ಕೈ ಶಾಸಕರಿಗಾಗಿ ಕೋಟಿ ಕೋಟಿ ಖರ್ಚು: ಒಬ್ಬ ಶಾಸಕರ ಒಂದು ದಿನ ಖರ್ಚು ಎಷ್ಟು ಗೊತ್ತೆ?

ಬೆಂಗಳೂರು: ಎಐಸಿಸಿ ಖಜಾನೆಯಲ್ಲಿ ಈಗ ದುಡ್ಡಿಲ್ಲ ಎಂದು ವರದಿಯಾಗಿದ್ದರೆ ಇತ್ತ ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಸ್ಥಾಪನೆಗೆ ಕಾಂಗ್ರೆಸ್ ಕೋಟಿ ಕೋಟಿ ಹಣವನ್ನು ಖರ್ಚು ಮಾಡಿದೆ.

ಹೌದು. ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಕಾಂಗ್ರೆಸ್ ಶಾಸಕರು ರೆಸಾರ್ಟ್ ಮತ್ತು ಹೋಟೆಲ್ ನಲ್ಲಿ ತಂಗಿದ್ದು, ಒಟ್ಟು 8 ದಿನಗಳ ಕಾಲ ಕಾಂಗ್ರೆಸ್ ಶಾಸಕರ ಖರ್ಚು ಬರೋಬ್ಬರಿ 4 ಕೋಟಿ 90 ಲಕ್ಷ ಆಗಿದೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ. ಇದನ್ನೂ ಓದಿ: ಕಾಂಗ್ರೆಸ್ ಖಜಾನೆಯಲ್ಲಿ ಈಗ ದುಡ್ಡಿಲ್ಲ- ಲೋಕ ಚುನಾವಣೆಯ ವೇಳೆ ಸಂಕಷ್ಟ!

ಓರ್ವ ಶಾಸಕನಿಗೆ 6.3 ಲಕ್ಷ ರೂ. ಖರ್ಚು ಮಾಡಿದ್ದು 8 ದಿನಗಳು ಬರೋಬ್ಬರಿ 4 ಕೋಟಿ 90 ಲಕ್ಷ ಹಣ ಖರ್ಚಾಗಿದೆ. ಕೈ ಶಾಸಕರು 8 ದಿನಗಳಲ್ಲಿ ಮೂರು ಕಡೆ ತಂಗಿದ್ದು, ಇವರ ಉಸ್ತುವಾರಿಯನ್ನು ಡಿಕೆ ಶಿವಕುಮಾರ್ ಸಹೋದರು ವಹಿಸಿದ್ದರು. ಆದರೆ ಇಷ್ಟು ಮೊತ್ತದ ಹಣವನ್ನು ಖರ್ಚು ಮಾಡಿದ್ದು ಯಾರು ಎಂದು ಇನ್ನು ತಿಳಿದು ಬಂದಿಲ್ಲ. ಆದರೆ ಈ ಹಣವನ್ನು ಅವರೇ ಪಾವತಿ ಮಾಡಿದ್ದಾರಾ ಅಥವಾ ಬೇರೆ ಸಚಿವರು ಕೊಟ್ಟಿದ್ದಾರಾ ಎನ್ನುವುದು ತಿಳಿದು ಬಂದಿಲ್ಲ.

ಆರಂಭದಲ್ಲಿ ಬಿಡದಿಯ ಈಗಲ್ ಟನ್ ರೆಸಾರ್ಟ್ ಗೆ ಹೋಗಿದ್ದ ಶಾಸಕರು ಬಳಿಕ ಬಸ್ ಮಾರ್ಗವಾಗಿ ಹೈದರಾಬಾದ್ ಹೋಟೆಲ್ ಗೆ ತೆರಳಿದ್ದರು. ಬಿಎಸ್‍ವೈ ಬಹುಮತ ಸಾಬೀತು ಪಡಿಸುವ ದಿನವಾದ ಶನಿವಾರ ಬೆಳಗ್ಗೆ ಬೆಂಗಳೂರಿನ ಇಂದಿರಾನಗರದಲ್ಲಿರುವ ಎಂಬೆಸಿ ಗಾಲ್ಫ್ ಬಿಸಿನೆಸ್ ಹೋಟೆಲ್ ಗೆ ಬಂದು ವಿಶ್ರಾಂತಿ ಪಡೆದಿದ್ದು, ಪ್ರಸ್ತುತ ಈ ಹೋಟೆಲ್ ನಲ್ಲಿ ತಂಗಿದ್ದಾರೆ.

ಒಬ್ಬರಿಗೆ ಒಂದು ದಿನದ ಖರ್ಚು ಎಷ್ಟು?
ಬೆಳಗ್ಗೆಯ ತಿಂಡಿ 1,300 ರೂ., ಮಧ್ಯಾಹ್ನದ ಊಟ 1,600 ರೂ., ರಾತ್ರಿ ಊಟ 1,800 ರೂ., ಸಿಂಗಲ್ ಬೆಡ್ ರೂಂ 7 ಸಾವಿರ ರೂ. ಡಬಲ್ ಬೆಡ್ ರೂಂ 14 ಸಾವಿರ ರೂ., ಆಗಿದ್ದು, ಒಬ್ಬರಿಗೆ ದಿನವೊಂದಕ್ಕೆ 20 ರಿಂದ 25 ಸಾವಿರ ರೂ. ಖರ್ಚಾಗಿದೆ. ಶಾಸಕರು ತಂಗಿದ್ದ ಹೋಟೆಲ್ ಗಳು ಎಲ್ಲವೂ ಅಂತಾರಾಷ್ಟ್ರೀಯ ಗುಣಮುಟ್ಟದಾಗಿರುವುದು ವಿಶೇಷ. ಇನ್ನೂ ತಂಗಿದ್ದ ಹೋಟೆಲ್ ನಲ್ಲಿ ಸಭೆ ನಡೆಸಲು ದೊಡ್ಡ ಹಾಲ್ ಬುಕ್ ಮಾಡಿದ್ದ ಕಾರಣ ಬಿಲ್ 4.90 ಕೋಟಿ ರೂ. ತಲುಪಿದೆ ಎಂದು ಮೂಲಗಳು ತಿಳಿಸಿವೆ.

Comments

Leave a Reply

Your email address will not be published. Required fields are marked *