ಖಾಸಗಿ ಸಂಭಾಷಣೆ ಪ್ರಸಾರ ಮಾಡಿದ್ದಕ್ಕೆ ಐಪಿಎಲ್ ಪ್ರಸಾರಕರಿಗೆ ರೋಹಿತ್ ಶರ್ಮಾ ತರಾಟೆ

ಮುಂಬೈ: ಮುಂಬೈ ತಂಡದ ಮಾಜಿ ನಾಯಕ ರೋಹಿತ್‌ ಶರ್ಮಾ (Rohit Sharma) ಅವರು ಐಪಿಎಲ್‌ ಬ್ರಾಡ್‌ಕಾಸ್ಟರ್‌ ಸ್ಟಾರ್‌ ಸ್ಪೋರ್ಟ್ಸ್‌ (Star Sports) ವಿರುದ್ಧ ಕಿಡಿಕಾರಿದ್ದಾರೆ. ಖಾಸಗಿ ಸಂಭಾಷಣೆ ಪ್ರಸಾರ ಮಾಡಿ ಗೌಪ್ಯತೆ ಉಲ್ಲಂಘಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ರೋಹಿತ್‌ ಶರ್ಮಾ, ಕ್ರಿಕೆಟಿಗರ ಜೀವನವು ಎಷ್ಟು ಕಷ್ಟಕರವಾಗಿದೆಯೆಂದರೆ, ಈಗ ನಾವು ನಮ್ಮ ಸ್ನೇಹಿತರು ಮತ್ತು ಸಹೋದ್ಯೋಗಿಗಳೊಂದಿಗೆ, ತರಬೇತಿ ಅಥವಾ ಪಂದ್ಯದ ದಿನಗಳಲ್ಲಿ ಗೌಪ್ಯವಾಗಿ ನಡೆಸುವ ಪ್ರತಿಯೊಂದು ಸಂಭಾಷಣೆಯನ್ನು ಕ್ಯಾಮೆರಾಗಳು ರೆಕಾರ್ಡ್ ಮಾಡುತ್ತಿವೆ ಎಂದು ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ: ಗ್ರೌಂಡ್‌ ಹೊರಗೂ ದಾಖಲೆ ಬರೆದ ನಾಕೌಟ್‌ ಕದನ – ಆರ್‌ಸಿಬಿಗೆ ಮುಂದಿರುವ ಕಠಿಣ ಸವಾಲುಗಳೇನು?

ನನ್ನ ಸಂಭಾಷಣೆಯನ್ನು ರೆಕಾರ್ಡ್ ಮಾಡಬೇಡಿ ಎಂದು ಸ್ಟಾರ್ ಸ್ಪೋರ್ಟ್ಸ್‌ಗೆ ಕೇಳಿಕೊಂಡರೂ, ಅದನ್ನು ಪ್ರಸಾರದಲ್ಲಿ ಪ್ಲೇ ಮಾಡಲಾಗಿತ್ತು. ಅದು ಗೌಪ್ಯತೆಯ ಉಲ್ಲಂಘನೆಯಾಗಿದೆ. ಎಕ್ಸ್‌ಕ್ಲೂಸಿವ್‌ ಕಂಟೆಂಡ್‌ ಹಾಗೂ ಚಾನೆಲ್‌ನ್ನು ಎಂಗೇಜ್‌ ಆಗಿ ಇಡುವುದು ಮತ್ತು ವೀವ್ಸ್‌ಗೆ ಗಮನ ಕೇಂದ್ರೀಕರಿಸುವುದು ಒಂದು ದಿನ ಅಭಿಮಾನಿಗಳು, ಕ್ರಿಕೆಟಿಗರು ಮತ್ತು ಕ್ರಿಕೆಟ್ ನಡುವಿನ ನಂಬಿಕೆಯನ್ನು ಮುರಿಯುತ್ತದೆ ಎಂದು ಹೇಳಿದ್ದಾರೆ.

ರೋಹಿತ್‌ ಶರ್ಮಾ ಈಚೆಗ ಕೆಕೆಆರ್‌ ತಂಡದ ಸದಸ್ಯರೊಂದಿಗೆ ಸಂವಾದ ನಡೆಸುವಾಗ ಹಿಂದೆ ಬಂದ ಕ್ಯಾಮೆರಾಮನ್‌ ತನ್ನನ್ನು ಸೆರೆಹಿಡಿಯುತ್ತಿರುವುದನ್ನು ಕಂಡು ದೂರದಿಂದಲೇ ಕೈಮುಗಿದ ಹಿಟ್‌ ಮ್ಯಾನ್‌, ದಯವಿಟ್ಟು ಮೈಕ್‌ ಆಫ್‌ ಮಾಡಿ ಎಂದು ಮನವಿ ಮಾಡಿದ್ದರು. ಆದರೂ ವೀಡಿಯೋ ಸೋ಼ಷಿಯಲ್‌ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಇದರಿಂದ ಬೇಸರಗೊಂಡಿರುವ ರೋಹಿತ್‌ ಟ್ವೀಟ್‌ ಮಾಡಿ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: Photos Gallery: ಸಂಭ್ರಮದಲ್ಲಿ ಮಿಂದೆದ್ದ ಆರ್‌ಸಿಬಿ – ಭಾವುಕ ಕ್ಷಣಗಳು ಕ್ಯಾಮೆರಾ ಕಣ್ಣಿಗೆ ಸೆರೆ!