ದಸರಾ ವೀಕ್ಷಣೆಗೆ ಬಂದಿದ್ದವರ ಕಾರಿನ ಗಾಜು ಪುಡಿಗೈದು ನಗದು, ಜರ್ಕಿನ್ ಕಳವುಗೈದ್ರು!

ಮೈಸೂರು: ನಾಡಹಬ್ಬ ದಸರಾ ವೀಕ್ಷಣೆಗೆಂದು ಬಂದಿದ್ದ ಪ್ರವಾಸಿಗರ ಕಾರಿನ ಗಾಜನ್ನು ಕಲ್ಲಿನಿಂದ ಗುದ್ದಿ ಪುಡಿಗೈದು ಕಳ್ಳತನ ಮಾಡಿದ ಘಟನೆ ನಡೆದಿದೆ.

ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಚಿಕ್ಕಮಂಗಳೂರು ಜಿಲ್ಲೆಯ ಎನ್.ಆರ್.ಪುರ ನಿವಾಸಿಗಳಾದ ಅಕ್ಷತ್ ಗೌಡ, ಎ.ಆರ್.ಮಂಜು, ರಂಜಿತ್ ಗೌಡ ಹಾಗೂ ವಿಶ್ವನಾಥ್ ಸ್ನೇಹಿತರು ದಸರ ವೀಕ್ಷಣೆಗೆ ಮತ್ತು ಕಾರು ಖರೀದಿಗಾಗಿ ಮೈಸೂರಿಗೆ ಬಂದಿದ್ದರು.

ಅಂತೆಯೇ ಮೈಸೂರಿನ ಒಂಟಿಕೊಪ್ಪಲಿನ ರೆಸಿಡೆನ್ಸಿಯಲ್ಲಿ ವಾಸ್ತವ್ಯವನ್ನು ಹೂಡಿದ್ದರು. ಕಳೆದ ರಾತ್ರಿ ರೆಸಿಡೆನ್ಸಿ ಮುಂದೆ ತಾವು ಬಂದಿದ್ದ ಬುಲೇರೋ ಜೀಪ್‍ನ್ನು ನಿಲ್ಲಿಸಿದ್ದರು. ಮಧ್ಯರಾತ್ರಿ ಸುಮಾರು 2 ಗಂಟೆ ವೇಳೆಗೆ ಕಳ್ಳನೊಬ್ಬ ಕಲ್ಲಿನಿಂದ ಕಾರಿನ ಗಾಜನ್ನು ಒಡೆದು ಕಾರಿನಲ್ಲಿದ್ದ 9 ಸಾವಿರ ರೂ. ನಗದು ಹಣ ಮತ್ತು 6 ಸಾವಿರ ಬೆಲೆಯ ಜರ್ಕಿನನ್ನು ಕದ್ದೊಯ್ದಿದ್ದಾನೆ.

ಈ ಸಂಬಂಧ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://www.youtube.com/watch?v=3DGnF5qr3VQ

Comments

Leave a Reply

Your email address will not be published. Required fields are marked *