ಟೆನ್ನಿಸ್‌ಗೆ ಗುಡ್‍ಬೈ ಹೇಳಿದ ಫೆಡರರ್

ಬರ್ನ್: 20 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ಟೆನ್ನಿಸ್ ಲೆಜೆಂಡ್ ರೋಜರ್ ಫೆಡರರ್(Roger Federer) ತಮ್ಮ ವೃತ್ತಿ ಜೀವನಕ್ಕೆ ವಿದಾಯವನ್ನು ಹೇಳಿದ್ದಾರೆ.

ವಿಶ್ವ ಕಂಡ ಶ್ರೇಷ್ಠ ಟೆನ್ನಿಸ್(Tennis) ಆಟಗಾರರಲ್ಲಿ ಒಬ್ಬರಾದ ಸ್ವಿಜರ್‌ಲ್ಯಾಂಡ್‍ನ ಫೆಡರರ್ ಈ ಬಗ್ಗೆ ಟ್ವೀಟ್ ಮಾಡಿ ನಿವೃತ್ತಿ ಘೋಷಣೆ ಮಾಡಿದ್ದಾರೆ. ಮುಂದಿನ ವಾರ ಆರಂಭವಾಗುವ ಲಾವರ್ ಕಪ್ 2022 ನನ್ನ ಕೊನೆಯ ಪಂದ್ಯ ಎಂದು ಹೇಳಿದ್ದಾರೆ.ಆ ಮೂಲಕ ಜಗತ್ತು ಕಂಡ ಶ್ರೇಷ್ಠ ಆಟಗಾರ ಫೆಡರರ್ 24 ವರ್ಷಗಳ ವೃತ್ತಿ ಜೀವನವನ್ನು ಅಂತ್ಯಗೊಳಿಸಲಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿದ್ದು, ನನ್ನ ಟೆನ್ನಿಸ್ ಕುಟುಂಬಕ್ಕೆ, ನನ್ನ ಪ್ರತಿಸ್ಪರ್ಧಿಗಳು, ಅಭಿಮಾನಿಗಳೊಂದಿಗೆ ಕೆಲವು ಸುದ್ದಿಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ. ಕಳೆದ 3 ವರ್ಷಳಿಂದ ನನಗಾಗಿದ್ದ ಗಾಯಗಳು ಹಾಗೂ ಶಸ್ತ್ರ ಚಿಕಿತ್ಸೆಗಳು ಅನೇಕ ಸವಾಲನ್ನು ನೀಡಿತ್ತು. ಆದರೂ ನಾನು ಸಂಪೂರ್ಣವಾಗಿ ಸ್ಪರ್ಧಾತ್ಮಕವಾಗಿ ಮತ್ತೆ ಟೆನ್ನಿಸ್ ಅಂಗಳಕ್ಕೆ ಮರಳಲು ಶ್ರಮಿಸಿದ್ದೇನೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ನಿವೃತ್ತಿ ಘೋಷಣೆ ಮಾಡುತ್ತಿದ್ದೇನೆ ಎಂದು ಭಾವುಕವಾಗಿ ಟ್ವೀಟ್ ಮಾಡಿದ್ದಾರೆ.

ಫೆಡರರ್ 2003ರಲ್ಲಿ ಮೊದಲ ಬಾರಿಗೆ ವಿಂಬಲ್ಡನ್ ಪ್ರಶಸ್ತಿಯನ್ನು ಗೆದ್ದಿದ್ದರು. ಅದಾದ ಬಳಿಕ 8 ವಿಂಬಲ್ಡನ್, 6 ಆಸ್ಟ್ರೇಲಿಯನ್ ಓಪನ್, 1 ಫ್ರೆಂಚ್ ಓಪನ್ ಮತ್ತು 5 ಯುಎಸ್ ಓಪನ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದನ್ನೂ ಓದಿ: ಸೋಲಿನೊಂದಿಗೆ ಟೆನಿಸ್‍ಗೆ ವಿದಾಯ ಹೇಳಿದ ಸೆರೆನಾ ವಿಲಿಯಮ್ಸ್

ಒಟ್ಟು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದವರ ಪೈಕಿ ಫೆಡರರ್ 3ನೇ ಸ್ಥಾನವನ್ನು ಪಡೆದಿದ್ದಾರೆ. ಮೊದಲ ಎರಡು ಸ್ಥಾನಗಳಲ್ಲಿ ಕ್ರಮವಾಗಿ ರಾಫೆಲ್ ನಡಾಲ್ ಮತ್ತು ನೊವಾಕ್ ಜೊಕೊವಿಕ್ ಇದ್ದಾರೆ. ಇದನ್ನೂ ಓದಿ: ಬಿಕೆ ಹರಿಪ್ರಸಾದ್‌ ಕ್ರಿಶ್ಚಿಯನ್‌ ಆದ್ರೆ ನಮ್ಮದೇನೂ ತಕಾರರಿಲ್ಲ: ಮಾಧುಸ್ವಾಮಿ

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *