ಉಕ್ರೇನ್‌ನಲ್ಲಿ ಸಿಲುಕಿರುವ ಕಲಬುರಗಿಯ ಐವರು ವಿದ್ಯಾರ್ಥಿಗಳು

ಕಲಬುರಗಿ: ಉಕ್ರೇನ್ ಮತ್ತು ರಷ್ಯಾ ನಡುವೆಯ ಯುದ್ಧದ ಹಿನ್ನೆಲೆಯಲ್ಲಿ ಕಲಬುರಗಿಯ ನಾಲ್ಕು ವಿದ್ಯಾರ್ಥಿಗಳು ಸಿಲುಕಿರುವ ಮಾಹಿತಿ ಬಂದಿದೆ.

ಉಕ್ರೇನ ಕಾರ್ಕಿವ್‌ನಲ್ಲಿ ವಿದ್ಯಾರ್ಥಿಗಳಾದ ಮಲ್ಲಿನಾಥ, ಶಶಾಂಕ್ ಹಾಗೂ ಪ್ರಜ್ವಲ್ ಎಂಬ ಮೂರು ಜನ ವಿದ್ಯಾರ್ಥಿಗಳು ಎಂ.ಬಿ.ಬಿ.ಎಸ್. ವಿದ್ಯಾಬ್ಯಾಸ ಮಾಡುತ್ತಿದ್ದಾರೆ. ಅದೇ ರೀತಿ ಉಕ್ರೆನ್ ಕಿವ್‍ನಲ್ಲಿ ಇಬ್ಬರು ವಿದ್ಯಾರ್ಥಿಗಳು ಜೀವಿತಾ ಮತ್ತು ವಿದ್ಯಾಸಾಗರ ಎಂಬುವವರು ಸೇರಿದಂತೆ ಒಟ್ಟು ಐವರು ವಿದ್ಯಾರ್ಥಿಗಳು ಉಕ್ರೇನ್‍ನಲ್ಲಿ ಸಿಲುಕಿರುವ ಮಾಹಿತಿ ದೊರೆತಿದೆ. ಇದನ್ನೂ ಓದಿ: ನಾವು ಮಾತುಕತೆಗೆ ಸಿದ್ಧರಿದ್ದೇವೆ ಎಂದ ರಷ್ಯಾ!

ಕಾ‌ರ್ಮಿಕ್‌ನ  ಮೂರು ಜನ ವಿದ್ಯಾರ್ಥಿಗಳು ಇರುವ ಪ್ರದೇಶದ ಕೂಗಳತೆಯ ದೂರದಲ್ಲೆ ಬಾಂಬ್ ಸ್ಪೋಟವಾಗಿದ್ದು, ಬಾಂಬ್ ಸ್ಫೋಟ ಶಬ್ದಕ್ಕೆ ವಿದ್ಯಾರ್ಥಿಗಳು ಬೆಚ್ಚಿ ಬಿದ್ದಿದ್ದಾರೆ.  ಬಾಂಬ್ ಸ್ಫೋಟ ಶಬ್ದಕ್ಕೆ ಹಾಸ್ಟೆಲ್ ನಡುಗಿದ ಅನುಬವವಾಗಿದ್ದು, ಕಿಟಕಿ ಗಾಜುಗಳು ಬಿರುಕುಗೊಂಡು ಕೊಣೆಗಳು ಸಹ ನಡುಗಿದ ಅನುಭವವಾಗಿದೆ. ಇದನ್ನೂ ಓದಿ: Russia-Ukraine War: ಉಕ್ರೇನ್ ಯೂನಿಫಾರ್ಮ್ ಧರಿಸಿ ರಷ್ಯಾ ಸೈನಿಕರ ಎಂಟ್ರಿ – ಸಿಕ್ಕ ಸಿಕ್ಕಲ್ಲಿ ರಕ್ತಪಾತ

ಕರ್ನಾಟಕದ 40ಕ್ಕೂ ಅಧಿಕ ವಿದ್ಯಾರ್ಥಿಗಳು ಇರುವ ಹಾಸ್ಟೆಲ್ ಇದಾಗಿದ್ದು, ಹಾಸ್ಟೆಲ್ ನಡುಗಿದ ಬೆನ್ನಲ್ಲೇ ಆತಂಕದಲ್ಲಿರುವ ವಿದ್ಯಾರ್ಥಿಗಳ ಗಂಟು ಮೂಟೆ ಕಟ್ಟಿಸಿ, ಹಾಸ್ಟೆಲ್‍ನ ಅಂಡರ್ ಗ್ರೌಂಡ್‍ನಲ್ಲಿರುವ ಬಾಂಬ್ ಶೆಲ್ಟರ್‌ ಶಿಫ್ಟ್ ಮಾಡಲಾಗಿದೆ.

Comments

Leave a Reply

Your email address will not be published. Required fields are marked *