ಮರಿಯುಪೋಲ್ ನಗರವನ್ನು ಸಂಪೂರ್ಣ ಸ್ವಾಧೀನಪಡಿಸಿಕೊಂಡ ರಷ್ಯಾ

ಕೀವ್: ಉಕ್ರೇನ್‌ನೊಂದಿಗಿನ ಯುದ್ಧದಲ್ಲಿ ರಷ್ಯಾ ಇದೀಗ ಒಂದು ಮಹತ್ವದ ಗೆಲುವು ಸಾಧಿಸಿದೆ. ಉಕ್ರೇನ್‌ನ ಪ್ರಮುಖ ನಗರಗಳಲ್ಲಿ ಒಂದಾದ ಮರಿಯುಪೋಲ್ ಸಂಪೂರ್ಣವಾಗಿ ಹಿಡಿತಕ್ಕೆ ತೆಗೆದುಕೊಂಡಿರುವುದಾಗಿ ರಷ್ಯಾ ಶುಕ್ರವಾರ ತಿಳಿಸಿದೆ.

ರಷ್ಯಾದ ರಕ್ಷಣಾ ಸಚಿವ ಸರ್ಗೇಯ್ ಶೋಯಿಗು ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೆ ಉಕ್ರೇನ್‌ನ ಭದ್ರಕೋಟೆಯಾದ ಅಜೋವ್‌ಸ್ಟಾಲ್ ಉಕ್ಕಿನ ಸ್ಥಾವರವಿರುವ ಮರಿಯುಪೋಲ್ ಅನ್ನು ಸಂಪೂರ್ಣವಾಗಿ ವಶಪಡಿಸಿಕೊಂಡಿರುವ ಬಗ್ಗೆ ತಿಳಿಸಿರುವುದಾಗಿ ವಕ್ತಾರ ಇಗೊರ್ ಕೊನಶೆಂಕೋವ್ ಹೇಳಿದ್ದಾರೆ. ಆದರೆ ಈ ಬಗ್ಗೆ ಉಕ್ರೇನ್ ಯಾವುದೇ ಮಾಹಿತಿ ನೀಡಿಲ್ಲ. ಇದನ್ನೂ ಓದಿ: ಯಮುನೋತ್ರಿ ದೇವಸ್ಥಾನದ ಹೆದ್ದಾರಿಯಲ್ಲಿ ಗೋಡೆ ಕುಸಿತ – 10 ಸಾವಿರ ಮಂದಿ ಸಂಕಷ್ಟದಲ್ಲಿ

ಮರಿಯುಪೋಲ್ ಉಕ್ಕಿನ ಕಾರ್ಖಾನೆಯಲ್ಲಿದ್ದ ಒಟ್ಟು 2,439 ಉಕ್ರೇನ್ ಹೋರಾಟಗಾರರು ಸೋಮವಾರ ಶರಣಾಗಿರುವುದಾಗಿ ರಷ್ಯಾ ಸುದ್ದಿ ಸಂಸ್ಥೆ ತಿಳಿಸಿತ್ತು. ಶರಣಾದ ಉಕ್ರೇನ್ ಹೋರಾಟಗಾರರನ್ನು ರಷ್ಯಾ ಸೆರೆಯಾಳಾಗಿ ತೆಗೆದುಕೊಂಡರೆ, ಕೆಲವರನ್ನು ರಷ್ಯಾಗೆ ಕರೆದೊಯ್ಯಲಾಗಿದೆ. ಇನ್ನೂ ಕೆಲವರನ್ನು ಆಸ್ಪತ್ರೆಗೆ ಒಯ್ಯಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಓಮಿಕ್ರಾನ್ ಉಪತಳಿ BA-4 2ನೇ ಪ್ರಕರಣ ತಮಿಳುನಾಡಿನಲ್ಲಿ ಪತ್ತೆ

ಫೆಬ್ರವರಿ 24ರಂದು ಯುದ್ಧವನ್ನು ಸಾರಿದ ರಷ್ಯಾಗೆ ಉಕ್ರೇನ್‌ನ ಮರಿಯುಪೋಲ್‌ನ ಸ್ವಾಧೀನ ಒಂದು ಮುಖ್ಯವಾದ ವಿಜಯವಾಗಿದೆ. ಆದರೆ ರಷ್ಯಾ ಉಕ್ರೇನ್ ರಾಜಧಾನಿ ಕೀವ್ ಅನ್ನು ವಶಪಡಿಸಿಕೊಳ್ಳಲು ಇಲ್ಲಿ ವರೆಗೂ ಸಾಧ್ಯವಾಗಿಲ್ಲ.

Comments

Leave a Reply

Your email address will not be published. Required fields are marked *