RRR ಚಿತ್ರದ ಸೆಟ್‍ನಲ್ಲಿ ಹೀರೋಗೂ ಇದೆ ಐಡಿ ಕಾರ್ಡ್

ಹೈದ್ರಾಬಾದ್: ತೆಲುಗಿನ ಜನಪ್ರಿಯ ನಟ, ಆರ್​ಆರ್​ಆರ್ ಚಿತ್ರದ ನಾಯಕರಲ್ಲೊಬ್ಬರಾದ ಜೂನಿಯರ್ ಎನ್‍ಟಿಆರ್ ಅವರಿಗೆ ಶೂಟಿಂಗ್ ಸೆಟ್‍ನಲ್ಲಿ ಮೊದಲ ಬಾರಿಗೆ ಐಡಿ ಕಾರ್ಡ್ಅನ್ನು ನೀಡಲಾಗಿದೆ.

ಜೂನಿಯರ್ ಎನ್‍ಟಿಆರ್ ಐಡಿ ಕಾರ್ಡ್ ಅನ್ನು ಧರಿಸಿ, ಫೋಟೊಗೆ ಪೋಸ್ ನೀಡಿದ್ದಾರೆ. ಎಲ್ಲರನ್ನೂ ಸೆಳೆದಿರುವುದು ಅವರ ಹಿಂದೆ ಕುಳಿತಿರುವ ರಾಜಮೌಳಿ ಅವರ ಭಂಗಿ. ನನಗೂ ಐಡಿ ಕಾರ್ಡ್ ಇದೆ ಎಂಬ ಭಾವದಲ್ಲಿ ತಮ್ಮ ಐಡಿ ಕಾರ್ಡ್‍ಅನ್ನೂ ರಾಜಮೌಳಿ ಎತ್ತಿ ತೋರಿಸುತ್ತಿದ್ದಾರೆ. ಜೂ.ಎನ್‍ಟಿಆರ್ ಹಂಚಿಕೊಂಡಿರುವ ಮತ್ತೊಂದು ಫೋಟೋದಲ್ಲಿ ತಮ್ಮ ಐಡಿ ಕಾರ್ಡ್‍ನ ಕ್ಲೋಸ್ ಅಪ್ ಫೋಟೋವನ್ನು ಶೇರ್ ಮಾಡಿದ್ದಾರೆ.

 

View this post on Instagram

 

A post shared by Jr NTR (@jrntr)

ಇತ್ತೀಚೆಗೆ ಐಡಿ ಕಾರ್ಡ್ ಧರಿಸಿಯೇ ಇರಲಿಲ್ಲ. ಅದರಲ್ಲೂ ಚಿತ್ರೀಕರಣದ ಸೆಟ್‍ಗಳಲ್ಲಿ ಐಡಿ ಕಾರ್ಡ್ ಧರಿಸಿಯೇ ಇರಲಿಲ್ಲ, ಇದೇ ಮೊದಲ ಬಾರಿಯಾಗಿದೆ ಎಂದು ಜೂನಿಯರ್ ಎನ್‍ಟಿಆರ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಬಿಗ್ ಬಜೆಟ್‍ನಲ್ಲಿ ಆರ್​ಆರ್​ಆರ್ ತಯಾರಾಗುತ್ತಿದ್ದು, ಹಲವಾರು ಕ್ಷೇತ್ರಗಳಲ್ಲಿ ಹೊಸತನ್ನು ಪರಿಚಯಿಸುತ್ತಿದೆ. ಅದಕ್ಕೆ ಜೂನಿಯರ್ ಎನ್‍ಟಿಆರ್ ಅವರಿಗೆ ಐಡಿ ಕಾರ್ಡ್ ಕೊಟ್ಟಿದ್ದನ್ನೂ ಸೇರಿಸಿಕೊಳ್ಳಬಹುದು ಬಿಡಿ ಎಂದು ಅಭಿಮಾನಿಗಳು ಹಾಸ್ಯ ಚಟಾಕಿ ಹಾರಿಸಿದ್ದಾರೆ.

 

View this post on Instagram

 

A post shared by SS Rajamouli (@ssrajamouli)

ರಷ್ಯಾದ ಉಕ್ರೇನ್‍ನಲ್ಲಿ ಚಿತ್ರದ ಮುಖ್ಯ ಭಾಗಗಳನ್ನು ಚಿತ್ರೀಕರಿಸಲು ಚಿತ್ರತಂಡ ಸಿದ್ಧತೆ ನಡೆಸಿದೆ. ಉಕ್ರೇನ್‍ಗೆ ವಿಮಾನ ಲ್ಯಾಂಡ್ ಆಗುವ ಸಂದರ್ಭವನ್ನೂ ಚಿತ್ರತಂಡ ಈ ಮೊದಲು ಹಂಚಿಕೊಂಡಿತ್ತು. ಸುಮಾರು 450ಕೋಟಿ ಬಜೆಟ್‍ನಲ್ಲಿ ತಯಾರಾಗುತ್ತಿರುವ ಈ ಚಿತ್ರವನ್ನು ಅಕ್ಟೋಬರ್ 13ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿದೆ.

Comments

Leave a Reply

Your email address will not be published. Required fields are marked *