ಇಡೀ ದೇಶದಲ್ಲಿ ಹಿಂದುತ್ವ ಜಾಗೃತಿಯಾಗಲು RSS ಕಾರಣ: ಈಶ್ವರಪ್ಪ

ಶಿವಮೊಗ್ಗ: ಪ್ರಸ್ತುತ ಇಡೀ ದೇಶದಲ್ಲೇ ಹಿಂದುತ್ವ ಜಾಗೃತಿಯಾಗಿದೆ ಎಂದರೆ ಅದಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕಾರಣ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ.

ಶಿವಮೊಗ್ಗದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲೇ ಹಿಂದುತ್ವ ಜಾಗೃತಿಯಾಗಲು ಆರ್‌ಎಸ್‌ಎಸ್ ಕಾರಣ. ಆದ್ದರಿಂದಲೇ ಆರ್‌ಎಸ್‌ಎಸ್ ಜೊತೆಗೆ ಹಿಂದುತ್ವವನ್ನೂ ಟೀಕೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಯತ್ನಾಳ್‍ರಂತೆ ನನಗೂ ಸಚಿವರನ್ನಾಗಿ ಮಾಡ್ತೀವಿ ಎಂದು ಹಣ ಕೇಳಿದ್ರು: ರೇಣುಕಾಚಾರ್ಯ ಬಾಂಬ್

ESHWARAPPA

ದೇಶಕ್ಕೆ ಸ್ವಾತಂತ್ರ‍್ಯ ಬಂದು 75 ವರ್ಷವಾದರೂ ರಾಮ ಮಂದಿರ ನಿರ್ಮಾಣ ಆಗಲಿಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗುತ್ತಿರುವುದು ಬಿಜೆಪಿ ಕಾಲದಲ್ಲಿ. ಕಾಶಿಯ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿರುವುದು ಬಿಜೆಪಿ ಅವಧಿಯಲ್ಲಿ. ಮಥುರಾದಲ್ಲಿ ಸರ್ವೇಗೆ ಅರ್ಜಿ ಹೋಗಿರುವುದೂ ಬಿಜೆಪಿ ಕಾಲದಲ್ಲೇ ಎಂದು ಹೇಳಿದರು. ಇದನ್ನೂ ಓದಿ: ಅಧಿಕಾರಿಗಳ ವಿರುದ್ಧ ವಿಭಿನ್ನ ಆಕ್ರೋಶ- ಮೆಸ್ಕಾಂ ಕಚೇರಿಯಲ್ಲೇ ಮಸಾಲೆ ರುಬ್ಬಿಕೊಳ್ಳುವ ರೈತ

KS ESHWARAPPA

ಇಡೀ ದೇಶದಲ್ಲಿ 36 ಸಾವಿರ ದೇಗುಲಗಳು ಮಸೀದಿಗಳು ಆಗಿವೆ. ಅವುಗಳನ್ನೆಲ್ಲಾ ಮತ್ತೆ ನಮ್ಮ ಹಿಂದೂಗಳ ಸುಪರ್ದಿಗೆ ಬರಬೇಕು ಎಂಬುದು ನಮ್ಮ ಉದ್ದೇಶ ಎಂದು ಅಭಿಪ್ರಾಯಪಟ್ಟರು.

Comments

Leave a Reply

Your email address will not be published. Required fields are marked *