ಕಾಲಿನಲ್ಲಿ ತುಳಿಯುವುದಲ್ಲದೆ ನೆಕ್ಕಿ ರಸ್ಕ್ ಪ್ಯಾಕ್ – ವೀಡಿಯೋ ವೈರಲ್

rusks

ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುವ ಕೆಲಸಗಾರರ ಗುಂಪೊಂದು ತಮ್ಮ ಪಾದಗಳಿಂದ ರಸ್ಕ್‌ಗಳನ್ನು ತುಳಿಯುವುದರ ಜೊತೆಗೆ ಕೆಲವು ರಸ್ಕ್‌ಗಳನ್ನು ನೆಕ್ಕಿ ಪ್ಯಾಕಿಂಗ್ ಮಾಡುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

rusks

ವೀಡಿಯೋದಲ್ಲಿ ಕಾರ್ಖಾನೆಯಲ್ಲಿ ಕೆಲಸಗಾರರು ಒಟ್ಟಿಗೆ ಕುಳಿತುಕೊಂಡು ರಸ್ಕ್ ಪ್ಯಾಕ್ ಮಾಡುತ್ತಿರುತ್ತಾರೆ. ಈ ವೇಳೆ ವ್ಯಕ್ತಿಗಳಿಬ್ಬರು ಕುಳಿತುಕೊಂಡು ಉದ್ದೇಶಪೂರ್ವಕವಾಗಿ ತಮ್ಮ ಪಾದವನ್ನು ರಸ್ಕ್ ಮೇಲೆ ಇಡುವುದನ್ನು ಕಾಣಬಹುದಾಗಿದೆ. ಅಲ್ಲದೇ ನೆಲದ ಮೇಲೆ ಟ್ರೇನಲ್ಲಿ ಇರಿಸಲಾದ ರಸ್ಕ್‌ಗಳನ್ನು ಉಗುಳಿ, ನೆಕ್ಕಿ ಕವರ್‍ನಲ್ಲಿ ಪ್ಯಾಕಿಂಗ್ ಮಾಡುತ್ತಿರುವುದನ್ನು ನೋಡಬಹುದಾಗಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ರಾತ್ರಿಯೆಲ್ಲಾ ಸುರಿದ ಮಳೆ – ಜೈನ್ ಆಸ್ಪತ್ರೆಗೆ ನುಗ್ಗಿದ ನೀರು

rusks

ಈ ವೀಡಿಯೋವನ್ನು ಶಿವಕುಮಾರ್ ಪಾರ್ಥಸಾರಥಿ ಎಂಬವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದು, ಸಾವಿರಾರು ಬೇಕರಿಗಳನ್ನು ಅಲ್ಲಿನ ಕೆಲಸಗಾರರು ಹಾಳು ಮಾಡುತ್ತಿದ್ದಾರೆ. ಈ ವೀಡಿಯೋ ರಾಜ್ಯದ ಪೊಲೀಸರಿಗೆ ತಲುಪುವವರೆಗೂ ಶೇರ್ ಮಾಡಿ. ಪೊಲೀಸರಿಗೆ ಇವರನ್ನು ಪತ್ತೆ ಹಚ್ಚುವುದು ಕಷ್ಟವಲ್ಲ. ಅಧಿಕಾರಿಗಳಿಗೆ ತಲುಪುವವರೆಗೂ ಕೇವಲ ಶೇರ್ ಮಾಡಿ. ಸ್ನೇಹಿತರೇ ಇದನ್ನು ನೀವು ಎಷ್ಟು ಬೇಗ ಶೇರ್ ಹಾಗೂ ಫಾರ್ವರ್ಡ್ ಮಾಡುತ್ತಿರೋ ಅಷ್ಟು ಬೇಗ ಕಿಡಿಗೇಡಿಗಳು ಸಿಕ್ಕಿ ಹಾಕಿಕೊಳ್ಳುತ್ತಾರೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಆನೇಕಲ್ ಬಳಿ ಹಳಿಯಲ್ಲಿ ಸಿಲುಕಿಕೊಂಡ ಕ್ಯಾಂಟರ್ – ಎಕ್ಸ್‌ಪ್ರೆಸ್‌ ರೈಲು ಡಿಕ್ಕಿಗೆ ಲಾರಿ ಎಂಜಿನ್ ಪೀಸ್ ಪೀಸ್

ಸದ್ಯ ಈ ವೀಡಿಯೋ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *