ಫಸ್ಟ್ ಡೇ ಕಲೆಕ್ಷನ್ RRR ದಾಖಲೆ – ಬಾಕ್ಸ್ ಆಫೀಸ್ ಕಿಂಗ್ ರಾಜಮೌಳಿ

ಹೈದರಾಬಾದ್: ಬಾಹುಬಲಿ ನಿರ್ದೇಶಕ ಎಸ್.ಎಸ್. ರಾಜಮೌಳಿ ಸಾರಥ್ಯದಲ್ಲಿ ಮೂಡಿ ಬಂದಿರುವ ಆರ್‌ಆರ್‌ಆರ್ ಸಿನಿಮಾ ಭಾರತದ ಇತಿಹಾಸದಲ್ಲಿಯೇ ಹೊಸ ದಾಖಲೆ ಸೃಷ್ಟಿಸಿದೆ.

ಶುಕ್ರವಾರವಷ್ಟೇ ಬಿಡುಗಡೆಯಾದ ಆರ್‌ಆರ್‌ಆರ್ ಸಿನಿಮಾ ಮೊದಲ ದಿನದಂದೇ ಎಲ್ಲಾ ಭಾಷೆಗಳಿಂದಲೂ 240 ಕೋಟಿ ಕಲೆಕ್ಷನ್ ಮಾಡಿದೆ. ಇದನ್ನೂ ಓದಿ: ಡ್ಯಾನ್ಸ್ ಮಾಸ್ಟರ್‌ಗೆ ದುಬಾರಿ ಗಿಫ್ಟ್ ಕೊಟ್ಟ ಕಿಚ್ಚ

ಈ ಹಿಂದೆ ರಾಜಮೌಳಿ ನಿರ್ದೇಶಿಸಿದ್ದ ನಟ ಪ್ರಭಾಸ್ ಅಭಿನಯ ಬಾಹುಬಲಿ-2 ಸಿನಿಮಾದ ಮೊದಲ ದಿನದ ಕಲೆಕ್ಷನ್‍ನನ್ನು ಆರ್‌ಆರ್‌ಆರ್ ಸಿನಿಮಾ ಬ್ರೇಕ್ ಮಾಡಿದೆ. ನಟ ರಾಮ್‍ಚರಣ್ ತೇಜ ಹಾಗೂ ಜೂ.ಎನ್‍ಟಿಆರ್ ಇದೇ ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ಅಭಿನಯಿಸಿದ್ದು, ಆರ್‌ಆರ್‌ಆರ್ ಸಿನಿಮಾವು ಮೊದಲ ದಿನವೇ ಕೇವಲ ತೆಲುಗಿನ ವಿವಿಧ ಪಾಂತ್ಯಗಳಲ್ಲಿ ಸುಮಾರು 120 ಕೋಟಿ ರೂ.ಗಿಂತಲೂ ಹೆಚ್ಚು ಮೊತ್ತವನ್ನು ಗಳಿಸುವ ಮೂಲಕ ಬಾಕ್ಸ್ ಆಫೀಸ್‍ನಲ್ಲಿ ಧೂಳೆಬ್ಬಿಸಿದೆ.

ವಿಶ್ವದ್ಯಂತ ನಾಲ್ಕು ಸಾವಿರಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ತೆರೆಕಂಡಿರುವ ಆರ್‌ಆರ್‌ಆರ್ ಸಿನಿಮಾ ತೆಲುಗಿನಲ್ಲಿ ಮಾತ್ರವಲ್ಲದೇ ತಮಿಳಿನಲ್ಲಿ 10 ಕೋಟಿ, ಹಿಂದಿಯಲ್ಲಿ 25 ಕೋಟಿ, ಕನ್ನಡದಲ್ಲಿ 14 ಕೋಟಿ, ಮಲಯಾಳಂನಲ್ಲಿ 4 ಕೋಟಿ ರೂ.ವನ್ನು ಗಳಿಸಿದೆ. ಜೊತೆಗೆ ಯುಎಸ್‍ಎ, ಯುಕೆ, ಆಸ್ಟ್ರೇಲಿಯಾ, ಕೆನಡಾ ಮತ್ತು ಮಧ್ಯಪ್ರಾಚ್ಯದಲ್ಲಿ ಈ ಚಿತ್ರವು 75 ಕೋಟಿ ರೂ.ಗೂ ಹೆಚ್ಚು ಹಣವನ್ನು ಗಳಿಸಿದೆ ಎಂದು ಹೇಳಲಾಗುತ್ತಿದೆ.

ಸದ್ಯ ಆರ್‌ಆರ್‌ಆರ್ ಸಿನಿಮಾಕ್ಕೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ದೊರೆಯುತ್ತಿದ್ದು, ಎಲ್ಲ ಚಿತ್ರಮಂದಿರಗಳಲ್ಲಿ ಹೌಸ್‍ಫುಲ್ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಎಲ್ಲ ಚಿತ್ರಮಂದಿರಗಳಲ್ಲಿಯೂ ಟಿಕೆಟ್‍ಗಳು ಸೋಲ್ಡ್ ಔಟ್ ಆಗಿದೆ. ಹೀಗಿದ್ದರೂ ಒಡಿಶಾ, ಮಹಾರಾಷ್ಟ್ರ, ಗುಜರಾತ್ ಮತ್ತು ಯುಪಿಯ ಕೆಲವು ಸ್ಥಳಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಇದನ್ನೂ ಓದಿ: ಸಿನಿಜರ್ನಿಯನ್ನ ಕೊನೆಗೊಳಿಸುತ್ತಾರಾ ನಾಟ್ಯಸುಂದರಿ ಸಾಯಿ ಪಲ್ಲವಿ?

ಬಾಹುಬಲಿ ಬಳಿಕ ರಾಜಮೌಳಿ ಅವರು ಆರ್‌ಆರ್‌ಆರ್ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಸಿನಿಮಾದಲ್ಲಿ ರಾಮ್ ಚರಣ್ ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ಮತ್ತು ಜೂನಿಯರ್ ಎನ್‍ಟಿಆರ್ ಕೋಮರಂ ಭೀಮ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಿರ್ಮಾಪಕ ಡಿವಿವಿ ದಾನಯ್ಯ ಚಿತ್ರವನ್ನು ನಿರ್ಮಿಸಿದ್ದು, ಚಿತ್ರದ ಪ್ರಮುಖ ಪಾತ್ರದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್, ಸಮುದ್ರಕನಿ, ಅಜಯ್ ದೇವಗನ್, ರೇ ಸ್ಟೀವನ್ಸನ್, ಅಲಿಸನ್ ಡೂಡಿ ಮತ್ತು ಒಲಿವಿಯಾ ಮೋರಿಸ್ ನಟಿಸಿದ್ದಾರೆ.

Comments

Leave a Reply

Your email address will not be published. Required fields are marked *