ರಷ್ಯಾ ಉಕ್ರೇನ್ ಬಿಕ್ಕಟ್ಟು ಚಿತ್ರೀಕರಣಕ್ಕೆ ಮುಂದಾದ ಹಾಲಿವುಡ್ ಸ್ಟಾರ್

ಕೀವ್: ಯುದ್ಧ ವಿರೋಧಿ ಮತ್ತು ಮಾನವೀಯ ಕಾರಣಗಳಿಗಾಗಿ ಸದಾ ಮಿಡಿಯುವ ಹಾಲಿವುಡ್ ತಾರೆ, ಆಸ್ಕರ್ ಪ್ರಶಸ್ತಿ ವಿಜೇತ ಸೀನ್ ಪೆನ್ ಉಕ್ರೇನ್‍ನಲ್ಲಿ ನಡೆಯುತ್ತಿರುವ ರಷ್ಯಾದ ಆಕ್ರಮಣದ ಕುರಿತು ಸಾಕ್ಷ್ಯ ಚಿತ್ರ ಮಾಡಲು ಮುಂದಾಗಿದ್ದಾರೆ.

ಉಕ್ರೇನ್‍ನ ಸರ್ಕಾರಿ ಅಧಿಕಾರಿಗಳು ತಮ್ಮ ನೆಲದಲ್ಲಿ ನಡೆಯುತ್ತಿರುವ ಪ್ರಸ್ತುತ ಬಿಕ್ಕಟ್ಟಿನ ಕುರಿತು ಮಾತನಾಡುತ್ತಿದ್ದ ಪತ್ರಿಕಾಗೋಷ್ಠಿಯಲ್ಲೀ ಸೀನ್ ಭಾಗಿಯಾಗಿದ್ದರು. ಸಾಕ್ಷ್ಯ ಚಿತ್ರಕ್ಕೆ ಬೇಕಾದ ವಿವರಗಳನ್ನು ಅವರು ಪತ್ರಿಕಾಗೋಷ್ಠಿಯಲ್ಲಿ ಆಲಿಸುತ್ತಿದ್ದರು. ಈ ಸಾಕ್ಷ್ಯ ಚಿತ್ರವು ಡಾಕ್ ವೈಸ್ ವಲ್ರ್ಡ್ ನ್ಯೂಸ್ ಮತ್ತು ಎಂಡೀವರ್ ಕಂಟೆಂಟ್‍ನ ಸಹಯೋಗದೊಂದಿಗೆ ವೈಸ್ ಸ್ಟುಡಿಯೋಸ್ ಅಡಿಯಲ್ಲಿ ನಿರ್ಮಾಣವಾಗಲಿದೆ. ಇದನ್ನೂ ಓದಿ:  ರಷ್ಯಾ ದಾಳಿಯಿಂದ ರಕ್ಷಿಸಿಕೊಳ್ಳಲು ಭೂಗತ ಹ್ಯಾಕರ್‌ಗೆ ಉಕ್ರೇನ್ ಕರೆ!

ಈ ಮೊದಲೇ ಸೀನ್ ಸಾಕ್ಷ್ಯ ಚಿತ್ರಕ್ಕಾಗಿ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದಾರೆ. ಕೊನೆಯದಾಗಿ ನವೆಂಬರ್ 2021ರಲ್ಲಿ ಉಕ್ರೇನ್‍ಗೆ ಭೇಟಿ ನೀಡಿದ್ದ ಅವರು, ಈ ವೇಳೆ ಉಕ್ರೇನ್ ದೇಶದ ಮಿಲಿಟರಿ ಪ್ರತಿಷ್ಟಾನಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದರು ಎಂದು ವರದಿಯಾಗಿದೆ. ಅಲ್ಲದೇ, ಪೆನ್ ಅವರು ಉಕ್ರೇನಿಯನ್ ರಾಯಭಾರ ಕಚೇರಿಗೆ ಭೇಟಿ ನೀಡಿದ್ದರು. ಉಕ್ರೇನಿಯನ್ ಉಪ ಪ್ರಧಾನಿ ಐರಿನಾ ವೆರೆಶ್‍ಚುಕ್ ಜೊತೆಗೆ ಸ್ಥಳೀಯ ಪತ್ರಕರ್ತರು ಮತ್ತು ಉಕ್ರೇನಿಯನ್ ಮಿಲಿಟರಿಯ ಸದಸ್ಯರೊಂದಿಗೆ ಅವರು ಮಾತನಾಡಿ ಸಾಕಷ್ಟು ವಿಷಯ ಸಂಗ್ರಹಿಸಿದ್ದಾರೆ ಎನ್ನಲಾಗುತ್ತಿದೆ.  ಇದನ್ನೂ ಓದಿ:  ಉಕ್ರೇನ್‍ನಲ್ಲಿ ಸಿಲುಕಿದ್ದಾರೆ 10 ಮಂದಿ ಕರ್ನಾಟಕ ವಿದ್ಯಾರ್ಥಿಗಳು!

ಉಕ್ರೇನಿಯನ್ ರಾಯಭಾರ ಕಚೇರಿಯು ಈ ಚಲನಚಿತ್ರ ನಿರ್ಮಾಪಕರನ್ನು ಶ್ಲಾಘಿಸಿ ಹೇಳಿಕೆ ನೀಡಿದ್ದು, ಉಕ್ರೇನ್‍ನಲ್ಲಿ ಪ್ರಸ್ತುತ ನಡೆಯುತ್ತಿರುವ ಎಲ್ಲಾ ಘಟನೆಗಳನ್ನು ರೆಕಾರ್ಡ್ ಮಾಡಲು ಮತ್ತು ನಮ್ಮ ದೇಶದ ಮೇಲೆ ರಷ್ಯಾದ ಆಕ್ರಮಣದ ಬಗ್ಗೆ ಜಗತ್ತಿಗೆ ಸತ್ಯವನ್ನು ತಿಳಿಸಲು ವಿಶೇಷವಾಗಿ ಪೆನ್ ಅವರು ಕೈವ್‍ಗೆ ಬಂದಿದ್ದಾರೆ ಎಂದು ತಿಳಿಸಿತು. ‘ಉಕ್ರೇನ್‍ಗೆ ಬೆಂಬಲ ನೀಡುವವರಲ್ಲಿ ಸೀನ್ ಪೆನ್ ಕೂಡಾ ಒಬ್ಬರಾಗಿದ್ದಾರೆ. ಅವರ ಧೈರ್ಯ ಮತ್ತು ಪ್ರಾಮಾಣಿಕತೆಗೆ ನಮ್ಮ ದೇಶವು ಅವರಿಗೆ ಸದಾ ಕೃತಜ್ಞರಾಗಿರಬೇಕು’ ಎಂದು ಶ್ಲಾಘಿಸಿದೆ.

Comments

Leave a Reply

Your email address will not be published. Required fields are marked *