ಸಾಯುವ ಕೊನೆ ಘಳಿಗೆಯಲ್ಲಿ ಮಾಸ್ಟರ್ ಪ್ಲಾನ್ ಮಾಡಿದ್ದ ರೌಡಿ ಲಕ್ಷ್ಮಣ್

– ಪೊಲೀಸರಿಂದ ಹೋಟೆಲ್ ಸಿಬ್ಬಂದಿಗೆ ಕ್ಲಾಸ್

ಬೆಂಗಳೂರು: ರೌಡಿ ಲಕ್ಷ್ಮಣನ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಸಾಯುವ ಮುನ್ನ ಲಕ್ಷ್ಮಣ ಮಾಸ್ಟರ್ ಪ್ಲಾನ್ ಮಾಡಿದ್ದನು ಎಂದು ತನಿಖೆ ವೇಳೆ ತಿಳಿದು ಬಂದಿದೆ.

ಮೃತ ರೌಡಿಶೀಟರ್ ಲಕ್ಷ್ಮಣನ ಮೇಲೆ ಅಟ್ಯಾಕ್ ಮಾಡಿ ಆರೋಪಿಗಳು ಒಂದೆರಡು ಮಚ್ಚಿನೇಟು ಹಾಕಿದ್ದರು. ಈ ವೇಳೆ ಹಂತಕರಿಂದ ಬಚಾವಾಗಲು ಲಕ್ಷ್ಮಣ್ ಪ್ಲಾನ್ ಮಾಡಿದ್ದು, ಸ್ಟೇರಿಂಗ್ ಮೇಲೆ ಬಿದ್ದು ಸತ್ತಂತೆ ನಟಿಸಿದ್ದಾನೆ. ಮಚ್ಚಿನ ಏಟಿಗೆ ಲಕ್ಷ್ಮಣ್ ಮೃತಪಟ್ಟಿದ್ದಾನೆ ಎಂದು ತಿಳಿದು ಆರೋಪಿಗಳು ಕಾರು ಹತ್ತಿ ಕುಳಿತಿದ್ದಾರೆ. ಇನ್ನೇನು ಹಂತಕರು ಹೊರಡಬೇಕು ಎನ್ನುವಷ್ಟರಲ್ಲಿ ಲಕ್ಷ್ಮಣ್ ಸ್ಟೇರಿಂಗ್ ನಿಂದ ಎದ್ದಿದ್ದನು. ಇದನ್ನೂ ಓದಿ:   ಜೆಡಿಎಸ್ ನಾಯಕಿಯ ಮಗಳಿಗಾಗಿ ರೌಡಿ ಲಕ್ಷ್ಮಣ್ ಬರ್ಬರ ಕೊಲೆ

ಕಾರಿನಲ್ಲಿ ಲಕ್ಷ್ಮಣ್ ಕುಳಿತಿದ್ದನ್ನು ನೋಡಿದ ರೌಡಿಗಳು, “ಲಕ್ಷ್ಮಣ್ ಬದುಕಿದ್ದಾನೆ. ಲಕ್ಷ್ಮಣ್ ಬದುಕಿದ್ದಾನೆ” ಎಂದು ಕಿರುಚಾಡಿದ್ದಾರೆ. ಕೂಡಲೇ ಎಲ್ಲ ಆರೋಪಿಗಳು ತಮ್ಮ ಕಾರಿನಿಂದ ಇಳಿದು ಲಕ್ಷ್ಮಣ್ ನನ್ನು  ಕಾರಿನಿಂದ ಎಳೆದು ಕೊಲೆ ಮಾಡಿದ್ದಾರೆ. ಲಕ್ಷ್ಮಣನ ಕೊಲೆಗೆ ಎರಡು ಕಾರುಗಳನ್ನ ಬಳಸಲಾಗಿತ್ತು. ಮುಂದಿನಿಂದ ಸ್ಕಾರ್ಪಿಯೊ, ಹಿಂದಿನಿಂದ ಇಂಡಿಕಾ ಕಾರಿನಲ್ಲಿ ರೌಡಿಗಳು ಸ್ಥಳಕ್ಕೆ ಆಗಮಿಸಿದ್ದರು.

ಹೋಟೆಲ್ ಸಿಬ್ಬಂದಿಗೆ ಕ್ಲಾಸ್: ರೌಡಿ ಲಕ್ಷ್ಮಣ್ ಪ್ರಭಾವಿ ಶಾಸಕರ ಹೆಸರು ಹೇಳಿ ರೂಮ್ ಬುಕ್ ಮಾಡುತ್ತಿದ್ದನು. ಪ್ರತೀ ಬಾರಿಯೂ ಹೀಗೆ ಶಾಸಕರ ಹೆಸರು ಹೇಳಿ ರೂಮ್ ಪಡೆಯುತ್ತಿದ್ದನು. ಹೋಟೆಲ್ ಸಿಬ್ಬಂದಿ ಕೂಡ ಯಾವುದೇ ಐಡಿ ಪಡೆಯದೇ ಕಮಕ್ ಕಿಮಿಕ್ ಅನ್ನದೇ ರೂಮ್ ನೀಡುತ್ತಿದ್ದರು. ಈಗ ಸಿಸಿಬಿ ಪೊಲೀಸರು ಒಬ್ಬ ರೌಡಿಶೀಟರ್ ಗೆ ಐಡಿ ಪಡೆಯದೇ ಹೇಗೆ ರೂಮ್ ನೀಡುತ್ತೀರಾ ಎಂದು ಹೋಟೆಲ್ ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *