ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಬಾಡಿಗೆ ಮನೆ ವಿವಾದದ ಬಗ್ಗೆ ಬುಧವಾರ ಫೇಸ್‍ಬುಕ್ ಲೈವ್ ಬಂದಿದ್ದರು. ಈಗ ಬಿಗ್‍ಬಾಸ್ ವಿಜೇತ ಪ್ರಥಮ್ ಯಶ್ ಅವರ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ.
ಬಿಗ್‍ಬಾಸ್ ಪ್ರಥಮ್ ತಮ್ಮ ಫೇಸ್‍ಬುಕ್‍ನಲ್ಲಿ ಯಶ್ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಬೆಂಗಳೂರಿನ ಪ್ರತಿಷ್ಟಿತ ಹೋಟೆಲ್‍ವೊಂದರಲ್ಲಿ 2 ವರ್ಷದಿಂದ ಯಶ್ ಅವರ ಒಂದು ರೂಮ್(ಆಫೀಸ್) ಇದೆ. ಆ ರೂಮಿಗೆ ತಿಂಗಳಿಗೆ 6 ಲಕ್ಷಕ್ಕೂ ಹೆಚ್ಚು ರೂ. ಬಾಡಿಗೆ ನೀಡುತ್ತಾರೆ.

ಆ ರೂಮಿನಲ್ಲಿ ಯಶ್ ಸಿನಿಮಾದವರನ್ನು ಬಂದರೆ ಕೂರಿಸಿ ಮಾತನಾಡುತ್ತಾರೆ. ಹೊಸಬರನ್ನು ಪ್ರೋತ್ಸಾಹಿಸೋಕೆ ಹಾಗೂ ತನ್ನ ಆಪ್ತ ಸ್ನೇಹಿತರ ಜೊತೆ ಕ್ರಿಕೆಟ್ ಆಡೋಕೆ ಆ ರೂಮನ್ನು ಉಪಯೋಗಿಸುತ್ತಾರೆ. ಹೊಸಬರನ್ನು ಪ್ರೋತ್ಸಾಹಿಸೋಕೆ 6 ಲಕ್ಷ ರೂ. ಬಾಡಿಗೆ ಕಟೋ ಯಶ್ ಅವರಿಗೆ ತನ್ನ ಮನೆ ಬಾಡಿಗೆ ಕಟ್ಟೋಕೆ ದುಡ್ಡಿಲ್ಲ ಎಂದರೆ ಜನ ನಂಬಬೇಕು ಎಂದು ಪ್ರಥಮ್ ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

ಯಶ್ ಈಗ ಪಡೆಯುವ ಸಂಭಾವಣೆ(ನಾನು ಮಾತನಾಡಬಾರದು, ಆದ್ರೂ ಹೇಳ್ತೀನಿ) ಯಶ್ ಈಗ ಪಡೆಯುವ ಸಂಭಾವನೆಯಲ್ಲಿ ಆತರ ಎರಡು ಮನೆ ಖರೀದಿಸಬಹುದು. ಅಂತವರಿಗೆ ಮನೆ ಬಾಡಿಗೆ ಕೊಡೋಕೆ ದುಡ್ಡಿಲ್ಲ(ಆಪಾದನೆಗಳು). ಅಷ್ಟೇ ಅಲ್ಲದೇ ತುಂಬಾ ಸಲ ಅವರನ್ನು ಮೀಟ್ ಮಾಡಲು ಹೋಟೆಲ್‍ಗೆ ಹೋಗಿದ್ದೇನೆ. ಹೊಸಬರನ್ನು ಪ್ರೋತ್ಸಾಹಿಸೋಕೆ ಆರು ಲಕ್ಷ ಬಾಡಿಗೆ ಕಟ್ಟೋ ಯಶ್ ರ ಬಗ್ಗೆ ದಯವಿಟ್ಟು ಅಪಪ್ರಚಾರ ಮಾಡುವುದು ಬೇಡ ಎಂದು ಎಂದು ಪ್ರಥಮ್ ಮನವಿ ಮಾಡಿಕೊಂಡಿದ್ದಾರೆ.

ಯಶ್ ಒಬ್ಬ ಒಳ್ಳೆಯ ಮನುಷ್ಯ. ದಯವಿಟ್ಟು ಕಾಲೆಳೆಯಬೇಡಿ. ತುಂಬಾ ಕಷ್ಟಪಟ್ಟು ಯಶ್ ಆಗಿದ್ದಾರೆ. ಸುಮ್ಮನೆ ಕಲ್ಲು ಹೊಡೆಯಬೇಡಿ. ಈ ಸಮಸ್ಯೆಗೆ ಒಂದೇ ಪರಿಹಾರ. ನನ್ನ ಆರನೇ ಸೆನ್ಸ್ ಹೇಳುತ್ತಿದೆ ಅದಷ್ಟು ಬೇಗ ಮನೆಗೆ ಅವಳಿ-ಜವಳಿ ಮಗು ಬೇಕೆಂದು. ಆಗ ಈ ಸಮಸ್ಯೆ ಆಗಲ್ಲ ಎಂದು ಪ್ರಥಮ್ ಪೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

Leave a Reply