ಕೆಂಗೇರಿಯಲ್ಲಿ ತಡೆಗೋಡೆಗೆ ಬೈಕ್ ಡಿಕ್ಕಿ – ನಾಪತ್ತೆಯಾಗಿದ್ದ ಯುವಕನ ಶವ ರಾಜಕಾಲುವೆಯಲ್ಲಿ ಪತ್ತೆ

ಬೆಂಗಳೂರು: ಕೆಂಗೇರಿಯ (Kengeri) ಬಳಿ ಡಿವೈಡರ್‌ಗೆ ಬೈಕ್ ಡಿಕ್ಕಿಯಾಗಿ (Bike Accident) ವೃಷಭಾವತಿ ಕಾಲುವೆಗೆ ಬಿದ್ದಿದ್ದ ಬೈಕ್ ಸವಾರನ ಮೃತದೇಹ ಪತ್ತೆಯಾಗಿದೆ.

ಮೃತ ಯುವಕನನ್ನು ಬ್ಯಾಟರಾಯನಪುರದ ಹೇಮಂತ್ ಎಂದು ಗುರುತಿಸಲಾಗಿದೆ. ಯುವಕ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಎಂದಿನಂತೆ ಕೆಲಸ ಮುಗಿಸಿ, ಶುಕ್ರವಾರ ರಾತ್ರಿ 10:30ರ ವೇಳೆಗೆ ಮನೆಗೆ ತೆರಳುತ್ತಿದ್ದಾಗ ಬೈಕ್ ಡಿವೈಡರ್‌ಗೆ ಡಿಕ್ಕಿಯಾಗಿ ರಾಜಕಾಲುವೆಗೆ ಬಿದ್ದಿದ್ದ. ಇದೀಗ ಆತನ ಶವ ಪತ್ತೆಯಾಗಿದೆ. ಇದನ್ನೂ ಓದಿ: ಬೆಂಗಳೂರಿನ ಚೆನ್ನಸಂದ್ರ ಅರಣ್ಯ ಪ್ರದೇಶದಲ್ಲಿ ವನಮಹೋತ್ಸವ

ನಾಪತ್ತೆಯಾಗಿದ್ದ ಹೇಮಂತ್‍ಗಾಗಿ ಮೈಸೂರು ರಸ್ತೆಯ ಯೂನಿವರ್ಸಿಟಿ ಗೇಟ್‍ನಿಂದ ಕೆಂಗೇರಿ ಮಾರ್ಗದಲ್ಲಿ ಶೋಧ ನಡೆಸಲಾಗಿತ್ತು. ಆತನ ಶವಕ್ಕಾಗಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸುಮಾರು 20 ಗಂಟೆಗೂ ಹೆಚ್ಚು ಕಾಲ ಹುಡುಕಾಟ ನಡೆಸಿದ್ದರು. ರಾಜಕಾಲುವೆ ಬಳಿ ಇದ್ದ ಗುಂಡಿಯಿಂದ ಈ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಅಪಘಾತ ಸಂಭವಿಸಿದ್ದ ಬೆನ್ನಲ್ಲೇ ಎಚ್ಚೆತ್ತಿರುವ ಬಿಬಿಎಂಪಿ (BBMP) ಫ್ಲೈಓವರ್‌ಗಳ ಮೇಲಿನ ತಡೆಗೋಡೆಗಳ ಎತ್ತರವನ್ನು ಹೆಚ್ಚಿಸುವ ಬಗ್ಗೆ ಚರ್ಚೆ ನಡೆಸಿದೆ. ಇದನ್ನೂ ಓದಿ: ಬಬಲೇಶ್ವರ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಬಾಯ್ಲರ್ ಸ್ಫೋಟ