ಹಾಸನದಲ್ಲಿ ಪುಡಿ ರೌಡಿಗಳ ಹಾವಳಿ – ಬೈಕ್ ನಿಲ್ಲಿಸಿದ ತಕ್ಷಣ ಮತ್ತೊಂದು ಗ್ಯಾಂಗ್‍ನಿಂದ ಅಟ್ಯಾಕ್

ಹಾಸನ: ಕ್ಷುಲ್ಲಕ ಕಾರಣಕ್ಕಾಗಿ ಪುಡಿರೌಡಿಯೊಬ್ಬ ಮತ್ತೋರ್ವ ರೌಡಿಗೆ ಡ್ರ್ಯಾಗರ್‌ನಿಂದ ಹಲ್ಲೆ ಮಾಡಿರುವ ಘಟನೆ ಚನ್ನರಾಯಪಟ್ಟಣದಲ್ಲಿ (Channarayapatna) ನಡೆದಿದೆ.

ಕುಖ್ಯಾತ ರೌಡಿಶೀಟರ್ ಚೇತು ಅಲಿಯಾಸ್ ಮತ್ತು ಬರಗೂರು ವಿಜಿ ಸಹಚರರರಾದ ಯತೀಶ್ ಹಾಗೂ ಅಡಗೂರು ಗ್ರಾಮದ ದಿಲೀಪ್ ನಡುವೆ ಗಲಾಟೆಯಾಗಿದೆ. ಬಳಿಕ ಅಲ್ಲಿಂದ ಇಬ್ಬರೂ ಬೈಕ್‍ನಲ್ಲಿ ತೆರಳಿದ್ದರು. ಶಿವನ ಪಾರ್ಕ್ ಹತ್ತಿರ ಮೂತ್ರ ವಿಸರ್ಜನೆಗೆ ಯತೀಶ್ ಬೈಕ್ ನಿಲ್ಲಿಸಿದ್ದ. ಈ ವೇಳೆ ದಿಲೀಪ್ ಡ್ರ್ಯಾಗರ್‌ನಿಂದ ಯತೀಶ್‍ಗೆ ಇರಿದಿದ್ದಾನೆ. ಇದನ್ನೂ ಓದಿ: ಪೊಲೀಸ್ ವಾಹನಕ್ಕೆ ಬೈಕ್ ಡಿಕ್ಕಿ – ಕಾಲೇಜು ವಿದ್ಯಾರ್ಥಿ ದುರ್ಮರಣ

ದಾಳಿಯಿಂದ ಯತೀಶ್‍ಗೆ ಗಂಭೀರ ಗಾಯಗಳಾಗಿದ್ದು, ಗಾಯಾಳು ಯತೀಶ್‍ಗೆ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದಾಳಿಗೂ ಮುನ್ನ ಯತೀಶ್, ದಿಲೀಪ್ ಮತ್ತು ಕಾರ್ತಿಕ್ ನಡುವಿನ ಮೊಬೈಲ್ ಸಂಭಾಷಣೆ ವೈರಲ್ ಆಗಿದೆ.

ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ತನ್ನ ಮಗಳನ್ನು ಮದುವೆಯಾಗಬೇಕಿದ್ದ ಭಾವಿ ಅಳಿಯನೊಂದಿಗೆ ಮಹಿಳೆ ಜೂಟ್‌