ಕೀವ್‍ನಲ್ಲಿ ಕರ್ಫ್ಯೂ ಜಾರಿ – ಖೇರ್ಸಾನ್ ಪ್ರಾಂತ್ಯವನ್ನು ನಿಯಂತ್ರಣಕ್ಕೆ ಪಡೆದ ರಷ್ಯಾ

ಕೀವ್: ಉಕ್ರೇನ್ ವಿರುದ್ಧ ಸತತ 20ನೇ ದಿನವೂ ರಷ್ಯಾ ಸೇನೆ ಯುದ್ಧ ಮುಂದುವರಿಸಿದೆ. ರಷ್ಯಾ ದಾಳಿಯಿಂದ ತತ್ತರಿಸಿರುವ ಕೀವ್‍ನಲ್ಲಿ ಕರ್ಫ್ಯೂ ವಿಧಿಸಲಾಗಿದ್ದು, ಇಡೀ ಖೇರ್ಸಾನ್ ಪ್ರಾಂತ್ಯವನ್ನು ರಷ್ಯಾ ಪಡೆಗಳು ನಿಯಂತ್ರಣಕ್ಕೆ ತೆಗೆದುಕೊಂಡಿವೆ.

ಕೀವ್ ನಗರದ ಜನವಸತಿ ಪ್ರದೇಶಗಳ ಮೇಲೆ ಬಾಂಬ್ ದಾಳಿ ಮುಂದುವರಿಸಿದೆ. ಕೀವ್ ಮೆಟ್ರೋ ಸ್ಟೇಷನ್ ಮೇಲೆಯೂ ದಾಳಿ ನಡೆಸಿದೆ. ಅಲ್ಲದೇ, ಉಕ್ರೇನ್‍ಗೆ ಶಸ್ತ್ರಾಸ್ತ್ರ ಪೂರೈಕೆ ಕಟ್ ಮಾಡುವ ಕಸರತ್ತನ್ನು ರಷ್ಯಾ ಆರಂಭಿಸಿದ್ದು, ಇದರ ಭಾಗವಾಗಿ ಡಿನಿಪ್ರೋ ಏರ್‌ಪೋರ್ಟ್‌ನ ರನ್‍ವೇಯನ್ನು ಹಾಳುಗೆಡವಿದೆ. ಕಳೆದ 24 ಗಂಟೆಯಲ್ಲಿ ಉಕ್ರೇನ್ ಸೇನೆ 13 ಡ್ರೋನ್, 16 ಸೈನಿಕ ವಿಮಾನಗಳನ್ನು ಹೊಡೆದುರುಳಿಸಿರುವುದಾಗಿ ರಷ್ಯಾ ಹೇಳಿಕೊಂಡಿದೆ. ಇದನ್ನೂ ಓದಿ: ಯುದ್ಧ ನಿಲ್ಲಿಸುವಂತೆ ಲೈವ್ ವೇಳೆ ಸೆಟ್‍ಗೆ ಓಡಿ ಬಂದ ಮಹಿಳೆ- ಉಕ್ರೇನ್ ಅಧ್ಯಕ್ಷ ಧನ್ಯವಾದ

ಉಕ್ರೇನ್ ಸೇನೆ ಕೂಡ ಪ್ರತಿ ದಾಳಿ ಸಂಘಟಿಸಿದ್ದು, ರಷ್ಯಾದ ನಾಲ್ಕು ಹೆಲಿಕಾಪ್ಟರ್ ಪತನ ಗೊಳಿಸಿದೆ. ರಷ್ಯಾದ ವಿರುದ್ಧ ನಾವು ಎಲ್ಲಾ ಕಡೆ ಮೇಲುಗೈ ಸಾಧಿಸ್ತಿದ್ದೇವೆ. ಸ್ವಾತಂತ್ರ್ಯ ಬೇಕು ಎಂದರೇ, ಒಂದಿಷ್ಟನ್ನು ಕಳೆದುಕೊಳ್ಳಲೇಬೇಕು. ಅದಕ್ಕಾಗಿಯೇ ನಮ್ಮ ಹೋರಾಟ ಎಂದು ಉಕ್ರೇನ್ ಹೋರಾಟವನ್ನು ಬಲ ಪಡಿಸಿಕೊಂಡಿದೆ. ಇದನ್ನೂ ಓದಿ: ರಷ್ಯಾಗೆ ಸಹಾಯ ಮಾಡದಂತೆ ಚೀನಾಗೆ ಅಮೆರಿಕ ವಾರ್ನಿಂಗ್

ಉಕ್ರೇನ್‍ಗೆ ನೈತಿಕ ಬೆಂಬಲ ನೀಡುವ ಸಲುವಾಗಿ ಪೋಲೆಂಡ್, ಝೇಕ್ ರಿಪಬ್ಲಿಕ್, ಸ್ಲೋವೇನಿಯಾ ಪ್ರಧಾನಿಗಳು ಶೀಘ್ರವೇ ಉಕ್ರೇನ್ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಮಧ್ಯೆ, ಅಮೆರಿಕಾದ ವ್ಯೋಮಗಾಮಿ ಈ ಮಾಸಾಂತ್ಯದಲ್ಲಿ ಅಂತಾರಾಷ್ಟ್ರೀಯ ಬಾಹ್ಯಕಾಶ ನಿಲ್ದಾಣದಿಂದ ರಷ್ಯಾದ ಸೂಯೆಜ್ ನೌಕೆಯಲ್ಲಿ ಭೂಮಿಗೆ ವಾಪಸ್ ಆಗಬೇಕಿದೆ. ಯುದ್ಧದ ಹಿನ್ನೆಲೆಯಲ್ಲಿ ರಷ್ಯಾ, ಅವರನ್ನು ಕರೆದುಕೊಂಡು ಬರುತ್ತೋ ಇಲ್ಲವೋ ಎಂಬ ಆತಂಕ ಆವರಿಸಿತ್ತು. ಆದರೆ ಹಾಗೇನು ಮಾಡಲ್ಲ. ಅವರನ್ನು ಅಲ್ಲಿಯೇ ಬಿಟ್ಟು ಬರಲ್ಲ. ನಾವು ಸುರಕ್ಷಿತವಾಗಿ ಭೂಮಿಗೆ ಕರೆದುಕೊಂಡು ಬರುತ್ತೇವೆ ಎಂದು ರೋಸ್ ಕಾಸ್ಮೋಸ್ ಸ್ಪಷ್ಟಪಡಿಸಿದೆ. ಉಕ್ರೇನ್‍ನಲ್ಲಿ ಖಾಸಗಿ ಮಾಧ್ಯಮವೊಂದರ ವರದಿಗಾರ ಬಾಂಬ್ ಬ್ಲಾಸ್ಟ್‌ಗೆ ಬಲಿಯಾಗಿದ್ದಾರೆ. ಈ ಮೂಲಕ ಯುದ್ಧದಲ್ಲಿ ಇಬ್ಬರೂ ಪತ್ರಕರ್ತರು ಸಾವನ್ನಪ್ಪಿದ್ದಾರೆ. ಉಕ್ರೇನ್‍ನಿಂದ  ಜನ ಮಹಾ ವಲಸೆ ಹೋಗುತ್ತಿದ್ದಾರೆ.

Comments

Leave a Reply

Your email address will not be published. Required fields are marked *