ಉಕ್ರೇನ್‍ನಲ್ಲಿ ಸಂಪರ್ಕಕ್ಕೆ ಸಿಗದ ಮುಂಡಗೋಡದ ವಿದ್ಯಾರ್ಥಿನಿ

ಕಾರವಾರ: ರಷ್ಯಾ-ಉಕ್ರೇನ್ ಯುದ್ದ ಪ್ರಾರಂಭವಾಗಿ ಇಂದಿಗೆ ಏಳು ದಿನಗಳಾಗಿದ್ದು, ಇದೀಗ ಹಾವೇರಿಯ ನವೀನ್ ಸಾವಿನ ನಂತರ ಉತ್ತರ ಕನ್ನಡ ಜಿಲ್ಲೆಯ ಇಬ್ಬರು ವೈದ್ಯಕೀಯ ವಿದ್ಯಾರ್ಥಿನಿಯರ ಜೀವಕ್ಕೆ ಕಂಟಕ ತಂದಿದೆ. ಓರ್ವ ವಿದ್ಯಾರ್ಥಿನಿಯೊಬ್ಬರು ಸಂಪರ್ಕಕ್ಕೆ ಸಿಗದೇ ಅವರ ಕುಟುಂಬ ವರ್ಗದಲ್ಲಿ ಆತಂಕ ಸೃಷ್ಟಿಯಾಗಿದೆ.

ಉತ್ತರ ಕನ್ನಡ ಜಿಲ್ಲೆಯ ನಾಲ್ಕುಜನ ವೈದ್ಯಕೀಯ ವಿದ್ಯಾರ್ಥಿಗಳು ಉಕ್ರೇನ್‍ನಲ್ಲಿ ಸಿಲುಕಿದ್ದು ಓರ್ವ ವಿದ್ಯಾರ್ಥಿ ಮರಳಿ ಭಾರತಕ್ಕೆ ಆಗಮಿಸಿದ್ದಾರೆ. ಬನವಾಸಿಯ ಇಮ್ರಾನ್, ಸ್ನೇಹಾ, ರೊಮೇನಿಯಾ ಗಡಿಯಲ್ಲಿ ಆರಾಮವಾಗಿದ್ದಾರೆ. ಆದರೇ ಖಾರ್ಕಿವ್ ನಲ್ಲಿ ಸಿಲುಕಿರುವ ಮುಂಡಗೋಡ ಮೂಲದ ನಾಝಿಯಾರಿಗೆ ಓನ್ ರಿಸ್ಕ್‍ನಲ್ಲಿ ರೊಮೇನಿಯಾಕ್ಕೆ ಬರುವಂತೆ ಕೇಂದ್ರ ಗೃಹ ಇಲಾಖೆ ಸೂಚನೆ ನೀಡಿತ್ತು. ಇದನ್ನೂ ಓದಿ: ರಷ್ಯಾದಲ್ಲಿ ಆನ್‍ಲೈನ್ ಮಾರಾಟ ಸ್ಥಗಿತಗೊಳಿಸಿದ ಆಪಲ್

ಸೂಚನೆಯ ಹಿನ್ನೆಯಲ್ಲಿ ಅನಿವಾರ್ಯವಾಗಿ ಯುದ್ಧ ನಡೆಯುತ್ತಿರುವ ಖಾರ್ಕಿವ್‍ನನ್ನು ತೊರೆದಿದ್ದಾರೆ. ಆದರೇ ಇದೀಗ ಇವರ ಸಂಪರ್ಕ ಕಡಿತವಾಗಿದ್ದು ಇವರ ಬಗ್ಗೆ ಕೇಂದ್ರ ಹಾಗೂ ಜಿಲ್ಲಾಡಳಿತಕ್ಕೆ ಯಾವುದೇ ಮಾಹಿತಿ ದೊರೆಯುತಿಲ್ಲ. ಸದ್ಯ ಅವರ ಕುಟುಂಬದ ಸಂಪರ್ಕದಲ್ಲಿ ಜಿಲ್ಲಾಡಳಿತ ಅಧಿಕಾರಿಗಳಿದ್ದು ಯಾವುದೇ ತೊಂದರೆಗಳಾಗದೇ ರೊಮೇನಿಯಾ ಗಡಿ ತಲುಪುತ್ತಾರೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಭಾರತ್‍ಪೇ ಎಂಡಿ ಸ್ಥಾನಕ್ಕೆ ಅಶ್ನೀರ್ ಗ್ರೋವರ್ ರಾಜೀನಾಮೆ

ಉತ್ತರ ಕನ್ನಡ ಜಿಲ್ಲೆಯ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದಾರೆ. ಆದರೇ ಖಾರ್ಕಿವ್‍ನಿಂದ ಹೊರಟ ನಾಝಿಯಾ ಈವರೆಗೂ ಸಂಪರ್ಕಕ್ಕೆ ಸಿಗದಿರುವುದು ಕುಟುಂಬ ವರ್ಗಕ್ಕೆ ಆತಂಕ ಎದುರಾಗುವಂತೆ ಮಾಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ತಮ್ಮ ಮಗಳನ್ನು ಸುರಕ್ಷಿತವಾಗಿ ಕರೆತರುವಂತೆ ಕುಟುಂಬವು ಮನವಿ ಮಾಡಿಕೊಂಡಿದೆ. ಕಾರವಾರದಲ್ಲಿ ಸಹ ಜನಶಕ್ತಿ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ತಮ್ಮ ಜಿಲ್ಲೆಯವರನ್ನು ಸುರಕ್ಷಿತವಾಗಿ ಕರೆತರುವಂತೆ ರಾಜ್ಯಪಾಲರಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದ್ದಾರೆ.

Comments

Leave a Reply

Your email address will not be published. Required fields are marked *