ಕರ್ನಾಟಕದಲ್ಲಿ 120 ಕೋಟಿ ರೂ. ಪತ್ತೆ – ವೈರಲ್ ಆಯ್ತು ಫೋಟೋ, ಮೆಸೇಜ್

ಚಿಕ್ಕಬಳ್ಳಾಪುರ: “ಗೌರಿಬಿದನೂರು ತಾಲೂಕು ಆಂಧ್ರದ ಗಡಿಭಾಗದ ತಿಪ್ಪಗಾನಹಳ್ಳಿ ಚೆಕ್ ಪೋಸ್ಟ್ ನಲ್ಲಿ ಚುನಾವಣಾಧಿಕಾರಿಗಳು ವಾಹನಗಳ ತಪಾಸಣೆ ನಡೆಸಿದ ವೇಳೆ 120 ಕೋಟಿ ರೂ. ಸಿಕ್ಕಿದೆ. ಸಿಕ್ಕಿರುವ ಫೋಟೋ ಇಲ್ಲಿದೆ ನೋಡಿ”

ಈ ರೀತಿಯ ಮೆಸೇಜ್ ಜೊತೆಗೆ, ಬೇರೆ-ಬೇರೆಯ ಫೋಟೋಗಳನ್ನ ಜೊತೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಸುದ್ದಿ ಶೇರ್ ಆಗುತ್ತಿದೆ. ದಯವಿಟ್ಟು ಈ ಸುದ್ದಿಯನ್ನು ನಂಬಬೇಡಿ, ಇದೊಂದು ಸುಳ್ಳು ಸುದ್ದಿಯಾಗಿದ್ದು ಯಾರೋ ಕಿಡಿಗೇಡಿಗಳು ತಪಾಸಣೆ ವೇಳೆ ಪತ್ತೆಯಾದ ಬಾಕ್ಸ್ ಗಳಿಗೆ 2 ಸಾವಿರ ಹಣದ ಬಾಕ್ಸ್ ಸೇರಿಸಿ ಅಪ್ಲೋಡ್ ಮಾಡಿದ್ದಾರೆ.

ನಿಜವಾದ ಸುದ್ದಿ ಏನು?
ಗಡಿಭಾಗದಲ್ಲಿ ವಾಹನ ತಪಾಸಣೆ ವೇಳೆ ಚುನಾವಣಾಧಿಕಾರಿಗಳು ಖಾಸಗಿ ಬಸ್ ಒಂದನ್ನು ತಪಾಸಣೆಗೆ ನಡೆಸಿದಾಗ ದಾಖಲೆಯಿಲ್ಲದೆ ಸಾಗಿಸುತ್ತಿದ್ದ ಸೀರೆಗಳ ಬಗ್ಗೆ ವಿಚಾರಣೆ ನಡೆಸಿದ್ದಾರೆ. ಆದರೆ ಇದೇ ಫೋಟೋಗಳನ್ನು ಬಳಸಿಕೊಂಡ ಕೆಲ ಕಿಡಿಗೇಡಿಗಳು ದಾಳಿಯ ಫೋಟೋಗಳ ಜೊತೆಗೆ ಎಲ್ಲೋ ತೆಗೆಯಲಾಗಿರುವ ಹಣದ ಫೋಟೋಗಳನ್ನ ಜೊತೆಗೂಡಿಸಿ 120 ಕೋಟಿ ರೂ. ಪತ್ತೆಯಾಗಿದೆ ಅಂತ ಸುಳ್ಳು ಸುದ್ದಿಯನ್ನು ಸೃಷ್ಟಿಸಿದ್ದಾರೆ.

ಕಿಡಿಗೇಡಿಗಳ ಕೃತ್ಯದಿಂದ ಈ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಈಗ ಸಖತ್ ವೈರಲ್ ಆಗಿದೆ. ಇದರಿಂದ ಚುನಾವಣಾಧಿಕಾರಿಗಳಿಗೆ ಹಿರಿಯ ಅಧಿಕಾರಿಗಳು ಸೇರಿದಂತೆ ಹಲವರು ಕರೆ ಮಾಡಿ ಈ ಮಾಹಿತಿ ನಿಜವೇ ಎಂದು ಮಾಹಿತಿ ಕೇಳುತ್ತಿದ್ದಾರೆ. ಇದರಿಂದಾಗಿ ಪದೆ ಪದೇ ಕರೆಗಳು ಬರುತ್ತಿರುವುದಕ್ಕೆ ಚುನಾವಣಾಧಿಕಾರಿಗಳು ಉತ್ತರಿಸಿ ಹೈರಾಣಾಗಿ ಹೋಗಿದ್ದಾರೆ.

Comments

Leave a Reply

Your email address will not be published. Required fields are marked *