ರಸ್ತೆ ಗುಂಡಿಯಲ್ಲಿ ತೆಪ್ಪ ಹಾಕಿ ಮಕ್ಕಳನ್ನು ಕೂರಿಸಿ ಆಕ್ರೋಶ

ದಾವಣಗೆರೆ: ದಶಕಗಳಿಂದ ಗ್ರಾಮದ ರಸ್ತೆ ಗುಂಡಿಮಯವಾಗಿದ್ದು, ಇದರಿಂದ ರೋಸಿಹೋದ ಗ್ರಾಮಸ್ಥರು ರಸ್ತೆಗುಂಡಿಗಳಲ್ಲಿ ದೋಣಿ ಬಿಟ್ಟು ಅದರಲ್ಲಿ ಮಕ್ಕಳನ್ನು ಕೂರಿಸಿ ವಿನೂತನವಾದ ಪ್ರತಿಭಟನೆ ಮಾಡಿದ ಘಟನೆ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಹೀರೇಮ್ಯಾಗಳಗೆರೆ ಗ್ರಾಮದಲ್ಲಿ ನಡೆದಿದೆ.

ದಾವಣಗೆರೆ ಹಾಗೂ ವಿಜಯನಗರ ಜಿಲ್ಲೆಯ ಗಡಿ ಗ್ರಾಮವಾದ ಹೀರೇಮ್ಯಾಗಳಗೆರೆ ಗ್ರಾಮದಲ್ಲಿ ಹಲವು ವರ್ಷಗಳಿಂದ ಸಮಸ್ಯೆ ಅನುಭವಿಸುತ್ತಿದ್ದು, ವಾಹನ ಸವಾರರು ನರಕ ಯಾತನೆ ಅನುಭವಿಸುತ್ತಿದ್ದಾರೆ. ಗ್ರಾಮದ ಎರಡು ಲೋಮೀಟರ್‌ಗಳು ಕೂಡ ಗುಂಡಿಮಯವಾಗಿದ್ದು, ರಸ್ತೆಗಳಲ್ಲಿ ಎರಡು ಅಡಿ ಉದ್ದ ಹತ್ತು ಅಡಿ ಆಗಲದ ಗುಂಡಿಗಳಿವೆ. ಇದನ್ನೂ ಓದಿ: ಕಸ ಸಂಗ್ರಹಣಾ ವಾಹನ ಚಲಾಯಿಸಿ ಜಾಗೃತಿ ಮೂಡಿಸಿದ ಶ್ರೀರಾಮುಲು

ಗುಂಡಿ ರಸ್ತೆಗಳಿಂದ ರೋಸಿಹೋದ ಗ್ರಾಮಸ್ಥರು ಇಂದು ಗುಂಡಿಗಳಲ್ಲಿ ದೋಣಿ ಮೇಲೆ ಮಕ್ಕಳನ್ನು ಕೂರಿಸಿ ತೆಪ್ಪ ಹೊಡೆಯುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು. ಅಲ್ಲದೆ ಹಲವು ಬಾರಿ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮನವಿ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಕೇವಲ ಚುನಾವಣಾಯಲ್ಲಿ ಬರುವ ಜನಪ್ರತಿನಿಧಿಗಳು ನಮ್ಮ ಸಮಸ್ಯೆ ಬಂದರೆ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ. ಪ್ರತಿನಿತ್ಯ ನರಕ ಯಾತನೆಯನ್ನು ವಾಹನ ಸವಾರು ಅನುಭವಿಸುತ್ತಿದ್ದು, ಸಾರ್ವಜನಿಕರು ಜೀವ ಕೈಯಲ್ಲಿಟ್ಟುಕೊಂಡು ಸಂಚರಿಸುವ ಪರಿಸ್ಥಿತಿ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರ್ಪಡೆಗೊಂಡ ಸಚಿವ ಯಶಪಾಲ್ ಆರ್ಯ, ಶಾಸಕ ಸಂಜೀವ್ ಆರ್ಯ

Comments

Leave a Reply

Your email address will not be published. Required fields are marked *