ಸಿಎಂ ಮನೆ ಹೊರಗಿನ ಅಲಂಕಾರಕ್ಕೆ ವರ್ಷಕ್ಕೆ ಕೋಟಿ ರೂ. ಖರ್ಚು

ಬೆಂಗಳೂರು: ಮಾತಲ್ಲಿ ಮಾತ್ರ ನಾನು ಸರಳ ಅನ್ನೋ ಸಿಎಂ ಸಿದ್ದರಾಮಯ್ಯ ಸಿಕ್ಕಾಪಟ್ಟೆ ಕಾಸ್ಟ್ಲಿ ಅನ್ನೋದು ಮತ್ತೆ ಸಾಬೀತಾಗಿದೆ. ಬೆಳ್ಳಿ ತಟ್ಟೆ ಊಟ, ಜಿಮ್ ವಸ್ತು ಖರೀದಿ ಆಯ್ತು. ಈಗ ಮನೆಯ ಹೊರಗಿನ ಅಲಂಕಾರಕ್ಕೆ ಕೋಟಿ ಕೋಟಿ ಹಣ ಖರ್ಚು ಮಾಡಿರೋದು ಆರ್‍ಟಿಐ ಮಾಹಿತಿಯಡಿ ಬಯಲಾಗಿದೆ. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಒಂದು ರಾತ್ರಿಯ ಭೋಜನ ಕೂಟಕ್ಕೆ ಬೆಳ್ಳಿ ತಟ್ಟೆ ಬಳಕೆ, 10 ಲಕ್ಷ ರೂ. ಖರ್ಚು!

ಸಿಎಂ ನಿವಾಸಗಳಾದ ಕಾವೇರಿ, ಕೃಷ್ಣ ನಿವಾಸಗಳ ಹೋರಗಿನ ಚಿಕ್ಕ ಚಿಕ್ಕ ಕೆಲಸಕ್ಕೂ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ದುಬಾರಿ ಜೀವನ ನಡೆಸ್ತಿದ್ದಾರೆ. ಕಾವೇರಿ, ಕೃಷ್ಣದ ಕೌಂಪೌಂಡ್‍ಗೆ ಬಣ್ಣ ಬಳಿಯಲು, ಮೇಲ್ಛಾವಣಿ ಸರಿ ಮಾಡಲು, ಕಾರ್ ಗ್ಯಾರೇಜ್ ಸರಿ ಮಾಡಲು, ಮಳೆ ನೀರು ಕೋಯ್ಲು ಅಳವಡಿಸಿಕೊಳ್ಳಲು ಬರೋಬ್ಬರಿ ಒಂದು ಕೋಟಿ ರೂ. ಈ ವರ್ಷಕ್ಕೆ ಖರ್ಚು ಮಾಡಿ ಬಿಂದಾಸ್ ಲೈಫ್ ಲೀಡ್ ಮಾಡ್ತಿದ್ದಾರೆ. ಇದನ್ನೂ ಓದಿ:ಬೆಳ್ಳಿ ತಟ್ಟೆಯಲ್ಲಿ ಸಿಎಂ ಸಿದ್ದರಾಮಯ್ಯ ಉಪಹಾರ ಸೇವನೆ- ಶಾಸಕ ಕೆ.ಎನ್ ರಾಜಣ್ಣರಿಂದ ರಾಜಾತಿಥ್ಯ

ಒಂದೇ ಕಾಮಗಾರಿಗೆ 2 ಬಾರಿ ಬಿಲ್: ಸಿದ್ದರಾಮಯ್ಯ ಅವ್ರು ಮನೆಯ ಹೊರಗಿನ ಅಲಂಕಾರಕ್ಕೆ ಇಷ್ಟು ಖರ್ಚು ಮಾಡಿ ರಾಯಲ್ ಲೈಫ್ ಲೀಡ್ ಮಾಡ್ತಿದ್ರೆ, ಇದ್ರಲ್ಲೂ ಲೋಕೋಪಯೋಗಿ ಇಲಖೆ ಅಧಿಕಾರಗಳು ಗೋಲ್‍ಮಾಲ್ ಮಾಡಿದ್ದಾರೆ. ಸಿಎಂ ಮನೆ ಮುಂದೆ ಎಷ್ಟೋ ಕೆಲಸಗಳು ಆಗದೆ ಬಿಲ್ ಮಾಡಿಕೊಂಡಿದ್ದಾರೆ. ಪೊಲೀಸ್ ಚೌಕಿ ನಿರ್ಮಾಣದ ಹೆಸರಲ್ಲಿ, ಇನ್ನಿತರ ಕೆಲಸಗಳಿಗೆ ಎರೆಡರೆಡು ಬಾರಿ ಬಿಲ್ ಮಾಡಿ ಹಣ ಲೂಟಿ ಮಾಡಿದ್ದಾರೆ. 5 ಲಕ್ಷ ಮೇಲ್ಪಟ್ಟ ಕಾಮಗಾರಿಗೆ ಟೆಂಡರ್ ಕರೆಯಬೇಕು. ಹೀಗೆ ಮಾಡಿದ್ರೆ ದುಡ್ಡು ಸಿಕ್ಕೊಲ್ಲ ಅಂತ 5 ಲಕ್ಷದ ಒಳಗೆ ಎಲ್ಲಾ ಕಾಮಗಾರಿ ಮುಗಿಸಿ ಜಾಣ್ಮೆಯಿಂದ ಹಣ ಲೂಟಿ ಮಾಡಿದ್ದಾರೆ. ಇದನ್ನೂ ಓದಿ: ಸಿಎಂ ಮನೆ ಕಾಫಿ-ಟೀ, ಬಿಸ್ಕೆಟ್‍ಗೆ ಖರ್ಚಾಗಿದ್ದು ಅರ್ಧ ಕೋಟಿ!

ಈ ಕಾಮಗಾರಿಗಳನ್ನ ಪ್ರತಿ ವರ್ಷ ಮಾಡಬೇಕಾಗಿಲ್ಲ. ಹೀಗಿದ್ರೂ ವರ್ಷ ವರ್ಷ ಲೋಕೋಪಯೋಗಿ ಇಲಾಖೆ ಕೋಟಿ ಖರ್ಚು ಮಾಡ್ತಿದೆ. ಇದೆಲ್ಲ ಸಿಎಂಗೆ ಗೊತ್ತಿದ್ರೂ ಸುಮ್ಮನಿರೋದು ಮಾತ್ರ ವಿಪರ್ಯಾಸ.

https://www.youtube.com/watch?v=cJcjoQcMpe0

Comments

Leave a Reply

Your email address will not be published. Required fields are marked *