇನ್ ಮೇಲೆ ಕಳೆದ 40 ನಿಮಿಷಗಳಲ್ಲಿ ಕೀವ್‍ನಲ್ಲಿ ಅತಿ ಹೆಚ್ಚಿನ ದಾಳಿ ನಡೆಸಿದ್ದು, 40 ನಿಮಿಷ ಅಂತರದಲ್ಲಿ ಮೂರು ಡಜನ್‍ಗೂ ಅಧಿಕ ಕ್ಷಿಪಣಿಗಳನ್ನು ಹಾರಿಸಲಾಗಿದೆ. ಈ ಬಗ್ಗೆ ಯುಎಸ್ ಸೆನೆಟರ್ ರೂಬಿಯೊರಿಂದ ಮಾಹಿತಿ ಹೊರಬಿದ್ದಿದೆ. ಇತ್ತ ಖಾರ್ಕಿವ್ ಸಿಟಿಯಲ್ಲಿ ಮತ್ತೆ ಬಾಂಬ್ ಬ್ಲಾಸ್ಟ್ ಆರಂಭವಾಗಿದೆ. ಸೈರನ್ ಹಾಕಿ ಜನರನ್ನು ಅಂಡರ್ ಗ್ರೌಂಡ್‍ಗೆ ಹೋಗುವಂತೆ ಸೇನೆ ಕರೆ ನೀಡುತ್ತಿದೆ. ಇದನ್ನೂ ಓದಿ: Russia-Ukraine War: ಉಕ್ರೇನ್ ಯೂನಿಫಾರ್ಮ್ ಧರಿಸಿ ರಷ್ಯಾ ಸೈನಿಕರ ಎಂಟ್ರಿ – ಸಿಕ್ಕ ಸಿಕ್ಕಲ್ಲಿ ರಕ್ತಪಾತ

Comments

Leave a Reply

Your email address will not be published. Required fields are marked *