ಸರ್ಕಾರದ ಆರೋಗ್ಯ ಇಲಾಖೆಯ ಬೊಕ್ಕಸದಲ್ಲಿ 1300 ರೂ. ಇಲ್ಲವಂತೆ!

ಚಾಮರಾಜನಗರ: ಸರ್ಕಾರದ ಆರೋಗ್ಯ ಇಲಾಖೆಯಲ್ಲಿ 1300 ರೂ. ಇಲ್ಲವಂತೆ. ಇಂತಹದೊಂದು ಪರಿಸ್ಥಿತಿ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ವೀರನಪುರ ಗ್ರಾಮದಲ್ಲಿ ನಡೆದಿದೆ’.

ವೀರನಪುರದ ಗ್ರಾಮದ ನಿವಾಸಿ ಮಹೇಶ್ ಎಂಬವರ ಪತ್ನಿಗೆ ಹೆರಿಗೆ ಭತ್ಯೆಗೆಂದು ನೀಡಲು 1300 ರೂ. ಇಲ್ಲದಂತಾಗಿದೆ. 2014 ಅಕ್ಟೋಬರ್ ತಿಂಗಳಿನಲ್ಲಿ ಮಹೇಶ್ ಪತ್ನಿ ಭಾಗ್ಯ ಅವರಿಗೆ ಹೆರಿಗೆಯಾಗಿತ್ತು. ಇದೀಗ ಮೂರು ವರ್ಷಗಳ ನಂತರ ಹೆರಿಗೆ ಭತ್ಯೆಯ ಹಣ ಬಂದಿದ್ದು, 1300 ರೂ ಚೆಕ್ ನೀಡಲಾಗಿದೆ.

ಸರ್ಕಾರದಿಂದ ಬಂದ ಚೆಕ್ ನ್ನು ಬ್ಯಾಂಕ್ ಗೆ ತೆಗೆದುಕೊಂಡು ಹೋದ್ರೆ ಸರ್ಕಾರದ ಅಕೌಂಟ್‍ನಲ್ಲಿ ಹಣವಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ಹೇಳಿದ್ದಾರೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಐದು ತಿಂಗಳ ನಂತರ ಹಣ ಬರುತ್ತದೆ ಆಗ ಹಣ ತೆಗೆದುಕೊಳ್ಳಿ ಎಂದು ಹೇಳುತ್ತಾರೆ. ಆದರೆ ವಿಪರ್ಯಾಸ ಎಂದರೆ ಚೆಕ್‍ನಿಂದ ಹಣ ಪಡೆಯುವ ಕಾಲಾವಧಿ ಕೇವಲ ಮೂರು ತಿಂಗಳು ಮಾತ್ರ ಇರುತ್ತದೆ.

ಈ ಕುರಿತು ಮೇಲಧಿಕಾರಿಗಳಿಗೆ ವಿಷಯ ತಿಳಿಸಿದ್ರೆ 1300 ರೂ ಹಣ ತೆಗೆದು ಕೊಳ್ಳಲು ಗುಂಡ್ಲುಪೇಟೆಯಿಂದ ಬೆಂಗಳೂರಿಗೆ ಬನ್ನಿ ಎಂದು ಹೇಳ್ತಿದ್ದಾರೆ ಎಂದು ಮಹೇಶ್ ಹೇಳುತ್ತಾರೆ.

 

Comments

Leave a Reply

Your email address will not be published. Required fields are marked *