RRR ಟ್ರೇಲರ್ ಔಟ್ – ರಾಮ್ ಚರಣ್, ಜ್ಯೂ. ಎನ್‍ಟಿಆರ್ ಆ್ಯಕ್ಷನ್‍ಗೆ ಫ್ಯಾನ್ಸ್ ಫಿದಾ

ಹೈದರಾಬಾದ್: ಟಾಲಿವುಡ್ ನಟ ಜೂನಿಯರ್ ಎನ್‍ಟಿಆರ್ ಹಾಗೂ ನಟ ರಾಮ್ ಚರಣ್ ತೇಜ ಅಭಿನಯದ ಬಹುನಿರೀಕ್ಷಿತ ಆರ್‌ಆರ್‌ಆರ್‌ ಸಿನಿಮಾದ ಟ್ರೇಲರ್ ಇಂದು ಬಿಡುಗಡೆಯಾಗಿದೆ.

ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಎಸ್‍ಎಸ್ ರಾಜಮೌಳಿ ಆ್ಯಕ್ಷನ್ ಕಟ್ ಹೇಳಿರುವ ಆರ್‌ಆರ್‌ಆರ್‌ ಸಿನಿಮಾ ಗ್ರ್ಯಾಂಡ್ ಆಗಿ ಸ್ಕ್ರೀನ್ ಮೇಲೆ ಎಂಟ್ರಿ ಕೊಡಲು ಇನ್ನೂ ಕೇವಲ ಒಂದು ತಿಂಗಳಷ್ಟೇ ಬಾಕಿ ಇದೆ. ಈ ಮಧ್ಯೆ ಚಿತ್ರತಂಡ ಇಂದು ಆರ್‌ಆರ್‌ಆರ್‌ ಸಿನಿಮಾದ ಟ್ರೇಲರ್ ರಿಲೀಸ್ ಮಾಡುವ ಮೂಲಕ ಪ್ರೇಕ್ಷಕರಲ್ಲಿ ಮತ್ತಷ್ಟು ಕೂತುಹಲ ಕೆರಳಿಸಿದೆ. ಇದನ್ನೂ ಓದಿ: 5ನೇ ವರ್ಷದ ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ರಾಧಿಕಾ-ಯಶ್

ಇಂದು ಬೆಳಗ್ಗೆ 11 ಗಂಟೆಗೆ ತಮಿಳು, ತೆಲುಗು, ಮಲಯಾಳಂ, ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಆರ್‌ಆರ್‌ಆರ್‌ ಟ್ರೇಲರ್ ರಿಲೀಸ್ ಆಗಿದ್ದು, ಮೂರು ನಿಮಿಷವಿರುವ ಈ ಟ್ರೇಲರ್‌ನಲ್ಲಿ ಭರ್ಜರಿ ಸ್ಟಂಟ್ ಸೀಕ್ವೆನ್ಸ್‌ಗಳಿದ್ದು, ನೋಡಲು ಸಖತ್ ಆ್ಯಟ್ರಾಕ್ಟಿವ್ ಆಗಿ ದೃಶ್ಯಗಳು ಮೂಡಿಬಂದಿದೆ.

