ಹೊಸ ವರ್ಷಕ್ಕೆ ರಾಕಿಂಗ್ ಸ್ಟಾರ್ ಯಶ್ ಸಂದೇಶ

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹೊಸ ವರ್ಷಕ್ಕೆ ವಿಡಿಯೋ ಮೂಲಕ ತಮ್ಮ ಅಭಿಮಾನಿಗಳಿಗೆ ಸಂದೇಶವೊಂದನ್ನು ನೀಡಿದ್ದಾರೆ.

ಯಶ್ ಹೊಸ ವರ್ಷಕ್ಕೆ ಪೊಲೀಸರ ಜೊತೆಗೂಡಿ ಮದ್ಯಪಾನ ಮಾಡಿ ವಾಹನ ಓಡಿಸುವವರ ವಿರುದ್ಧ ಅಭಿಯಾನ ಶುರು ಮಾಡಿದ್ದಾರೆ. ಮದ್ಯಪಾನ ಮಾಡಿ ವಾಹನ ಓಡಿಸಬಾರದು, ತಮ್ಮ ಕುಟುಂಬದವರು ಪ್ರೀತಿ ಪಾತ್ರರು ನಿಮಗೊಸ್ಕರ ಕಾಯುತ್ತಿರುತ್ತಾರೆ ಎಂದು ಯಶ್ ಸಂದೇಶ ನೀಡಿದ್ದಾರೆ.

ವಿಡಿಯೋದಲ್ಲಿ ಏನಿದೆ?
ಹೊಸ ವರ್ಷ ಪ್ರತಿ ವರ್ಷ ಬರುತ್ತದೆ. ಅದರ ಜೊತೆಗೆ ಹೊಸ ಆಸೆ, ಕನಸು, ಗುರಿ ಹೀಗೆ ಪ್ರತಿಯೊಬ್ಬರು ತಮ್ಮ ಜೀವನವನ್ನು ರೀ-ಸೆಟ್ ಮಾಡಿ ರೀ-ಸ್ಟಾರ್ಟ್ ಮಾಡುವ ಜೋಶ್‍ನಲ್ಲಿ ಇರುತ್ತಾರೆ. ಇದು ಹೊಸತನ ಬರ ಮಾಡಿಕೊಳ್ಳುವ ಸಮಯ ನಿಜ. ಹಾಗಂತ ಎಚ್ಚರ ತಪ್ಪಿ ಕುಡಿದು ವಾಹನ ಓಡಿಸಿದರೆ, ಪಡೆದುಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು. ಒಂದು ದಿನ ಪಾರ್ಟಿ ಮಾಡಿ ಸ್ನೇಹಿತರ ಜೊತೆ ಖುಷಿಯಾಗಿರುವ ಜೋಶ್‍ನಲ್ಲಿ ಮೈ ಮರೆತು ನೀವು ವಾಹನ ಓಡಿಸಿದರೆ, ಅನಾಹುತವಾಗುತ್ತದೆ.

ನಿಮಗೇನಾದರೂ ಹೆಚ್ಚು ಕಡಿಮೆ ಆದರೆ ನಿಮ್ಮನ್ನು ನಂಬಿಕೊಂಡು ಇರುವವರು ಅಥವಾ ನಿಮ್ಮನ್ನು ಪ್ರೀತಿಸುವವರು ಜೀವನಪರ್ಯಂತ ನೋವು ಅನುಭವಿಸಬೇಕಾಗುತ್ತದೆ. ಇದಕ್ಕೆ ಪರಿಹಾರ ಏನೆಂದರೆ, ಸಾರ್ವಜನಿಕರ ವಾಹನ ಬಳಸಿ, ಕುಡಿದಾಗ ಕ್ಯಾಬ್ ಬುಕ್ ಮಾಡಿ, ಇಲ್ಲವೆಂದರೆ ಕುಡಿದೆ ಇರುವವರಿಗೆ ವಾಹನ ಚಲಾಯಿಸಲು ಕೊಡಿ. ಸ್ಮಾರ್ಟ್ ಆಗಿರಿ. ರಸ್ತೆ ಸುರಕ್ಷಿತೆಗಾಗಿ ಬೆಂಗಳೂರು ಪೊಲೀಸರೊಂದಿಗೆ ಕೈ ಜೋಡಿಸೋಣ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಸೇಫ್ ಆಗಿರಿ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *