ಆರ್.ಆರ್.ಆರ್ ನಿಖರ ಗಳಿಕೆ ರೂ.611ಕೋಟಿ: ವಾರಾಂತ್ಯಕ್ಕೆ ಸಾವಿರ ಕೋಟಿ ನಿರೀಕ್ಷೆ

ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾದ ಗಳಿಕೆಯ ಬಗ್ಗೆ ಹೆಚ್ಚಾಗಿ ಊಹಾಪೋಹಗಳಿಗೆ ಹರಿದಾಡಿದವು. ಒಂದೇ ದಿನಕ್ಕೆ 100 ಕೋಟಿ, ಮೂರೇ ದಿನಕ್ಕೆ 250 ಕೋಟಿ ಎಂಬ ಸುದ್ದಿಯೂ ಬಂತು. ಆದರೆ, ನಿಖರವಾಗಿ ಇಂತಿಷ್ಟೇ ಹಣ ಬಂದಿದೆ ಎಂದು ಅಧಿಕೃತವಾಗಿ ಚಿತ್ರತಂಡವು ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಇದೀಗ ನಿರ್ಮಾಪಕರೇ ತಮ್ಮ ಚಿತ್ರದ ಗಳಿಕೆಯ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಅಲ್ಲವೆಂದರೆ, ಚೆನ್ನಮ್ಮ, ರಾಯಣ್ಣನೂ ಅಲ್ಲ: ನಟ ಚೇತನ್

ಬುಧವಾರ ನಿರ್ಮಾಪಕರು ನೀಡಿರುವ ಮಾಹಿತಿಯಂತೆ ಈವರೆಗೂ ಆರ್.ಆರ್.ಆರ್ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ವಿಶ್ವದಾದ್ಯಂತ ರೂ. 611 ಕೋಟಿಯಂತೆ. ಇದರಲ್ಲಿ ಭಾರತದಿಂದಲೇ 474 ಕೋಟಿ ಸಂಗ್ರಹವಾಗಿದೆ ಎಂದಿದ್ದಾರೆ. ಕೇವಲ ಹಿಂದಿ ಅವತರಣಿಕೆಯಿಂದಲೇ ಬರೋಬ್ಬರಿ 107 ಕೋಟಿ ಹಣ ಬಂದಿದೆಯಂತೆ. ಇದನ್ನೂ ಓದಿ: ತಂದೆ, ತಾತನ ಹೆಸರು ಬಳಸಿಕೊಳ್ಳದೆ ಜಿಪಂ ಸ್ಥಾನ ಗೆಲ್ಲಲಿ: ನಿಖಿಲ್‍ಗೆ ಸುಮಲತಾ ಸವಾಲು

ಮಾರ್ಚ್ 25 ರಂದು ರಿಲೀಸ್ ಆಗಿರುವ ಈ ಸಿನಿಮಾ ಆರು ದಿನಕ್ಕೆ ಒಟ್ಟು 611 ಕೋಟಿ ರೂಪಾಯಿ ಗಳಿಸಿದ್ದು, ವಾರಾಂತ್ಯಕ್ಕೆ ಸಾವಿರ ಕೋಟಿ ರೂಪಾಯಿ ಮುಟ್ಟುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲ, ವಿದೇಶದಿಂದಲೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಹಾಗಾಗಿ ಹಣ ಮತ್ತಷ್ಟು ಹರಿದು ಬರಲಿದೆ ಎಂದಿದೆ ಡಿವಿವಿ ಎಂಟರ್ ಟೈನ್ ಮೆಂಟ್ ನಿರ್ಮಾಣ ಸಂಸ್ಥೆ. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು

ರಾಜಮೌಳಿ ಅವರ ಹಿಂದಿನ ಎಲ್ಲ ಸಿನಿಮಾಗಳಿಗೂ ಹೋಲಿಸಿದರೆ, ಈ ಪ್ರಮಾಣದಲ್ಲಿ ಹಣ ಹರಿದು ಬಂದಿದ್ದು ಇದೇ ಮೊದಲ ಬಾರಿಗೆ. ಬಾಹುಬಲಿ ಚಿತ್ರಕ್ಕಿಂತಲೂ ಬಾಕ್ಸ್ ಆಫೀಸ್ ಕಲೆಕ್ಷನ್ ಆರ್.ಆರ್.ಆರ್ ನಲ್ಲಿ ಜೋರಾಗಿದೆಯಂತೆ. ತಮಿಳು, ಕನ್ನಡ, ತೆಲುಗು, ಹಿಂದಿ ಮಲಯಾಳಂ ಹೀಗೆ ಬಿಡುಗಡೆಯಾದ ಅಷ್ಟೂ ಭಾಷೆಗಳಲ್ಲೂ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಯಶ್ ನಟನೆಯ ಕೆಜಿಎಫ್ ಸಿನಿಮಾ ಮತ್ತು ತಮಿಳಿನ ವಿಜಯ್ ಅವರ ಚಿತ್ರಗಳು ತೆರೆ ಕಾಣುವತನಕ ಯಾವುದೇ ದೊಡ್ಡ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ. ಹಾಗಾಗಿ ಚಿತ್ರದ ಓಟಕ್ಕೆ ಯಾವುದೇ ಅಡೆತಡೆ ಕಾಣುತ್ತಿಲ್ಲ. ಇದನ್ನೂ ಓದಿ:  ರಶ್ಮಿಕಾ ವೀಡಿಯೋ ನೋಡಿ ಸುಸ್ತಾದ ಅಭಿಮಾನಿಗಳು – ಕೊಡಗಿನ ಬೆಡಗಿಯ ಜಿಮ್ ಕಸರತ್ತು

ಸ್ವಾತಂತ್ರ್ಯ ಪೂರ್ವದಲ್ಲಿ ಕ್ರಾಂತಿಕಾರಿಗಳಾದ ಕೋಮರಾಮ್ ಭೀಮ್ ಮತ್ತು ಸೀತಾರಾಮ ರಾಜು ಅವರನ್ನು ಹೋಲುವಂತಹ ಕಾಲ್ಪನಿಕ ಕಥೆಗಳನ್ನಾಧರಿಸಿ ಈ ಸಿನಿಮಾ ಮಾಡಿದ್ದಾರೆ ರಾಜಮೌಳಿ. ಹಾಗಾಗಿ ಈ ಸಿನಿಮಾ ಕಥೆಯಿಂದಲೂ ಮತ್ತು ಮೇಕಿಂಗ್ ನಿಂದಲೂ ಗಮನ ಸೆಳೆದಿದೆ.

Comments

Leave a Reply

Your email address will not be published. Required fields are marked *