ಚಿತ್ರರಂಗವೇ ಅರೆಬರೆ ಬಟ್ಟೆ ಬೇಡುತ್ತದೆ ಎಂದು ನೋವು ಹಂಚಿಕೊಂಡ ರಾಕಿ ಸಾವಂತ್

ರಾಕಿ ಸಾವಂತ್ ಜೀವನದಲ್ಲಿ ಮೈಸೂರು ಹುಡುಗ ಸಿಕ್ಕಿದ ಮೇಲೆ ಅವರ ಬದುಕೇ ಬದಲಾಗಿದೆಯಂತೆ. ಅಲ್ಲದೇ, ಆ ಹುಡುಗನಿಗಾಗಿ ಅವರು ಅಚ್ಚರಿ ಪಡುವಷ್ಟು ಬದಲಾಗಿದ್ದಾರಂತೆ. ಇನ್ನೂ ಬದಲಾಗಲು ಅವರು ಪ್ರಯತ್ನ ಮಾಡುತ್ತಿದ್ದಾರಂತೆ. ಹಾಗಂತ ಅವರೇ ಒಂದು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಇನ್ಮುಂದೆ ತನ್ನ ಹುಡುಗ ಹೇಗೆ ಹೇಳುತ್ತಾನೋ ಹಾಗೆಯೇ ಅವರು ಕೇಳುತ್ತಾರಂತೆ.

ನನ್ನ ಜೀವನಕ್ಕೆ ಆದಿಲ್ ಖಾನ್ ಬಂದ ಮೇಲೆ ಸಾಕಷ್ಟು ಬದಲಾವಣೆ ಆಗಿದೆ. ಯಾವ ಕಾರ್ಯಕ್ರಮದಲ್ಲಿ ಎಂತಹ ಬಟ್ಟೆ ಹಾಕಿಕೊಳ್ಳಬೇಕು ಎಂದು ಅವನೇ ನಿರ್ಧಾರ ಮಾಡುತ್ತಾನೆ. ನಾನು ಅರೆಬರೆ ಬಟ್ಟೆಯನ್ನು ಹಾಕಿಕೊಳ್ಳಲು ಆದಿಲ್ ಮತ್ತು ಅವನ ಕುಟುಂಬ ಒಪ್ಪುವುದಿಲ್ಲ. ಹಾಗಾಗಿ  ಮೈಮುಚ್ಚುವಂತಹ ಬಟ್ಟೆಗಳನ್ನೇ ನಾನು ಧರಿಸುತ್ತೇನೆ. ಅವರ ಕುಟುಂಬ ನನ್ನನ್ನು ಹೇಗೆ ಕಾಣಲು ಬಯಸುತ್ತದೆಯೋ ಹಾಗೆಯೇ ನಾನೂ ಕೂಡ ಬದುಕುತ್ತೇನೆ ಎಂದಿದ್ದಾರೆ. ಇದನ್ನೂ ಓದಿ:ನಿರೂಪಕಿ ಅನುಶ್ರೀಗೆ ಗಿಫ್ಟ್ ನೀಡಿದ ಶಿವರಾಜ್‌ಕುಮಾರ್

ಕಾಸ್ಟ್ಯೂಮ್ ವಿಚಾರವಾಗಿಯೂ ರಾಕಿ ಸಾವಂತ್ ಮಾತನಾಡಿದ್ದು, ಯಾವ ಹುಡುಗಿಯೂ ಎದೆ ಸೀಳು ಕಾಣುವಂತಹ ಬಟ್ಟೆಗಳನ್ನು ಹಾಕಿಕೊಳ್ಳಲು ಇಷ್ಟಪಡುವುದಿಲ್ಲ. ಸಿನಿಮಾ ರಂಗವೇ ಅದನ್ನು ಬೇಡುತ್ತದೆ. ಅದನ್ನು ಮಾಡದೇ ಇದ್ದರೆ ಅವಕಾಶ ಕೂಡ ಸಿಗುವುದಿಲ್ಲ. ನಮ್ಮಂತವರಿಗೆ ಗಾಡ್ ಫಾದರ್ ಇಲ್ಲ. ಹಾಗಾಗಿ ಸಿನಿಮಾ ರಂಗದ ಅಪೇಕ್ಷೆಯಂತೆ ನಾವು ಇರಲೇಬೇಕಾಗುತ್ತದೆ ಎಂದೂ ಅವರು ಈ ವಿಡಿಯೋದಲ್ಲಿ ಹೇಳಿದ್ದಾರೆ. ಆದರೆ, ಇನ್ಮುಂದೆ ತಾವು ಆ ರೀತಿಯಲ್ಲಿ ಇರುವುದಿಲ್ಲ ಎಂದೂ ರಾಕಿ ಸ್ಪಷ್ಟಪಡಿಸಿದ್ದಾರೆ.

Live Tv

Comments

Leave a Reply

Your email address will not be published. Required fields are marked *