ವಿಜಯ್ ಸೇತುಪತಿಗೆ ರುಕ್ಮಿಣಿ ವಸಂತ್ ನಾಯಕಿ- ‘ACE’ ಚಿತ್ರದ ಗ್ಲಿಂಪ್ಸ್ ರಿಲೀಸ್

ಡ್ಡೆಹುಡುಗರ ಕ್ರಶ್ ರುಕ್ಮಿಣಿ ವಸಂತ್ (Rukmini Vasanth) ಅವರು ಕಾಲಿವುಡ್‌ನತ್ತ (Kollywood) ಮುಖ ಮಾಡಿದ್ದಾರೆ. ಕೆಲ ತಿಂಗಳುಗಳ ಹಿಂದೆಯೇ ವಿಜಯ್ ಸೇತುಪತಿಗೆ ರುಕ್ಮಿಣಿ ನಾಯಕಿಯಾಗಿರುವ ವಿಚಾರ ಅನೌನ್ಸ್ ಆಗಿದೆ. ಇದೀಗ ರುಕ್ಮಿಣಿ ಹುಟ್ಟುಹಬ್ಬದ ಹಿನ್ನೆಲೆ ಅವರ ಪಾತ್ರದ ಗ್ಲಿಂಪ್ಸ್ ಅನ್ನು ಚಿತ್ರತಂಡ ರಿವೀಲ್ ಮಾಡಿದೆ.

ವಿಜಯ್ ಸೇತುಪತಿಗೆ (Vijay Sethupathi) ಜೋಡಿಯಾಗಿ ACE ಸಿನಿಮಾದಲ್ಲಿ ರುಕ್ಕು ಎಂಬ ಪಾತ್ರದಲ್ಲಿ ರುಕ್ಮಿಣಿ ನಟಿಸಿದ್ದಾರೆ. ಚಿತ್ರದ ಗ್ಲಿಂಪ್ಸ್ನಲ್ಲೂ ನಟಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಸದ್ಯ ಹುಟ್ಟುಹಬ್ಬಕ್ಕೆ ನಟಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಇದನ್ನೂ ಓದಿ:ಮದುವೆಯ ಬಳಿಕ ಕಾಕ್‌ಟೈಲ್ ಪಾರ್ಟಿಯಲ್ಲಿ ಮಿಂಚಿದ ನಾಗಚೈತನ್ಯ ಪತ್ನಿ

ಇನ್ನೂ ಬೀರಬಲ್, ಸಪ್ತಸಾಗರದಾಚೆ ಎಲ್ಲೋ, ಬಾನದಾರಿಯಲಿ, ಬಘೀರ, ಭೈರತಿ ರಣಗಲ್ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.