ಬೆಂಗಳೂರು: ವಿದ್ವತ್ ಮೇಲೆ ಹಲ್ಲೆ ನಡೆಸಿದ್ದ ಶಾಂತಿನಗರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಮಗ ನಲಪಾಡ್ ಪರಾರಿಯಾಗಲು ಸೌದಿ ವಿಮಾನ ಹತ್ತಲು ಮುಂದಾಗಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.
ಹೌದು. ಪ್ರಕರಣ ನಡೆದ ಕೂಡಲೇ ಪರಾರಿಯಾಗಲು ಸೌದಿಗೆ ಹೋಗಲು ನಲಪಾಡ್ ಮತ್ತು ಆತನ ಗೆಳೆಯರು ಮುಂದಾಗಿದ್ದರು. ಇಲ್ಲಿ ಇದ್ದರೆ ಕಷ್ಟ ಎಂದು ಭಾವಿಸಿ ಕೆಲ ದಿನ ಅಲ್ಲೇ ತಲೆ ಮರೆಸಿಕೊಂಡಿರಲು ತೀರ್ಮಾನ ಮಾಡಿದ್ದ ವಿಚಾರ ಪೊಲೀಸ್ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ.
40 ಗಂಟೆಗಳ ಕಾಲ ನಲಪಾಡ್ ನಾಪತ್ತೆ ಆಗಿದ್ದರೂ ಆತ ಎಲ್ಲಿದ್ದ ಎನ್ನುವ ವಿಚಾರ ಪೊಲೀಸರಿಗೆ ತಿಳಿದಿತ್ತು. ಆದರೆ ಪೊಲೀಸರು ಈ ಪ್ರಕರಣ ಇಷ್ಟು ದೊಡ್ಡದಾಗುತ್ತದೆ ಎಂದು ಊಹಿಸಿರಲಿಲ್ಲ. ಯಾವಾಗ ಪ್ರಕರಣ ದೊಡ್ಡದಾಗತೊಡಗಿತೋ ಆಗ ನಲಪಾಡ್ ಬಂಧಿಸದೇ ಇದ್ದರೆ ಕಷ್ಟ ಎನ್ನುವುದು ಅರಿವಾಗತೊಡಗಿತು.
ಈ ಕಾರಣಕ್ಕೆ ಸೌದಿಗೆ ಹೋಗಲು ಸಿದ್ಧತೆ ನಡೆಸುತ್ತಿದ್ದಾಗ ತಂದೆ ಹ್ಯಾರಿಸ್ ಮಗನಿಗೆ ಶರಣಾಗುವಂತೆ ಸೂಚಿಸಿದ್ದಾರೆ. ತಂದೆಯ ಮಾತಿಗೆ ಒಪ್ಪಿ ನಲಪಾಡ್ ರಿಕ್ಷಾದಲ್ಲಿ ಬಂದು ಕಬ್ಬನ್ ಪಾರ್ಕ್ ಪೊಲೀಸರಿಗೆ ಶರಣಾಗಿದ್ದ.
https://www.youtube.com/watch?v=VzvxyFBQypc

Leave a Reply