ಇವ್ರು ಹೈಟೆಕ್ ಕಳ್ಳರು-ಗೂಗಲ್ ಮ್ಯಾಪ್ ನೋಡಿ ಕಳ್ಳತನದ ಪ್ಲಾನ್

ನವದೆಹಲಿ: ದಾರಿಗಾಗಿ ಜನರು ಗೂಗಲ್ ಮ್ಯಾಪ್ ಬಳಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ದೆಹಲಿಯಲ್ಲಿ ದೆಹಲಿಯಲ್ಲಿ ಇಬ್ಬರು ಗೂಗಲ್ ಮ್ಯಾಪ್ ನೋಡಿ ಕಳ್ಳತನಕ್ಕೆ ಕೈ ಹಾಕಿ ಈಗ ಪೊಲೀಸರ ಅತಿಥಿಯಾಗಿದ್ದಾರೆ.

ಮುಶೀರ್ ಮತ್ತು ಹರ್ಷ ಗುಪ್ತ ಬಂಧಿತ ಆರೋಪಿಗಳು. ಈ ಇಬ್ಬರು ಗೂಗಲ್ ಮ್ಯಾಪ್ ನೋಡಿಯೇ ಕಳ್ಳತನದ ರೂಪುರೇಷಗಳನ್ನು ರಚಿಸುತ್ತಿದ್ದರು ಎಂಬ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ.

ದೆಹಲಿಯ ಸೆಕ್ಟರ್-8ರಲ್ಲಿ ಶುಕ್ರವಾರ ಪೊಲೀಸರು ಕಳ್ಳತನ ಆರೋಪದ ಮೇಲೆ ಇವರಿಬ್ಬರನ್ನು ಬಂಧಿಸಿದ್ದರು. ಬಂಧಿತರನ್ನು ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಮಾಡಲು ಪ್ಲಾನ್ ಹೇಗೆ ಮಾಡಲಾಗುತ್ತಿತ್ತು ಎಂಬ ವಿಚಾರವನ್ನು ಬಹಿರಂಗಗೊಳಿಸಿದ್ದಾರೆ.

 

ಕಳ್ಳತನಕ್ಕೆ ಹೋಗುವ ಮೊದಲು ಗೂಗಲ್ ಮ್ಯಾಪ್ ನಿಂದ ತಮಗೆ ಬೇಕಾದ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದರು. ಅಂದ್ರೆ ಯಾವ ಮಾರ್ಗದಲ್ಲಿ ಟ್ರಾಫಿಕ್ ಇದೆ. ಎಲ್ಲಿ ಜನರು ವಿರಳವಾಗಿದ್ದರೆ ಎಂಬುದನ್ನು ಪತ್ತೆ ಹಚ್ಚಿ ಅಲ್ಲಿ ಕಳ್ಳತನಕ್ಕೆ ಹೋಗುತ್ತಿದ್ದರು. ಅದೇ ರೀತಿ ಅಲ್ಲಿಂದ ತಮ್ಮ ಅಡ್ಡ ತಲುಪಲು ಇರುವ ಅಡ್ಡದಾರಿಗಳನ್ನು ಸಹ ಗೂಗಲ್ ಮ್ಯಾಪ್ ನಿಂದ ಕಂಡುಹಿಡಿಯುತ್ತಿದ್ದರು. ಇದೇ ತಂತ್ರಗಳನ್ನು ಬಳಸಿ 15 ದಿನಗಳ ಹಿಂದೆ ಶಿಕ್ಷಕಿಯೊಬ್ಬರ ಬಂಗಾರದ ಬಳೆಯನ್ನು ಕದ್ದಿದ್ದರು.

ಕಳ್ಳರು ಕೆಂಪು ಬಣ್ಣದ ಸಾಕ್ಸ್ ಧರಿಸಿ ಕಳ್ಳತನಕ್ಕೆ ಇಳಿಯುತ್ತಿದ್ದರು. ಕೆಂಪು ಬಣ್ಣ ಸಾಕ್ಸ್ ಧರಿಸಿ ಮಾಡಿದ ಕಳ್ಳತನಗಳು ಯಶಸ್ವಿಯಾಗಿವೆಯಂತೆ. ಬಂಧನಕ್ಕೊಳಗಾದಾಗ ಮುಶೀರ್ ಮತ್ತು ಹರ್ಷ ಕೆಂಪು ಸಾಕ್ಸ್ ಧರಿಸಿದ್ದರು.

ಶುಕ್ರವಾರ ಆರೋಪಿಗಳನ್ನು ಬಂಧಿಸಿ ಶನಿವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ ಎಂದು ಸೆಕ್ಟರ್ 20ರ ಪೊಲೀಸ್ ಠಾಣೆಯ ಎಸ್‍ಹೆಚ್‍ಓ ಮನೋಜ್ ಕುಮಾರ್ ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *