ವಿಶ್ವದಲ್ಲಿ 488 ಪತ್ರಕರ್ತರಿಗೆ ಜೈಲು ವಾಸ- ಚೀನಾ ನಂ.1

ನವದೆಹಲಿ: ತಮ್ಮ ವರದಿಗಳ ಕಾರಣದಿಂದಾಗಿ ವಿಶ್ವದಲ್ಲಿ 488 ಪತ್ರಕರ್ತರು ಜೈಲು ವಾಸ ಅನುಭವಿಸುತ್ತಿದ್ದಾರೆ. ಅಲ್ಲದೇ 46 ಪತ್ರಕರ್ತರು ಹತ್ಯೆಯಾಗಿದ್ದಾರೆ ಎಂಬ ಆಘಾತಕಾರಿ ವಿಚಾರ ರಿಪೋರ್ಟರ್ಸ್ ವಿತೌಟ್ ಬಾರ್ಡರ್ಸ್ (ಆರ್‍ಎಸ್‍ಎಫ್) ಬಿಡುಗಡೆ ಮಾಡಿರುವ ವರದಿಯಿಂದ ಬೆಳಕಿಗೆ ಬಂದಿದೆ.

jail

ಅತಿ ಹೆಚ್ಚು ಪತ್ರಕರ್ತರನ್ನು ಜೈಲಿಗೆ ಹಾಕಿರುವ ಚೀನಾ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಚೀನಾ ದೇಶದಲ್ಲೇ 127 ಪತ್ರಕರ್ತರು ಸೆರೆವಾಸ ಅನುಭವಿಸುತ್ತಿದ್ದಾರೆ. ಇದನ್ನೂ ಓದಿ: ವುಹಾನ್‍ ಕೊರೊನಾದ ಭೀಕರತೆಯ ವರದಿ – ಗಟ್ಟಿಗಿತ್ತಿ ಪತ್ರಕರ್ತೆಗೆ 4 ವರ್ಷ ಜೈಲು ಶಿಕ್ಷೆ

ಮೆಕ್ಸಿಕೊ ದೇಶದಲ್ಲಿ 7, ಅಫ್ಘಾನಿಸ್ತಾನದಲ್ಲಿ 6 ಪತ್ರಕರ್ತರು ಹತ್ಯೆಗೀಡಾಗಿದ್ದು, ಅಪಾಯಕಾರಿ ದೇಶಗಳು ಎಂದು ಕರೆಸಿಕೊಂಡಿವೆ. ತಲಾ ನಾಲ್ಕು ಪತ್ರಕರ್ತರು ಹತ್ಯೆಯಾಗಿರುವ ಯೆಮನ್, ಭಾರತ ದೇಶಗಳು ಸಹ ಇದೇ ಸಾಲಿನಲ್ಲಿವೆ.

ಮ್ಯಾನ್ಮಾರ್, ಬೆಲಾರಸ್ ಮತ್ತು ಹಾಂಗ್‍ಕಾಂಗ್‍ನಲ್ಲಿ ಮಾಧ್ಯಮಗಳ ಮೇಲಿನ ದಬ್ಬಾಳಿಕೆ ಹೆಚ್ಚಿದ್ದು, ಬಂಧಿತ ಪತ್ರಕರ್ತರ ಸಂಖ್ಯೆಯು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ. 20ರಷ್ಟು ಹೆಚ್ಚಾಗಿದೆ. ಹತ್ಯೆಗೀಡಾದ ಪತ್ರಕರ್ತರಲ್ಲಿ ಶೇ. 64ರಷ್ಟು ಮಂದಿ ಉದ್ದೇಶಿತ ಕಾರಣಗಳಿಗೆ ಟಾರ್ಗೆಟ್ ಆದವರಾಗಿದ್ದಾರೆ ಎಂಬ ವಿಚಾರವನ್ನು ವರದಿ ಬಹಿರಂಗಪಡಿಸಿದೆ. ಇದನ್ನೂ ಓದಿ: 2 ತಿಂಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ವುಹಾನ್ ಪತ್ರಕರ್ತ

Comments

Leave a Reply

Your email address will not be published. Required fields are marked *