ಕೋಲಾರದಲ್ಲಿಂದು ಸಾವಿರಾರು ಗಣವೇಷಧಾರಿಗಳಿಂದ ಪಥಸಂಚಲನ – ಪೊಲೀಸ್‌ ಬಿಗಿ ಬಂದೋಬಸ್ತ್

ಕೋಲಾರ: ಚಿತ್ತಾಪುರ ಆರ್‌ಎಸ್‌ಎಸ್ ಪಥಸಂಚಲನ (RSS Route March) ಪ್ರಕರಣ ದಿನದಿಂದ ದಿನಕ್ಕೆ ಜಟಿಲವಾಗುತ್ತಿದ್ದು, ಹೈಕೋರ್ಟ್ ಸೂಚನೆ ಮೇರೆಗೆ ಇಂದು ಜಿಲ್ಲಾಡಳಿತ ಆರ್‌ಎಸ್‌ಎಸ್ ಸೇರಿ 8 ಸಂಘಟನೆಗಳಿಗೆ ಶಾಂತಿ ಸಭೆಗೆ ಆಗಮಿಸಲು ನೋಟಿಸ್ ನೀಡುತ್ತಿದೆ. ಹೀಗಾಗಿ ಜಿಲ್ಲಾಡಳಿತದ ಶಾಂತಿ ಸಭೆಯ ನಿರ್ಧಾರದತ್ತ ಇದೀಗ ಎಲ್ಲರ ಚಿತ್ತ ನೆಟ್ಟಿದೆ. ಈ ನಡುವೆ ಆರ್‌ಎಸ್‌ಎಸ್‌ ಶತಮಾನೋತ್ಸವದ ಪ್ರಯುಕ್ತ ಕೋಲಾರದ (Kolara) ಮಾಲೂರಿನಲ್ಲಿ ಇಂದು ಪಥಸಂಚಲನ ಹಮ್ಮಿಕೊಳ್ಳಲಾಗಿದೆ.

ಪಥಸಂಚಲನಕ್ಕೆ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆವರೆಗೆ ಅನುಮತಿ ಪಡೆಯಲಾಗಿದೆ. ಹೀಗಾಗಿ ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಪಥಸಂಚಲನ ಆರಂಭವಾಗಲಿದ್ದು, ಒಟ್ಟು 4 ಕಿಮೀ ಪಥಸಂಚನ ನಡೆಯಲಿದೆ. ಸಾವಿರಾರು ಗಣವೇಶಧಾರಿಗಳು ಇದರಲ್ಲಿ ಭಾಗಿಯಾಗುವ ಸಾಧ್ಯತೆಯಿದೆ.

ಎಲ್ಲೆಲ್ಲಿ ಪಥಸಂಚಲನ?
ಮಾಲೂರು ಹೋಂಡಾ ಸ್ಟೇಡಿಯಂ ನಿಂದ ಆರಂಭವಾಗಿ ಪಥಸಂಚನಲ ಶುರುವಾಗಿ ಬಿಇಓ ಆಫೀಸ್ ರಸ್ತೆ ಮಾರ್ಗವಾಗಿ ಕುವೆಂಪು ವೃತ್ತ, ಧರ್ಮರಾಯ ಸ್ವಾಮಿ ದೇವಾಲಯ, ಅಗ್ರಹಾರ ಬೀದಿ, ಕುಂಬಾರಪೇಟೆ ವೃತ್ತ. ದೊಡ್ಡಪೇಟೆ, ಮಹಾರಾಜ ಸರ್ಕಲ್, ಬಾಬುರಾವ್ ರಸ್ತೆ, ಕೆಂಪೇಗೌಡ ಸರ್ಕಲ್, ಮಾರಿಕಾಂಭಾ ಸರ್ಕಲ್, ಬ್ರಹ್ಮಕುಮಾರಿ ರಸ್ತೆ, ಅರಳೇರಿ ರಸ್ತೆಯ ಮೂಲಕ ಮತ್ತೆ ಹೋಂಡಾ ಸ್ಟೇಡಿಯಂ ನಲ್ಲಿ ಕೊನೆಗೊಳ್ಳಲಿದೆ.

ಬಿಗಿ ಬಂದೋಬಸ್ತ್‌
ಆರ್‌ಎಸ್‌ಎಸ್ ಪಥ ಸಂಚಲನ ಹಿನ್ನೆಲೆ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಸುಮಾರು 250 ಹೆಚ್ಚು ಪೊಲೀಸರಿಂದ ಭದ್ರತೆ ನೀಡಲಾಗಿದೆ. ಮಾಜಿ ಶಾಸಕರು, ಮಾಜಿ ಸಂಸದರು ಸೇರಿ ನೂರಾರು ಮುಖಂಡರು ಪಥಚಂದಲನದಲ್ಲಿ ಪಾಲ್ಗೊಳ್ಳಲಿದ್ದಾರೆ.