ಇನ್ಮುಂದೆ `ಇಂಡಿಯಾ’ ಅನ್ನಬೇಡಿ, `ಭಾರತ’ ಎಂದೇ ಕರೆಯಿರಿ – ಆರ್‌ಎಸ್‌ಎಸ್ ನಾಯಕ ಹೊಸಬಾಳೆ ಕರೆ

-ಮತ್ತೆ ಮುನ್ನೆಲೆಗೆ ಬಂತು ಭಾರತ ವರ್ಸಸ್ ಇಂಡಿಯಾ ವಿವಾದ

ನವದೆಹಲಿ: ಇನ್ಮುಂದೆ ದೇಶವನ್ನು `ಇಂಡಿಯಾ’ ಎಂದು ಕರೆಯಬಾರದು. ಭಾರತ ಎಂದೇ ಅಧಿಕೃತವಾಗಿ ಕರೆಯಬೇಕು ಎಂದು ಆರ್‌ಎಸ್‌ಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ (Dattatreya Hosabale) ಕರೆ ನೀಡಿದರು.

ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತಾಡಿದ ಅವರು, ನಮ್ಮ ದೇಶದ ಹೆಸರು ಭಾರತ. ಹೀಗಾಗಿ `ಭಾರತ’ ಎಂದೇ ಕರೆಯಿರಿ. ಇಂಡಿಯಾ ಎಂಬುದು ಇಂಗ್ಲೀಷ್ ಹೆಸರು. ಇದಕ್ಕಾಗಿ ಸಂವಿಧಾನದಲ್ಲಿ ತಿದ್ದುಪಡಿ ಮಾಡಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ರಷ್ಯಾ ವೈಮಾನಿಕ ದಾಳಿಗೆ ಪ್ರತಿಯಾಗಿ ಉಕ್ರೇನ್‌ ಡ್ರೋನ್ ದಾಳಿ – ಮಾಸ್ಕೋದಲ್ಲಿ 3 ಸಾವು, 17 ಮಂದಿಗೆ ಗಾಯ

ಇನ್ನು, ಮೈಸೂರಿನಲ್ಲಿ ಮತ್ತೆ ಮಸೀದಿ ವಿವಾದ ಶುರುವಾಗುವಂತೆ ಕಾಣುತ್ತಿದೆ. ಇಲ್ಲಿನ ಕ್ಯಾತಮಾರನಹಳ್ಳಿ ವಿವಾದಿತ ಮಸೀದಿಯ ಬಾಗಿಲು ತೆಗೆಸಲು ರಾಜ್ಯ ಸರ್ಕಾರ ಯತ್ನಿಸಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಆರೋಪ ಮಾಡಿದರು. ಸರ್ಕಾರ ಎಷ್ಟೇ ಪ್ರಯತ್ನ ಮಾಡಿದರೂ ಮಸೀದಿ ತೆರೆಯಲು ಬಿಡಲ್ಲ. ಒಂದೊಮ್ಮೆ ಸಿಎಂ ಅವರು ಮಸೀದಿ ಓಪನ್ ಮಾಡಿಸಿದರೆ ಆಮೇಲೆ ಮುಂದಿನದ್ದು ಹೇಳ್ತೀನಿ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಯತ್ನಾಳ್ ನಮ್ಮ ಸಮುದಾಯದ ನಾಯಕ, ಬಲಿಪಶು ಆಗ್ಬಾರ್ದು: ರೇಣುಕಾಚಾರ್ಯ ಸಾಫ್ಟ್ ಕಾರ್ನರ್

ಬೆಂಗಳೂರಿನ ಮದರಸಾದಲ್ಲಿ ಬಾಲಕಿಯರ ಮೇಲಿನ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ದೂರು ಕೊಟ್ಟ ಮಕ್ಕಳ ಪೋಷಕರಿಗೆ ಕೇಸ್ ವಾಪಸ್ ಪಡೆಯುವಂತೆ ಮದರಸಾ ಮುಖ್ಯಸ್ಥ ಅನ್ವರ್ ಅಲಿ, ಹಸನ್ ಮುಸ್ಮೀಲ್ ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.