ನವದೆಹಲಿ: ನಗರದ ಪ್ರತಿಷ್ಠಿತ ಆಟೋ ಉತ್ಪಾದನಾ ಮತ್ತು ಜೈ ಭಾರತ್ ಮಾರುತಿ (ಜೆಬಿಎಂ) ಗ್ರೂಪ್ ಆಫ್ ಕಂಪೆನಿಯ ಮೇಲೆ ನಡೆದ ಐಟಿ ದಾಳಿ ವೇಳೆ ಟಾಯ್ಲೆಟ್ ನಲ್ಲಿ ಸುಮಾರು 3 ಕೆಜಿ ಚಿನ್ನ ಮತ್ತು ಬೆಳ್ಳಿ ಹಾಗೂ 7 ಕೋಟಿ ರೂ. ನಗದು ಹಣ ಪತ್ತೆಯಾಗಿದೆ.
ಕಳೆದ ಮೂರು ದಿನಗಳಿಂದ ಆದಾಯ ತೆರಿಗೆ ಇಲಾಖೆಯು ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶಗಳಲ್ಲಿ (ಎನ್‍ಸಿಆರ್) ದಾಳಿ ನಡೆಸುತ್ತಿದೆ. ಗುರುವಾರ 50 ಕಡೆಗಳಲ್ಲಿ ಏಕಕಾಲದಲ್ಲಿ ಐಟಿ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ನಗದು ಮತ್ತು ಚಿನ್ನಾಭರಣಗಳನ್ನು ವಶ ಪಡಿಸಿಕೊಂಡಿದ್ದಾರೆ.
ಜೈ ಭಾರತ್ ಮಾರುತಿ ಕಂಪೆನಿಯ ಮುಖ್ಯಸ್ಥ ಎಸ್.ಕೆ ಆರ್ಯ ಅವರ ಮನೆಯ ಫರ್ನಿಚರ್, ಹಾಸಿಗೆ ಕೆಳಗೆ ಹಾಗೂ ಟಾಯ್ಲೆಟ್‍ನಲ್ಲಿ 7 ಕೋಟಿ ನಗದು ಹಣವನ್ನು ಬಚ್ಚಿಟ್ಟಿದ್ದರು. ಅಷ್ಟೇ ಅಲ್ಲದೇ ಸಂಸ್ಥೆಯು ಹಲವಾರು ಅಕ್ರಮ ವ್ಯವಹಾರವನ್ನು ನಡೆಸುತ್ತಿದೆ. ಆದರೆ ಅದ್ಯಾವುದನ್ನು ಸರಿಯಾದ ದಾಖಲೆ ಮಾಡಿಲ್ಲ. ಇನ್ನೂ ತನಿಖೆ ನಡೆಯುತ್ತಿದೆ ಎಂದು ಐಟಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಐಟಿ ಇಲಾಖೆಗೆ ದೊರಕಿರುವ ಆಸ್ತಿ,ಹಣ, ಚಿನ್ನ ಮತ್ತು ದಾಖಲೆಗೆ ಯಾವುದೇ ರೀತಿಯ ಉತ್ತರವನ್ನು ನೀಡುತ್ತಿಲ್ಲ. ಕಂಪೆನಿಯ ವೆಬ್‍ಸೈಟ್ ಪ್ರಕಾರ, ಜೆಬಿಎಂ ಗ್ರೂಪ್ ನ ವಹಿವಾಟು ಸುಮಾರು 18.33 ಸಾವಿರ ಕೋಟಿ ರೂ. (1.2 ಬಿಲಿಯನ್ ಡಾಲರ್) ಇದೆ. ಜೊತೆಗೆ ವಿವಿಧ ವಾಹನ, ಎಂಜಿನಿಯರಿಂಗ್, ವಿನ್ಯಾಸ ಸೇವೆ, ನವಿಕರಿಸಬಹುದಾದ ಶಕ್ತಿ ಮತ್ತು ಶಿಕ್ಷಣ ಕ್ಷೇತ್ರಗಳನ್ನು ಹೊಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಾರುತಿ ಮತ್ತು ಅಶೋಕ್ ಲೇಲ್ಯಾಂಡ್ ಕಂಪೆನಿಂತಹ ದೊಡ್ಡ ಕಂಪನಿಗಳಿಗೆ ಆಟೋ ಬಿಡಿಭಾಗಗಳನ್ನು ಪೂರೈಕೆ ಮಾಡುತ್ತದೆ. ಒಟ್ಟಾರೆ 18 ಸ್ಥಳಗಳಲ್ಲಿ 35 ಉತ್ಪಾದನಾ ಘಟಕಗಳು ಮತ್ತು 4 ಎಂಜಿಯರಿಂಗ್ ಮತ್ತು ವಿನ್ಯಾಸ ಕೇಂದ್ರಗಳನ್ನು ಹೊಂದಿದೆ.
— Indian Advocate (@AdvocateIndian) October 7, 2017

Leave a Reply