RRR

ಆರ್‌ಆರ್‌ಆರ್‌ ಸಿನಿಮಾ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಂ ಭೀಮ್ ಅವರ ಜೀನಾಧರಿತ ಭಾವನಾತ್ಮಕ ಕಥೆಯಾಗಿದ್ದು, ಟ್ರೇಲರ್‌ನಲ್ಲಿ ಜೂನಿಯರ್ ಎನ್‍ಟಿಆರ್‌ರನ್ನು ಕೊಮರಂ ಭೀಮ್ ಆಗಿ ತಳ ಮಟ್ಟದ ಸಮುದಾಯದ ಜನರನ್ನು ರಕ್ಷಕರಾಗಿ ಕಾಣಿಸಿಕೊಂಡಿದ್ದರೆ, ಭೀಮನಿಗೆ ಪಾಠ ಕಲಿಸಲು ಬ್ರಿಟಿಷ್ ಅಧಿಕಾರಿಯಾಗಿ ರಾಮ್ ಚರಣ್ ತೇಜ ಅವರು ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಂತರ ಇಬ್ಬರು ಸ್ನೇಹಿತರಾಗಿ ಕೊನೆಗೆ ಬ್ರಿಟಿಷರ ವಿರುದ್ಧ ಬಂಡಾಯ ಎದ್ದಿರುವುದನ್ನು ನೋಡಬಹುದಾಗಿದೆ. ಇದನ್ನೂ ಓದಿ: 7 ಬಿಳಿ ಕುದುರೆಗಳ ಜೊತೆ ಮಂಟಪಕ್ಕೆ ವಿಕ್ಕಿ ಕೊಡಲಿದ್ದಾರೆ ರಾಯಲ್ ಎಂಟ್ರಿ

ಟ್ರೇಲರ್‌ನಲ್ಲಿ ಆಲಿಯಾ ಭಟ್, ಅಜಯ್ ದೇವಗನ್, ಶ್ರಿಯಾ ಸರನ್, ಒಲಿವಿಯಾ ಮೋರಿಸ್, ರೇ ಸ್ಟೀವನ್ಸನ್, ಅಲಿಸನ್ ಡೂಡಿ ಮತ್ತು ಸಮುದ್ರಕನಿ ಕಾಣಿಸಿಕೊಂಡಿದ್ದು, ಆರ್‌ಆರ್‌ಆರ್‌ ಸಿನಿಮಾ ಇದೇ 2022ರ ಜನವರಿ 7 ರಂದು ಬಹುಭಾಷೆಗಳಲ್ಲಿ ವಿಶ್ವದ್ಯಾಂತ 1,000 ಕ್ಕೂ ಹೆಚ್ಚು ಸ್ಕ್ರೀನ್ ಮೇಲೆ ತೆರೆಕಾಣಲಿದೆ. ಇದನ್ನೂ ಓದಿ: ಓಟದ ಮೂಲಕ ಅಪ್ಪು ಸಮಾಧಿಗೆ ಹೊರಟ ಮಹಿಳೆಯ ಆರೋಗ್ಯ ವಿಚಾರಿಸಿದ್ರು ರಾಘಣ್ಣ

 

View this post on Instagram

 

A post shared by Jr NTR (@jrntr)

ಈ ಮುನ್ನ ಡಿಸೆಂಬರ್ 3 ರಂದು ಆರ್‌ಆರ್‌ಆರ್‌ ಚಿತ್ರದ ಟ್ರೇಲರ್ ಅನ್ನು ಬಿಡುಗಡೆಗೊಳಿಸಲು ನಿರ್ಮಾಪಕರು ಯೋಜಿಸಿದ್ದರು. ಆದರೆ ಕಾರಣಾಂತರಗಳಿಂದ ನಿರ್ಮಾಪಕರು ಡಿಸೆಂಬರ್ 9 ಕ್ಕೆ ಟ್ರೇಲರ್ ಬಿಡುಗಡೆಗೊಳಿಸುವುದಾಗಿ ಘೋಷಿಸಿದ್ದರು. ಆರ್‌ಆರ್‌ಆರ್‌ ಸಿನಿಮಾ ಡಿವಿವಿ ದಾನಯ್ಯ ಅವರ ಪ್ರೊಡಕ್ಷನ್ ಹೌಸ್ ಡಿವಿವಿ ಎಂಟರ್​​ಟೈನ್ಮೆಂಟ್ ಅಡಿಯಲ್ಲಿ ಬಿಗ್ ಬಜೆಟ್‍ನಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾವಾಗಿದ್ದು, 450 ಕೋಟಿ ರೂ. ವೆಚ್ಚದಲ್ಲಿ ಸಿನಿಮಾ ತಯಾರಾಗಿದೆ ಎನ್ನಲಾಗುತ್ತದೆ.

 

Comments

Leave a Reply

Your email address will not be published. Required fields are marked *