ಮೈಸೂರು ಹುಡುಗನಿಗಾಗಿ ಅರೆಬರೆ ಬಟ್ಟೆ ಹಾಕಲ್ಲ ಎಂದ ರಾಕಿ ಸಾವಂತ್

ಮೈಸೂರು ಹುಡುಗನನ್ನು ಪಟಾಯಿಸಿರುವ ಬಾಲಿವುಡ್ ನಟಿ ರಾಕಿ ಸಾವಂತ್, ಅವನ ಜೊತೆ ಇದೀಗ ದುಬೈ ಟ್ರಿಪ್ ಬೇರೆ ಮಾಡಿ ಬಂದಿದ್ದಾರೆ. ದುಬೈ ಪ್ರವಾಸ ಮುಗಿಸಿಕೊಂಡು ತನ್ನ ಹೊಸ ಹುಡುಗನ ಜೊತೆ ಮುಂಬೈ ಏರ್ಪೋಟ್ ನಲ್ಲಿ ಇಳಿದ ರಾಕಿ ಸಾವಂತ್, ಹುಡುಗನ ತೊಳುಗಳನ್ನು ಗಟ್ಟಿಯಾಗಿ ಹಿಡಿದುಕೊಂಡೆ ಕ್ಯಾಮೆರಾಗಳಿಗೆ ಫೋಸು ಕೊಟ್ಟಿದ್ದಾರೆ. ಇದನ್ನೂ ಓದಿ : ಶಾರುಖ್ ಖಾನ್ ಮನೆ ‘ಮನ್ನತ್’ ನೇಮ್ ಪ್ಲೇಟ್ ನಾಪತ್ತೆ: ಇದರ ಹಿಂದಿದೆ ಭಾರೀ ರಹಸ್ಯ

ಅಂದಹಾಗೆ ರಾಕಿ ಡಿವೋರ್ಸ್ ಪಡೆದ ನಂತರ ಮೈಸೂರಿನ ಆದಿಲ್ ಎಂಬ ಹುಡುಗನ ಜೊತೆ ತಿರುಗುತ್ತಿದ್ದಾರೆ. ಮಾಧ್ಯಮಗಳಿಗೆ ಆ ಹುಡುಗನನ್ನು ಲವರ್ ಎಂದೇ ಪರಿಚಯಿಸುತ್ತಿದ್ದಾರೆ. ಈಗಾಗಲೇ ರಾಕಿ ಲವರ್ ಒಂದು ಬಿಎಮ್ ಡಬ್ಲು ಕಾರು ಮತ್ತು ದುಬೈನಲ್ಲಿ ಒಂದು ಮನೆಯನ್ನು ಉಡುಗೊರೆಯಾಗಿ ಕೊಟ್ಟಿದ್ದಾನಂತೆ. ಈ ವಿಷಯವನ್ನು ಸ್ವತಃ ರಾಕಿ ಸಾವಂತ್ ಅವರೇ ಹೇಳಿಕೊಂಡಿದ್ದಾರೆ. ಇದನ್ನೂ ಓದಿ : ನಯನತಾರಾ ಮದುವೆ ದಿನಾಂಕ ಬದಲು, ರೆಸಾರ್ಟ್ ನಲ್ಲಿ ಸಪ್ತಪದಿ ತುಳಿಯಲಿದೆ ಜೋಡಿ

ರಾಕಿ ಸಾವಂತ್ ಅರೆಬರೆ ಬಟ್ಟೆಗಳನ್ನು ಹಾಕಿಕೊಳ್ಳುವುದರಲ್ಲಿ ಫೇಮಸ್. ತುಂಡುಡುಗೆಯಲ್ಲಿಯೇ ಅವರು ಕಾಣಿಸಿಕೊಂಡಿದ್ದು ಹೆಚ್ಚು. ಇದೀಗ ಆ ಬಟ್ಟೆಯೇ ಅವರಿಗೆ ಮುಳುವಾಗಿವೆಯಂತೆ. ಆ ಕುರಿತು ಮಾತನಾಡಿರುವ ರಾಕಿ, ‘ನಮ್ ಆದಿಲ್ ಕುಟುಂಬದವರು ನಾನು ಹಾಕುವ ಬಟ್ಟೆಗಳನ್ನು ಇಷ್ಟ ಪಡುವುದಿಲ್ಲ. ಹಾಗಾಗಿ ನಾನು ತುಂಡುಡುಗೆ ಬಿಟ್ಟು, ತುಂಬುಡುಗೆ ಹಾಕಿಕೊಳ್ಳುತ್ತೇನೆ. ಅವರು ನನ್ನನ್ನು ಹೇಗೆ ನೋಡಲು ಇಷ್ಟ ಪಡುತ್ತಾರೋ ಹಾಗೆಯೇ ಇರುತ್ತೇನೆ’ ಎಂದು ಹೇಳಿದ್ದಾರೆ. ಇದನ್ನೂ ಓದಿ : ರಜನಿಕಾಂತ್ ನನ್ನ ವೈರಿಯಲ್ಲ ಎಂದ ಕಮಲ್ ಹಾಸನ್

ಆದಿಲ್ ಕುಟುಂಬಕ್ಕೆ ರಾಕಿ ಅಂದರೆ ಇಷ್ಟವಿಲ್ಲವಂತೆ. ಆದರೆ, ರಾಕಿಗೆ ಅಪರೂಪಕ್ಕೆ ಎನ್ನುವಂತೆ ಪ್ರೀತಿಸುವ ಹುಡುಗ ಸಿಕ್ಕಿದ್ದಾನೆ. ಹಾಗಾಗಿ ಆ ಹುಡುಗನನ್ನು ಕಳೆದುಕೊಳ್ಳಲು ಅವರಿಗೆ ಇಷ್ಟವಿಲ್ಲವಂತೆ. ಆದಿಲ್ ಕುಟುಂಬ ಇಷ್ಟಪಡುವಂತೆ ಅವರು ಬದುಕುವುದಾಗಿ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *