RSS ಆಸ್ಪತ್ರೆ ಹಿಂದೂಗಳಿಗೆ ಮಾತ್ರವೇ ಎಂಬ ರತನ್ ಟಾಟಾ ಪ್ರಶ್ನೆಗೆ ಗಡ್ಕರಿ ಉತ್ತರ ಹೀಗಿತ್ತು

ಮುಂಬೈ: ಆರ್‌ಎಸ್‍ಎಸ್ ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುವುದಿಲ್ಲ ಎಂದು ಕೈಗಾರಿಕೋದ್ಯಮಿ ರತನ್ ಟಾಟಾಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದರು.

ಖಾಸಗಿ ಆಸ್ಪತ್ರೆಯನ್ನು ಉದ್ಘಾಟಿಸಿದ ಅವರು, ಮಹಾರಾಷ್ಟ್ರದ ಶಿವಸೇನೆ ಹಾಗೂ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದಾಗ ಕೈಗಾರಿಕೋದ್ಯಮಿ ರತನ್ ಟಾಟಾ ಅವರನ್ನು ಭೇಟಿ ಮಾಡಿ ಅವರ ಜೊತೆಗಿನ ಸಂವಾದವನ್ನು ನೆನಪಿಸಿಕೊಂಡರು.

ರಾಜ್ಯ ಸಚಿವನಾಗಿದ್ದಾಗ ಔರಂಗಾಬಾದ್‍ನಲ್ಲಿ ದಿವಂಗತ ಆರ್‌ಎಸ್‍ಎಸ್ ಮುಖ್ಯಸ್ಥ ಕೆ.ಬಿ.ಹೆಡ್ಗೆವಾರ್ ಅವರ ಹೆಸರಿನ ಆಸ್ಪತ್ರೆ ಉದ್ಘಾಟನೆಯಾಗುತ್ತಿತ್ತು. ಆರೆಸ್ಸೆಸ್‍ನ ಹಿರಿಯ ಕಾರ್ಯಕರ್ತರೊಬ್ಬರು ಈ ಆಸ್ಪತ್ರೆಯನ್ನು ರತನ್ ಟಾಟಾ ಅವರು ಉದ್ಘಾಟಿಸಬೇಕೆಂದು ಬಯಸಿದರು. ಇದರಿಂದಾಗಿ ನನ್ನ ಸಹಾಯ ಕೇಳಿದ್ದರು. ಇದನ್ನೂ ಓದಿ: ಮೇಘಾಲಯದಲ್ಲಿ ಚಂಡಮಾರುತ – 1,000ಕ್ಕೂ ಹೆಚ್ಚು ಮನೆಗಳಿಗೆ ಹಾನಿ

ಇದರಿಂದಾಗಿ ರತನ್ ಟಾಟಾ ಅವರನ್ನು ಸಂಪರ್ಕಿಸಿ ದೇಶದ ಬಡವರಿಗೆ ಕ್ಯಾನ್ಸರ್ ಚಿಕಿತ್ಸೆ ನೀಡುವಲ್ಲಿ ಟಾಟಾ ಕ್ಯಾನ್ಸರ್ ಆಸ್ಪತ್ರೆಯ ಕೊಡುಗೆಯನ್ನು ಉಲ್ಲೇಖಿಸಿ ಆಸ್ಪತ್ರೆಯನ್ನು ಉದ್ಘಾಟಿಸಲು ಮನವೊಲಿಸಿದೆವು.

ಆಸ್ಪತ್ರೆ ತಲುಪಿದ ಟಾಟಾ ಅವರು ಆಸ್ಪತ್ರೆ ಹಿಂದೂ ಸಮುದಾಯದವರಿಗೆ ಮಾತ್ರವೇ ಎಂದು ಕೇಳಿದರು. ಇದಕ್ಕೆ ನಾನು ಪ್ರತಿಕ್ರಿಯಿಸಿ, ನೀವು ಯಾಕೆ ಹಾಗೆ ಯೋಚಿಸುತ್ತೀರಿ? ಎಂದ ಪ್ರಶ್ನಿಸಿದರು. ಅದಕ್ಕೆ ಅವರು ಆಸ್ಪತ್ರೆ ಆರ್‌ಎಸ್‍ಎಸ್‍ಗೆ ಸೇರಿದೆ ಎಂದರು. ಇದನ್ನೂ ಓದಿ: ರಾಜೀನಾಮೆ ಸಾಲಲ್ಲ, ಈಶ್ವರಪ್ಪ ಬಂಧನವಾಗ್ಬೇಕು- ಕಾಂಗ್ರೆಸ್‍ನಿಂದ ಅಹೋರಾತ್ರಿ ಧರಣಿ

ಆಸ್ಪತ್ರೆ ಎಲ್ಲಾ ಸಮುದಾಯಗಳಿಗೆ ಮತ್ತು ಆರ್‌ಎಸ್‍ಎಸ್‍ನಲ್ಲಿ ಅಂತಹ ಯಾವುದೇ ಧರ್ಮದ ಆಧಾರದ ಮೇಲೆ ತಾರತಮ್ಯ ನಡೆಯುವುದಿಲ್ಲ ಎಂದು ಅವರಿಗೆ ಹೇಳಿದೆ ಎಂದು ನೆನಪಿಸಿಕೊಂಡರು.

Comments

Leave a Reply

Your email address will not be published. Required fields are marked *