ಕಾಂಗ್ರೆಸ್‍ನಿಂದ ಮಲಪ್ರಭಾ ಕಾಲುವೆ ನವೀಕರಣದಲ್ಲಿ 600 ಕೋಟಿ ಗುಳುಂ: ಬಿಎಸ್‍ವೈ ಬಾಂಬ್

ಗದಗ: ಮಲಪ್ರಭಾ-ಘಟಪ್ರಭಾ ಕಾಲುವೆಯ ಆಧುನೀಕರಣದಲ್ಲಿ ಸುಮಾರು 600 ಕೋಟಿ ರೂ. ಭಾರೀ ಪ್ರಮಾಣದ ಅವ್ಯವಹಾರ ನಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೊಸ ಬಾಂಬ್‍ವೊಂದನ್ನು ಸಿಡಿಸಿದ್ದಾರೆ.

ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕಾಲುವೆಗಳ ಆಧುನೀಕರಣಕ್ಕಾಗಿ 400 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಸರ್ಕಾರ ವೆಚ್ಚವನ್ನು 800 ಕೋಟಿ ರೂ,ಗೆ ಹೆಚ್ಚಿಸಲು ಅಧಿಕಾರಿಗಳಿಗೆ ಒತ್ತಡ ಹೇರಿದ್ದರು. ಇದಕ್ಕೆ ಒಪ್ಪದ ಅಧಿಕಾರಿಗಳನ್ನು ರಾತ್ರೋ ರಾತ್ರಿ ವರ್ಗಾವಣೆ ಮಾಡಿ, ತಮಗೆ ಅನುಕೂಲವಾದ ಅಧಿಕಾರಿಗಳನ್ನು ಸೇರ್ಪಡೆ ಮಾಡಿಕೊಂಡಿದ್ದರು. ಒಟ್ಟು ಮಲಪ್ರಭಾ ಮತ್ತು ಘಟಪ್ರಭಾ ಕಾಲುವೆಗಳ ನವೀಕರಣಕ್ಕೆ 1000 ಕೋಟಿ ರೂ. ವೆಚ್ಚವಾಗಿದೆ ಎಂದು ಆರೋಪಿಸಿದರು.

ನಾಲಾ ಕಾಮಗಾರಿಯ ಬಗ್ಗೆ ಸಮಗ್ರ ತನಿಖೆ ಆಗಬೇಕು. ಅಕ್ರಮ ಹಣದಲ್ಲಿ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪಾಲೆಷ್ಟು ಎನ್ನುವುದು ತನಿಖೆಯಿಂದ ಬಹಿರಂಗವಾಗಬೇಕಿದೆ. ಸತ್ಯಾಸತ್ಯತೆಯಿಂದ ತನಿಖೆಯಾದ್ರೆ ಎಂ.ಬಿ.ಪಾಟೀಲ್ ಮನೆಗೆ ಹೋಗ್ತಾರೆ ಎಂದು ಯಡಿಯೂರಪ್ಪ ಭವಿಷ್ಯ ನುಡಿದ್ರು.

 

Comments

Leave a Reply

Your email address will not be published. Required fields are marked *